ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸತ್ ಅಧಿವೇಶನ ಮುಂದುವರಿಕೆ: ವಿಪಕ್ಷದ ಆಯುಧ ದೆಹಲಿ ಹಿಂಸಾಚಾರ

|
Google Oneindia Kannada News

ನವದೆಹಲಿ, ಮಾರ್ಚ್ 01: ಸಂಸತ್ ಬಜೆಟ್ ಅಧಿವೇಶನದ ನಾಳೆಯಿಂದ ಮುಂದುವರೆಯಲಿದ್ದು, ಏಪ್ರಿಲ್ 03 ಕ್ಕೆ ಅಂತ್ಯವಾಗಲಿದೆ.

ನಾಳೆ ದೆಹಲಿ ಹಿಂಸಾಚಾರ ಪ್ರಮುಖವಾಗಿ ಚರ್ಚೆ ಆಗಲಿದ್ದು, ಗದ್ದಲ ಸೃಷ್ಠಿಯಾಗುವ ಸಾಧ್ಯತೆ ಇದೆ. ದೆಹಲಿ ಗಲಭೆ ಕುರಿತಂತೆ ಈಗಾಗಲೇ ವಿಪಕ್ಷಗಳು ಸರ್ಕಾರದ ವಿರುದ್ಧ ಟೀಕಾಪ್ರಹಾರ ಆರಂಭಿಸಿದ್ದು, ಸಂಸತ್‌ನಲ್ಲಿ ನೇರ ದಾಳಿಗೆ ಇಳಿಯಲಿವೆ.

ಕಾಂಗ್ರೆಸ್, ಸಿಪಿಐ ಸೇರಿ ಹಲವು ವಿಪಕ್ಷಗಳು ದೆಹಲಿ ಹಿಂಸಾಚಾರದ ಕುರಿತು ಸರ್ಕಾರವನ್ನು ಪ್ರಶ್ನಿಸಲು ಈಗಾಗಲೇ ತಯಾರಾಗಿ ನಿಂತಿವೆ.

Parliament Budget Session Resume From March 02

ಅಮಿತ್ ಶಾ ರಾಜೀನಾಮೆಗೆ ಸಂಸತ್‌ನಲ್ಲಿ ವಿಪಕ್ಷಗಳು ಒತ್ತಾಯ ಹೇರಲಿದ್ದು, ಗೃಹ ಸಚಿವರ ವಿರುದ್ಧ ವಾಗ್ದಾಳಿ ನಡೆಸಲು ವಿಪಕ್ಷಗಳು ಯೋಜನೆ ರೂಪಿಸಿವೆ.

ಬಜೆಟ್ ಅಧಿವೇಶನದ ಮುಂದುವರೆದ ಭಾಗ ಇದಾಗಿದ್ದು, ಬಜೆಟ್ ಮೇಲಿನ ಚರ್ಚೆಯು ಮುಂದುವರೆಸಲಾಗುತ್ತದೆ ಜೊತೆಗೆ ಉಳಿಕೆ ಮಸೂದೆಗಳಿಗೆ ಅಂಗೀಕಾರ ಪಡೆಯುವ ಕಾರ್ಯವೂ ಆಗಲಿದೆ. ಸಹಕಾರಿ ಬ್ಯಾಂಕ್‌ಗಳನ್ನು ಆರ್‌ಬಿಐ ಅಡಿಗೆ ತರುವ ಪ್ರಮುಕ ಮಸೂದೆ ಅಂಗೀಕಾರಗೊಳ್ಳುವ ಸಾಧ್ಯತೆ ಇದೆ.

English summary
Parliament budget session resumes from March 02. Opposition is set to lambaste on government over Delhi riots.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X