ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸತ್ತು ರೌಂಡಪ್: ದ್ರೌಪದಿ ಮುರ್ಮು ಕುರಿತು ಕಾಂಗ್ರೆಸ್ ನಾಯಕರ ಟೀಕೆ- ಕ್ಷಮೆಗೆ ಒತ್ತಾಯ

|
Google Oneindia Kannada News

ಹೊಸದಿಲ್ಲಿ ಜುಲೈ 28: ರಾಷ್ಟ್ರಪತಿ ದ್ರೌಪದಿ ಮುರ್ಮು ಕುರಿತು ಕಾಂಗ್ರೆಸ್ ನಾಯಕರ ಟೀಕೆಗಳು ಮತ್ತು ಬೆಲೆ ಏರಿಕೆ ಮತ್ತಿತರ ವಿಷಯಗಳ ಬಗ್ಗೆ ಪ್ರತಿಪಕ್ಷಗಳ ಪ್ರತಿಭಟನೆಯಿಂದಾಗಿ ಮುಂಗಾರು ಅಧಿವೇಶನದ ಒಂಬತ್ತನೇ ದಿನವೂ ಸಂಸತ್ತಿನ ಉಭಯ ಸದನಗಳ ಕಲಾಪಗಳು ಸ್ಥಗಿತಗೊಂಡಿವೆ. ಅಶಿಸ್ತಿನ ವರ್ತನೆಗಾಗಿ ಅಮಾನತುಗೊಂಡಿರುವ 20 ಸಂಸದರು ಪ್ರಸ್ತುತ ಸಂಸತ್ತಿನ ಆವರಣದಲ್ಲಿ ಗಾಂಧಿ ಪ್ರತಿಮೆ ಬಳಿ 50 ಗಂಟೆಗಳ ಕಾಲ ಪ್ರತಿಭಟನೆ ನಡೆಸುತ್ತಿದ್ದಾರೆ.

ಬೆಲೆ ಏರಿಕೆಯ ಚರ್ಚೆಗೆ ಒತ್ತಾಯಿಸಿ ಪ್ರತಿಪಕ್ಷದ ಸದಸ್ಯರು ಸದನದ ಬಾವಿಗಿಳಿದು ಅಧಿವೇಶನ ಆರಂಭವಾದಾಗಿನಿಂದಲೂ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಇದರಿಂದಾಗಿ ಇಂದು (ಜುಲೈ 28) ರಾಜ್ಯಸಭೆಯ ಸದನದಲ್ಲಿ "ಅಶಿಸ್ತಿನ ವರ್ತನೆ" ಗಾಗಿ ಸ್ವತಂತ್ರ ಸಂಸದ ಅಜಿತ್ ಕುಮಾರ್ ಭುಯಾನ್ ಜೊತೆಗೆ ಒಟ್ಟು ಮೂವರು ಸದಸ್ಯರನ್ನು ಅಮಾನತುಗೊಳಿಸುವ ಪ್ರಸ್ತಾಪವನ್ನು ಅಂಗೀಕರಿಸಲಾಯಿತು. ಎಎಪಿಯ ಸುಶೀಲ್ ಕುಮಾರ್ ಗುಪ್ತಾ ಮತ್ತು ಸಂದೀಪ್ ಕುಮಾರ್ ಪಾಠಕ್ ಇದರಲ್ಲಿ ಸೇರಿದ್ದಾರೆ.

ದ್ರೌಪದಿ ಮುರ್ಮು ಬಳಿ ಕ್ಷಮೆಯಾಚಿಸುತ್ತೇನೆ, ಆದರೆ ಬಿಜೆಪಿ ವಂಚಕರ ಕ್ಷಮೆ ಕೇಳಲ್ಲ: ಅಧೀರ್ ರಂಜನ್ ಚೌಧರಿ ದ್ರೌಪದಿ ಮುರ್ಮು ಬಳಿ ಕ್ಷಮೆಯಾಚಿಸುತ್ತೇನೆ, ಆದರೆ ಬಿಜೆಪಿ ವಂಚಕರ ಕ್ಷಮೆ ಕೇಳಲ್ಲ: ಅಧೀರ್ ರಂಜನ್ ಚೌಧರಿ

ಎಎಪಿಯ ಇಬ್ಬರು ಸೇರಿ ಮೂವರು ಸದಸ್ಯರು ರಾಜ್ಯಸಭೆಯಿಂದ ಅಮಾನತು

ಸದನದಲ್ಲಿ 'ಅಶಿಸ್ತಿನ ವರ್ತನೆ' ತೋರಿದ್ದಕ್ಕಾಗಿ ಪಕ್ಷೇತರ ಸಂಸದ ಅಜಿತ್‌ ಕುಮಾರ್‌ ಭುಯಾನ್‌ ಸೇರಿದಂತೆ ಆಮ್ ಆದ್ಮಿ ಪಕ್ಷದ ಸುಶೀಲ್‌ ಕುಮಾರ್‌ ಗುಪ್ತಾ ಹಾಗೂ ಸಂದೀಪ್‌ ಕುಮಾರ್‌ ಪಾಠಕ್‌ ಅವರನ್ನು ಈ ವಾರದ ಕಲಾಪದ ಉಳಿದಿರುವ ಅವಧಿಗೆ ಅಮಾನತುಗೊಳಿಸುವ ಪ್ರಸ್ತಾವನೆಯನ್ನು ರಾಜ್ಯಸಭೆ ಗುರುವಾರ ಅಂಗೀಕರಿಸಿದೆ.

ತೀವ್ರ ಗದ್ದಲದ ನಡುವೆ ಮೊದಲ ಬಾರಿಗೆ ಸದನವನ್ನು ಮುಂದೂಡಿದ ನಂತರವೂ, ಪ್ರತಿಪಕ್ಷ ಸದಸ್ಯರು ಸದನದ ಬಾವಿಯಲ್ಲಿ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದರು.ಫಲಕಗಳನ್ನು ಹಿಡಿದುಕೊಂಡು ಸದನದ ಬಾವಿಯಲ್ಲಿ ಘೋಷಣೆಗಳನ್ನು ಕೂಗಿದ್ದಕ್ಕಾಗಿ ರಾಜ್ಯಸಭೆಯ ಉಪ ಸಭಾಪತಿ ಹರಿವಂಶ್ ಅವರು ಮೂವರು ಸದಸ್ಯರನ್ನು ಹೆಸರಿಸಿದರು.ಬಳಿಕ, ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ವಿ.ಮುರಳೀಧರನ್ ಅವರು, ಕಲಾಪದ ಉಳಿದ ಅವಧಿಗೆ ಮೂವರು ಸದಸ್ಯರನ್ನು ಸದನದಿಂದ ಅಮಾನತುಗೊಳಿಸುವ ಪ್ರಸ್ತಾಪವನ್ನು ಮಂಡಿಸಿದರು.

ರಾಜ್ಯಸಭೆಯ ಉಪಾಧ್ಯಕ್ಷ ಹರಿವಂಶ್ ಅವರು ಫಲಕಗಳನ್ನು ಹಿಡಿದುಕೊಂಡು ಸದನದಲ್ಲಿ ಘೋಷಣೆಗಳನ್ನು ಕೂಗಿದ್ದಕ್ಕಾಗಿ ಸದಸ್ಯರನ್ನು ಅಮಾನತುಗೊಳಿಸಿದ್ದಾರೆ. ರಾಜ್ಯಸಭೆಯಿಂದ ಅಮಾನತುಗೊಂಡಿರುವ ಒಟ್ಟು ಸಂಸದರ ಸಂಖ್ಯೆ ಈಗ 23ಕ್ಕೆ ತಲುಪಿದೆ. ಲೋಕಸಭೆಯ ನಾಲ್ವರು ಕಾಂಗ್ರೆಸ್ ಸಂಸದರನ್ನು ಈ ಹಿಂದೆಯೂ ಅಮಾನತುಗೊಳಿಸಲಾಗಿತ್ತು.

ಪಕ್ಷ ಕ್ಷಮೆಯಾಚಿಸಬೇಕೆಂದು ಬಿಜೆಪಿ ಒತ್ತಾಯ

ನವದೆಹಲಿಯಲ್ಲಿ ನಡೆಯುತ್ತಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಲೋಕಸಭೆಯಲ್ಲಿ ಮಾತನಾಡಿದರು. ಈ ವೇಳೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ಗುರಿಯಾಗಿಸಿಕೊಂಡರು. ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅಧ್ಯಕ್ಷ ದ್ರೌಪದಿ ಮುರ್ಮು ಅವರ ಹೇಳಿಕೆಗೆ ಸಂಬಂಧಿಸಿದಂತೆ ಈಗಾಗಲೇ ಕೆರಳಿದ ಗದ್ದಲಕ್ಕೆ ತುಪ್ಪ ಸುರಿಯಿತು.

ಭಾರತದ ಮೊದಲ ಬುಡಕಟ್ಟು ಅಧ್ಯಕ್ಷರಾದ ಮುರ್ಮು ಅವರನ್ನು "ರಾಷ್ಟ್ರಪತ್ನಿ" ಎಂದು ಚೌಧರಿ ಉಲ್ಲೇಖಿಸಿದ್ದು, ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷದ ಕಾಂಗ್ರೆಸ್ ನಡುವೆ ಮಾತಿನ ಸಮರಕ್ಕೆ ಕಾರಣವಾಯಿತು. ಜೊತೆಗೆ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಕ್ಷಮೆಯಾಚನೆಗೆ ಒತ್ತಾಯಿಸಿದರು.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು 'ರಾಷ್ಟ್ರಪತ್ನಿ' ಎಂದು ಕರೆಯುವ ಮೂಲಕ ಅವರಿಗೆ 'ಅವಮಾನ' ಮಾಡಲಾಗಿದೆ ಎಂದು ಬಿಜೆಪಿ ಗುರುವಾರ ಆರೋಪಿಸಿದೆ. ರಾಷ್ಟ್ರಪತ್ನಿ ಎಂದು ಕರೆದಿರುವ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಕೂಡಲೇ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದೆ.

 'ಕಾಂಗ್ರೆಸ್‌ನಿಂದ ಇತಿಹಾಸ ಸೃಷ್ಟಿಸಿದ ಬುಡಕಟ್ಟು ಮಹಿಳೆಗೆ ಅವಮಾನ'

'ಕಾಂಗ್ರೆಸ್‌ನಿಂದ ಇತಿಹಾಸ ಸೃಷ್ಟಿಸಿದ ಬುಡಕಟ್ಟು ಮಹಿಳೆಗೆ ಅವಮಾನ'

ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಾತನಾಡಿ, ಈ ಪದವನ್ನು ಬಳಸುವುದರಿಂದ ದ್ರೌಪದಿ ಮುರ್ಮು ಮತ್ತು ಅವರ ಕಚೇರಿಯನ್ನು ಅವಮಾನಿಸುತ್ತದೆ. ಅಲ್ಲದೆ ಈ ಹೇಳಿಕೆ ಭಾರತದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂಬುದನ್ನು ಚೌಧರಿ ಅವರು ಚೆನ್ನಾಗಿ ತಿಳಿದಿದ್ದಾರೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷವು ಕೂಡಲೇ ರಾಷ್ಟ್ರಪತಿ ಮುರ್ಮು ಮತ್ತು ದೇಶದ ಕ್ಷಮೆಯಾಚಿಸಬೇಕು. 'ಇತಿಹಾಸ ಸೃಷ್ಟಿಸಿದ ಬಡ ಕುಟುಂಬದ ಬುಡಕಟ್ಟು ಮಹಿಳೆಯನ್ನು ಕಾಂಗ್ರೆಸ್ ನಿರಂತರವಾಗಿ ಅವಮಾನಿಸುತ್ತಿದೆ' ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕರಾಗಿರುವ ಅಧೀರ್ ರಂಜನ್ ಚೌಧರಿ ಅವರು, ತಮ್ಮ ಪಕ್ಷದಿಂದ ನಡೆಸುತ್ತಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುವಾಗ ರಾಷ್ಟ್ರಪತಿ ಎನ್ನುವ ಬದಲು ರಾಷ್ಟ್ರಪತ್ನಿ ಎಂದಿದ್ದರು.

'ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ರಾಷ್ಟ್ರಪತಿ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಅವರನ್ನು ಹೆಸರಿಸಿದಾಗಿನಿಂದಲೂ ಕಾಂಗ್ರೆಸ್, ಮುರ್ಮು ಅವರನ್ನು 'ದುರುದ್ದೇಶಪೂರ್ವಕವಾಗಿ' ಗುರಿಯಾಗಿಸಿಕೊಂಡಿದೆ. ಮತ್ತು ಕಾಂಗ್ರೆಸ್‌ನ ನಾಯಕರು ಅವರನ್ನು 'ಕೈಗೊಂಬೆ' ಮತ್ತು 'ರಬ್ಬರ್ ಸ್ಟಾಂಪ್' ಎಂದು ಕರೆದಿದ್ದರು' ಎಂದು ಆರೋಪಿಸಿದರು.

'ಆದರೆ, ಈಗ ಅವರು ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಆಯ್ಕೆಯಾದ ನಂತರವೂ ಈ ವಾಗ್ದಾಳಿಗಳು ನಿಲ್ಲುವಂತೆ ಕಾಣುತ್ತಿಲ್ಲ. ಚೌಧರಿಯವರ ಈ ಹೇಳಿಕೆಯು ಮುರ್ಮು ಅವರು ಪ್ರತಿನಿಧಿಸುವ ಶ್ರೀಮಂತ ಬುಡಕಟ್ಟು ಪರಂಪರೆಗೆ ಮತ್ತು ಕಠಿಣ ಪರಿಶ್ರಮದ ಮೂಲಕ ಮೇಲೆ ಬರುವ ಬಡವರಿಗೆ ಮಾಡುವ ಅವಮಾನವಾಗಿದೆ' ಎಂದು ಹೇಳಿದರು.

'ರಾಷ್ಟ್ರಪತ್ನಿ' ಹೇಳಿಕೆ ವಿರುದ್ಧ ಪ್ರತಿಭಟನೆ

ರಾಷ್ಟ್ರಪತಿಯನ್ನು ಹಿಂದಿಯಲ್ಲಿ "ರಾಷ್ಟ್ರಪತಿ" ಎಂದು ಕರೆಯಲಾಗುತ್ತದೆ. ರಾಷ್ಟ್ರಪತ್ನಿ ಎನ್ನುವುದು ಬೇರೆಯ ಅರ್ಥವನ್ನು ಸೂಚಿಸುತ್ತದೆ. ಭಾರತದ ಮೊದಲ ಬುಡಕಟ್ಟು ಜನಾಂಗದಿಂದ ರಾಷ್ಟ್ರಪತಿಯಾಗಿರುವ ದ್ರೌಪದಿ ಮುರ್ಮು ಅವರು ಹೋರಾಟಗಳನ್ನು ನಡೆಸಿಕೊಂಡು ಬಂದಂತವರು. ಮತ್ತು ಪಂಚಾಯತ್‌ನಿಂದ ಸಂಸತ್ತಿನವರೆಗೆ ದೇಶದ ಆಕಾಂಕ್ಷೆಗಳನ್ನು ಪ್ರತಿನಿಧಿಸುತ್ತಾರೆ. ಅಧ್ಯಕ್ಷೆ ಸೋನಿಯಾ ಗಾಂಧಿಯವರ ನೇತೃತ್ವದಲ್ಲಿ ಕಾಂಗ್ರೆಸ್ ಪದೇ ಪದೆ ಮಹಿಳೆಯರನ್ನು ಗುರಿಯಾಗಿಸಿಕೊಂಡಿದೆ ಎಂದು ಇರಾನಿ ಆರೋಪಿಸಿದರು.

ಇದಲ್ಲದೆ ಸದನದ ಒಳಗೂ ಕಾಂಗ್ರೆಸ್‌ ನಾಯಕರನ್ನು ತರಾಟೆಗೆ ತೆಗೆದುಕೊಂಡ ಇರಾನಿ, ಸೋನಿಯಾ ಗಾಂಧಿ ಅವರೇ, ನೀವು ದ್ರೌಪದಿ ಮುರ್ಮು ಅವರ ಅವಮಾನವನ್ನು ಅನುಮೋದಿಸಿರುವಿರಿ. ಅತ್ಯುನ್ನತ ಸಾಂವಿಧಾನಿಕ ಹುದ್ದೆಯಲ್ಲಿ ಮಹಿಳೆಯನ್ನು ಅವಮಾನಿಸಲು ಸೋನಿಯಾ ಜಿ ಅನುಮತಿ ನೀಡಿದ್ದಾರೆ ಎಂದು ಹೇಳಿದರು. ಈ ವೇಳೆ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸದನದಲ್ಲಿ ಹಾಜರಿದ್ದರು. ಇದೇ ವಿಚಾರವಾಗಿ ಗದ್ದಲ ಉಂಟಾಯಿತು. ಬಳಿಕ ಸದನವನ್ನು ಮುಂದೂಡಲಾಯಿತು. ಲೋಕಸಭೆ ಮತ್ತು ರಾಜ್ಯಸಭೆಗಳೆರಡನ್ನೂ ಮಧ್ಯಾಹ್ನ 12 ಗಂಟೆಗೆ ಮುಂದೂಡಲಾಯಿತು.

ಇದಕ್ಕೂ ಮುನ್ನ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಬಿಜೆಪಿ ಮಹಿಳಾ ಸಂಸದರು ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಅಧ್ಯಕ್ಷೆ ದ್ರೌಪದಿ ಮುರ್ಮು ಅವರ 'ರಾಷ್ಟ್ರಪತ್ನಿ' ಹೇಳಿಕೆ ವಿರುದ್ಧ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಪಕ್ಷವು ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು.ಒಂದು ರಾಷ್ಟ್ರವಾಗಿ ಈ ಅವಮಾನವನ್ನು ನಾವು ಸಹಿಸುವುದಿಲ್ಲ. ಮಹಿಳೆಯರಾಗಿ ಕೂಡ ನಾವು ಇದನ್ನು ಸಹಿಸುವುದಿಲ್ಲ. ಬುಡಕಟ್ಟು ಜನಾಂಗದ ಮಹಿಳೆ ರಾಷ್ಟ್ರಪತಿಯಾಗಿರುವುದನ್ನು ಸಹಿಸಗ ಅವರಿಗೆ ನಾಚಿಕೆಯಾಗಬೇಕು. ಅವರು ಕೂಡಲೇ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಸಂಸದೆ ರಮಾದೇವಿ ಆಗ್ರಹಿಸಿದರು.ಇದಲ್ಲದೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರ ಹೇಳಿಕೆಯನ್ನು ಖಂಡಿಸಿದರು.

ಸಂಸತ್ತಿನಲ್ಲಿ ಕೇಂದ್ರದಿಂದ ಮಾಹಿತಿ

ಸಂಸತ್ತಿನಲ್ಲಿ ಕೇಂದ್ರದಿಂದ ಮಾಹಿತಿ

ಕಳೆದ ಐದು ವರ್ಷಗಳಲ್ಲಿ ಚೀನಾದಿಂದ ಭಾರತದ ಒಟ್ಟು ಆಮದುಗಳು ಸುಮಾರು 29 ಪ್ರತಿಶತದಷ್ಟು ಹೆಚ್ಚಾಗಿದೆ. 2017-18 ಮತ್ತು 2021-22ಕ್ಕೆ ಹೋಲಿಸಿದರೆ, ಚೀನಾದಿಂದ ವಾರ್ಷಿಕ ಆಮದು USD 89714.23 ಮಿಲಿಯನ್‌ನಿಂದ USD 115,419.96 ಮಿಲಿಯನ್‌ಗೆ ಏರಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್ ಲೋಕಸಭೆಗೆ ಮಾಹಿತಿ ನೀಡಿದ್ದಾರೆ ಎಂದು ANI ವರದಿ ಮಾಡಿದೆ.

English summary
Monsoon Session Of Parliament Day 9 (28th July 2022) Highlights in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X