ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹತ್ವದ ಪೌರತ್ವ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಪಾಸ್

|
Google Oneindia Kannada News

ನವದೆಹಲಿ, ಡಿಸೆಂಬರ್ 9: ತೀವ್ರ ವಿರೋಧ, ಪ್ರತಿಭಟನೆಗಳ ನಡುವೆಯೂ ಲೋಕಸಭೆಯಲ್ಲಿ ಮಹತ್ವದ ಪೌರತ್ವ ತಿದ್ದುಪಡಿ ಮಸೂದೆ, 2019 (ಕ್ಯಾಬ್) ಸೋಮವಾರ ಅಂಗೀಕಾರವಾಯಿತು.

ಗೃಹ ಸಚಿವ ಅಮಿತ್ ಶಾ ಮಸೂದೆಯನ್ನು ಮಂಡಿಸಿದರು. ಆಗ ಪ್ರತಿಪಕ್ಷಗಳು ಭಾರಿ ಆಕ್ಷೇಪ ವ್ಯಕ್ತಪಡಿಸಿದರು. ಕೆಲ ಕಾಲ ಚರ್ಚೆಯ ಬಳಿಕ ಸ್ಪೀಕರ್ ಮಸೂದೆಯನ್ನು ಮತಕ್ಕೆ ಹಾಕಿದರು. 293 ಮತಗಳು ಮಸೂದೆ ಪರವಾಗಿ ಬಂದರೆ, 82 ಮತಗಳು ಮಸೂದೆ ವಿರುದ್ಧವಾಗಿ ಬಿದ್ದವು.

ಪೌರತ್ವ ತಿದ್ದುಪಡಿ ಮಸೂದೆ, 2019ರ (ಕ್ಯಾಬ್) ಪ್ರಕಾರ 2014ರ ಡಿ. 31ರ ಒಳಗೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನಗಳಿಂದ ಧಾರ್ಮಿಕ ಶೋಷಣೆಗೆ ಒಳಪಟ್ಟು ಭಾರತಕ್ಕೆ ನಿರಾಶ್ರಿತರಾಗಿ ಬಂದ ಹಿಂದೂ, ಕ್ರೈಸ್ತ, ಸಿಖ್, ಬೌದ್ಧ, ಜೈನ ಮತ್ತು ಪಾರ್ಸಿ ಸಮುದಾಯಗಳ ಜನರನ್ನು ಅಕ್ರಮ ವಲಸಿಗರು ಎಂದು ಪರಿಗಣಿಸದೆ ಅವರಿಗೆ ಭಾರತದ ಪೌರತ್ವ ನೀಡಲಾಗುತ್ತದೆ.

ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಮತ್ತು ಮಿಜೋರಾಂ ಈ ಮಸೂದೆಯಿಂದ ಸಂಪೂರ್ಣವಾಗಿ ವಿನಾಯಿತಿ ಪಡೆದಿವೆ. ಮೇಘಾಲಯ, ಅಸ್ಸಾಂನ ಕೆಲವು ಭಾಗಗಳು ಮತ್ತು ತ್ರಿಪುರಾ ಬಹುತೇಕ ವಿನಾಯಿತಿ ಪಡೆದಿವೆ. ಆದರೆ ಮಣಿಪುರ ಸಂಪೂರ್ಣವಾಗಿ ಈ ಮಸೂದೆ ವ್ಯಾಪ್ತಿಗೆ ಒಳಪಡಲಿದೆ. ಮಣಿಪುರಕ್ಕೆ ಸಂಬಂಧಿಸಿದಂತೆ ಸರ್ಕಾರವು ವಿಶೇಷ ಪ್ರಾತಿನಿಧ್ಯಗಳನ್ನು ಘೋಷಿಸುವ ಸಾಧ್ಯತೆ ಇದೆ.

 Parilament Winter Session Citizenship Amendment Bill Live Updates

ಪೌರತ್ವ ತಿದ್ದುಪಡಿ ಮಸೂದೆಯ ಮಂಡನೆ ವೇಳೆ ಉಂಟಾದ ಆಕ್ಷೇಪಗಳು ಮತ್ತು ಅದಕ್ಕೆ ಗೃಹ ಸಚಿವ ಅಮಿತ್ ಶಾ ನೀಡಿದ ಉತ್ತರಗಳೇನು? ಮುಂದೆ ಓದಿ.

Newest FirstOldest First
1:49 PM, 9 Dec

ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್, ದೇಶವನ್ನು ಧರ್ಮದ ಆಧಾರದಲ್ಲಿ ವಿಭಜಿಸದೆ ಹೋಗಿದ್ದರೆ ಇಂದು ಈ ಮಸೂದೆ ಮಂಡಿಸುವ ಅಗತ್ಯವೇ ಬೀಳುತ್ತಿರಲಿಲ್ಲ. ಕಾಂಗ್ರೆಸ್ ಧರ್ಮದ ಆಧಾರದಲ್ಲಿ ವಿಭಜನೆ ಮಾಡಿತ್ತು- ಅಮಿತ್ ಶಾ
1:45 PM, 9 Dec

ಈ ಮಸೂದೆಯು ರಾಜ್ಯಸಭೆಯಲ್ಲಿ ಅಂಗೀಕಾರವಾದರೆ ಎಲ್ಲಾ ಹಿಂದೂಗಳೂ ಎನ್‌ಆರ್‌ಸಿಯಿಂದ ಹೊರತಾಗಿ ಭಾರತದ ಪೌರತ್ವ ಪಡೆದುಕೊಳ್ಳಲಿದ್ದಾರೆ. ಒಂದು ವೇಳೆ ಎನ್‌ಆರ್‌ಸಿಯಲ್ಲಿ ಅವರನ್ನು ಸೇರಿಸಲಾಗಿದ್ದರೂ ಅವರನ್ನು ಅಕ್ರಮ ವಲಸಿಗರು ಎಂದು ತಕ್ಷಣವೇ ಘೋಷಿಸುವುದಿಲ್ಲ. ಅವರು ವಿದೇಶಿ ನ್ಯಾಯಮಂಡಳಿಯನ್ನು ಮತ್ತು ಮೇಲಿನ ಕೋರ್ಟ್‌ಗಳ ಮೇಲೇರಬಹುದು.
1:41 PM, 9 Dec

ಪೌರತ್ವ ತಿದ್ದುಪಡಿ ಮಸೂದೆಯು 293 ಪರ ಮತ್ತು 82 ವಿರುದ್ಧ ಮತಗಳೊಂದಿಗೆ ಲೋಕಸಭೆಯಲ್ಲಿ ಅಂಗೀಕಾರಗೊಂಡಿದೆ.
1:40 PM, 9 Dec

ಭಾರತದ ಮೂರು ನೆರೆಯ ದೇಶಗಳಾದ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳು ಇಸ್ಲಾಂ ತಮ್ಮ ದೇಶದ ಕಾನೂನು ಎಂದು ಕರೆದುಕೊಂಡಿವೆ. ದೇಶ ವಿಭಜನೆಯ ವೇಳೆ ನೆಹರೂ-ಲಿಖಾಯತ್ ಒಪ್ಪಂದವು ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗಾಗಿ ನಡೆದಿತ್ತು. ಆದರೆ ಇದು ಭಾರತದ ಹೊರತು ಬೇರೆಲ್ಲೂ ನಡೆಯಲಿಲ್ಲ. ಇದರಿಂದಾಗಿ ಅಲ್ಲಿ ಹಿಂದೂ, ಕ್ರೈಸ್ತ, ಬೌದ್ಧ, ಜೈನ, ಸಿಖ್ ಮತ್ತು ಪಾರ್ಸಿ ಸಮುದಾಯದದ ಜನರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಯಿತು - ಅಮಿತ್ ಶಾ
1:36 PM, 9 Dec

'ನಾವು ದೇಶವನ್ನು ಒಡೆದಿಲ್ಲ. ಅದನ್ನು ಮಾಡಿರುವುದು ಕಾಂಗ್ರೆಸ್. ಮುಸ್ಲಿಂ ಸಮುದಾಯದ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ ಎಂದು ಮಸೂದೆಯಲ್ಲಿ ಎಲ್ಲಿಯೂ ಹೇಳಿಲ್ಲ. ಈ ದೇಶವನ್ನು ಧರ್ಮ ಆಧಾರದಲ್ಲಿ ಒಡೆದಿದ್ದು ಕಾಂಗ್ರೆಸ್. ಈ ಕಾರಣಕ್ಕಾಗಿಯೇ ನಮಗೆ ಈ ಮಸೂದೆ ಬೇಕಾಗಿದೆ- ಅಮಿತ್ ಶಾ
1:03 PM, 9 Dec

ಮಸೂದೆಯ ಗುಣಗಳ ಬಗ್ಗೆ ಸಂಸತ್ ಬಳಿಕ ಚರ್ಚೆ ನಡೆಸಬಹುದು ಎಂದು ಅಮಿತ್ ಶಾ, ವಿರೋಧಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದರು.
12:55 PM, 9 Dec

ಇದು ನಮ್ಮ ಗಣರಾಜ್ಯ ವ್ಯವಸ್ಥೆಯ ಮೂಲಭೂತ ಮೌಲ್ಯಗಳ ಮೇಲಿನ ದಾಳಿಯಾಗಿದೆ- ಕಾಂಗ್ರೆಸ್ ಸಂಸದ ಶಶಿ ತರೂರ್
Advertisement
12:54 PM, 9 Dec

ಈ ಮಸೂದೆಯು ಪ್ರಸ್ತಾವನೆಯಲ್ಲಿ ತಿಳಿಸಲಾಗಿರುವ ಸಂವಿಧಾನದ ಮೂಲ ಆಶಯ ಮತ್ತು ಗುಣಗಳನ್ನೇ ಉಲ್ಲಂಘಿಸಿದೆ. ದೇಶದ ಜಾತ್ಯಾತೀಯ ಮೌಲ್ಯದ ಪ್ರಕಾರ ಪೌರತ್ವವು ಧರ್ಮದ ಆಧಾರದಲ್ಲಿ ಇರಬಾರದು ಎಂದು ಆರ್‌ಎಸ್‌ಪಿಯ ಎನ್‌.ಕೆ. ರಾಮಚಂದ್ರನ್ ಹೇಳಿದರು.
12:51 PM, 9 Dec

ಪೌರತ್ವ ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತಪಡಿಸಿದ ಟಿಎಂಸಿ ಸಂಸದ ಸೌಗತಾ ರಾಯ್, ಸಂವಿಧಾನ ಅಪಾಯದಲ್ಲಿದೆ. ಗೃಹ ಸಚಿವರಿಗೆ ನಿಯಮಗಳ ತಿಳಿವಳಿಕೆ ಏಕಿಲ್ಲ ಎಂದು ಪ್ರಶ್ನಿಸಿದರು.
12:49 PM, 9 Dec

ವಿರೋಧಪಕ್ಷಗಳ ವಿರುದ್ಧ ಹರಿಹಾಯ್ದ ಅಮಿತ್ ಶಾ, ಈ ಮಸೂದೆಯಲ್ಲಿ ಮುಸ್ಲಿಮರ ಹೆಸರನ್ನು ಎಲ್ಲಿಯೂ ಪ್ರಸ್ತಾಪವನ್ನೇ ಮಾಡಿಲ್ಲ. ಸತ್ಯವನ್ನು ತಿರುಚುವ ಪ್ರಯತ್ನ ಮಾಡಬೇಡಿ ಎಂದು ಕಿಡಿಕಾರಿದರು.
12:47 PM, 9 Dec

ಶಿವಸೇನಾ ತನ್ನ ಮುಖವಾಣಿ ಸಾಮ್ನಾದಲ್ಲಿ ಮಸೂದೆಯನ್ನು ಟೀಕಿಸಿತ್ತು. ಅದರ ಜತೆಗೆ ಪೌರತ್ವ ಮಸೂದೆಯಡಿ ಭಾರತೀಯ ಪೌರತ್ವ ನೀಡಲಾಗುವ ವ್ಯಕ್ತಿಗಳಿಗೆ ಮುಂದಿನ 25 ವರ್ಷಗಳವರೆಗೆ ಮತದಾನದ ಹಕ್ಕು ನೀಡಬಾರದು ಎಂದು ಶಿವಸೇನಾ ಆಗ್ರಹಿಸಿದೆ.
12:42 PM, 9 Dec

ಮಹಾರಾಷ್ಟ್ರದಲ್ಲಿ ಬಿಜೆಪಿ ವಿರುದ್ಧ ತಿರುಗಿಬಿದ್ದು ಸೈದ್ಧಾಂತಿಕ ವಿರೋಧಿಗಳೊಂದಿಗೆ ಕೈಜೋಡಿಸಿ ಸರ್ಕಾರ ರಚಿಸಿರುವ ಶಿವಸೇನಾ, ಪೌರತ್ವ ತಿದ್ದುಪಡಿ ಮಸೂದೆಯ ವಿಚಾರದಲ್ಲಿ ಬಿಜೆಪಿಗೆ ಬೆಂಬಲ ನೀಡಿದೆ. ಇದಕ್ಕೂ ಮುನ್ನ ಶಿವಸೇನಾ ಮಸೂದೆಯು ಮತ ಬ್ಯಾಂಕ್ ರಾಜಕಾರಣದ ಗಿಮಿಕ್ ಎಂದು ಹೇಳಿತ್ತು. ಆದರೆ ಯೂ ಟರ್ನ್ ತೆಗೆದುಕೊಂಡಿರುವ ಸೇನಾ, ಅದನ್ನು ಬೆಂಬಲಿಸುವುದಾಗಿ ಹೇಳಿದೆ.
Advertisement
12:38 PM, 9 Dec

ಪೌರತ್ವ ಮಸೂದೆ ವಿರೋಧಿಸಿ ಅಸ್ಸಾಂನಲ್ಲಿ ಈಗಲೇ ಬಂದ್ ಆರಂಭವಾಗಿದ್ದು, ಗುವಾಹಟಿಯಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ.
12:36 PM, 9 Dec

ಈ ಮಸೂದೆಯು ಶೇ 001ರಷ್ಟು ಕೂಡ ದೇಶದಲ್ಲಿನ ಅಲ್ಪಸಂಖ್ಯಾತರ ವಿರೋಧಿಯಾಗಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಸ್ಪಷ್ಟನೆ.
12:34 PM, 9 Dec

'ನಾವು ಎಲ್ಲದಕ್ಕೂ ಉತ್ತರ ನೀಡಲಿದ್ದೇವೆ. ನೀವು (ವಿರೋಧಪಕ್ಷಗಳು) ಸಭಾತ್ಯಾಗ ಮಾಡುವುದಿಲ್ಲ ಎಂದು ನಂಬಿದ್ದೇನೆ' ಎಂದ ಅಮಿತ್ ಶಾ.
12:33 PM, 9 Dec

ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಮಂಗಳವಾರ 12 ಗಂಟೆಗಳ ಅಸ್ಸಾಂ ಬಂದ್‌ಗೆ ಎಡ ಪಂಥೀಯ ಸಂಘಟನೆಗಳು ಕರೆ ನೀಡಿವೆ. ಹಾಗೆಯೇ ಈಶಾನ್ಯ ವಿದ್ಯಾರ್ಥಿಗಳ ಸಂಘಟನೆ 11 ಗಂಟೆಗಳ ಈಶಾನ್ಯ ಬಂದ್‌ಗೆ ಕರೆ ನೀಡಿವೆ.
12:31 PM, 9 Dec

ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಅಸ್ಸಾಂನಲ್ಲಿ ತೀವ್ರ ಪ್ರತಿಭಟನೆ
12:31 PM, 9 Dec

ಇದು ದೊಡ್ಡ ಹಿನ್ನಡೆಯುಂಟು ಮಾಡುವ ಮಸೂದೆ. ಅಲ್ಪಸಂಖ್ಯಾತರನ್ನು ಗುರಿಯನ್ನಾಗಿಸಿಕೊಂಡಿದೆ ಎಂದು ವಿರೋಧಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಆಕ್ಷೇಪ.
12:29 PM, 9 Dec

ಈ ಮಸೂದೆ ಯಾವುದೇ ಅಲ್ಪಸಂಖ್ಯಾತರ ವಿರುದ್ಧವಲ್ಲ. ಸಂಸತ್ ಕಲಾಪದ ವೇಳೆ ಎಲ್ಲ ಪ್ರಶ್ನೆಗಳಿಗೂ ಉತ್ತರಿಸುತ್ತೇನೆ. ಆಗ ಸಭೆಯಿಂದ ಹೊರನಡೆಯುವ ಕೆಲಸ ಮಾಡಬೇಡಿ ಎಂದ ಅಮಿತ್ ಶಾ.
12:29 PM, 9 Dec

ಪ್ರತಿಪಕ್ಷಗಳಿಂದ ತೀವ್ರ ಗದ್ದಲ. ಮಸೂದೆ ಮಂಡನೆಗೆ ವಿರೋಧ.
12:29 PM, 9 Dec

ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಮಂಡನೆ ಅರಂಭಿಸಿದ ಅಮಿತ್ ಶಾ.
12:27 PM, 9 Dec

ಮಸೂದೆ ವಿರೋಧಿಸಿ ಪ್ರತಿಪಕ್ಷಗಳು, ವಿವಿಧ ಸಂಘಟನೆಗಳು ರಾಜಧಾನಿ ದೆಹಲಿ ಸೇರಿದಂತೆ ದೇಶದ ಅನೇಕ ಕಡೆ ಪ್ರತಿಭಟನೆ ನಡೆಸಿವೆ.
12:27 PM, 9 Dec

ಕಾಂಗ್ರೆಸ್, ಶಿವಸೇನಾ, ಸಮಾಜವಾದಿ ಪಕ್ಷ, ಟಿಎಂಸಿ, ಎನ್‌ಸಿಪಿ ಮುಂತಾದ ವಿರೋಧಪಕ್ಷಗಳು ಪೌರತ್ವ ತಿದ್ದುಪಡಿ ಮಸೂದೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಎಐಎಡಿಎಂಕೆ ಈ ಮಸೂದೆಗೆ ಬೆಂಬಲ ವ್ಯಕ್ತಪಡಿಸಿದೆ.
12:27 PM, 9 Dec

ಲೋಕಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಶೀಘ್ರದಲ್ಲಿಯೇ ಪೌರತ್ವ ತಿದ್ದುಪಡಿ ಮಸೂದೆ ಮಂಡನೆ ಮಾಡಲಿದ್ದಾರೆ.

English summary
Parliament Winter Session Live Updates in Kannada: Home Minister Amit Shah to introduce Citizenship Amendment Bill 2019, amid the protest of oppisitions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X