ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್‌ಸಿ ಎಸ್‌ಟಿ ಮೀಸಲಾತಿ ವಿಸ್ತರಣೆ: ಮಸೂದೆ ಅಂಗೀಕಾರ

|
Google Oneindia Kannada News

ನವದೆಹಲಿ, ಡಿಸೆಂಬರ್ 9: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ನೀಡಲಾಗುವ ಮೀಸಲಾತಿಯನ್ನು ಇನ್ನೂ ಹತ್ತು ವರ್ಷಗಳವರೆಗೆ ವಿಸ್ತರಿಸುವ ಸಂವಿಧಾನ ತಿದ್ದುಪಡಿ ಮಸೂದೆ, 2019ಅನ್ನು ಲೋಕಸಭೆಯಲ್ಲಿ ಸೋಮವಾರ ಮಂಡಿಸಲಾಯಿತು.

ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಮಸೂದೆ ಮಂಡಿಸಿದರು. ಆದರೆ, ಆಂಗ್ಲೋ ಇಂಡಿಯನ್ನರಿಗೆ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ನೀಡಲಾಗುವ ಇದೇ ರೀತಿಯ ಮೀಸಲಾತಿಯನ್ನು ವಿಸ್ತರಿಸಿಲ್ಲ.

ಎಸ್ಸಿ/ಎಸ್ಟಿ ಮೀಸಲಾತಿ ಮತ್ತೆ 10 ವರ್ಷಕ್ಕೆ ಮುಂದುವರಿಕೆಎಸ್ಸಿ/ಎಸ್ಟಿ ಮೀಸಲಾತಿ ಮತ್ತೆ 10 ವರ್ಷಕ್ಕೆ ಮುಂದುವರಿಕೆ

ಎಸ್‌ಸಿ ಮತ್ತು ಎಸ್‌ಟಿ ಹಾಗೂ ಆಂಗ್ಲೋ ಇಂಡಿಯನ್ನರಿಗೆ ಕಳೆದ 70 ವರ್ಷಗಳಿಂದ ನೀಡಲಾಗಿರುವ ಮೀಸಲಾತಿಯು 2020ರ ಜನವರಿ 25ಕ್ಕೆ ಅಂತ್ಯಗೊಳ್ಳಲಿದೆ. ವಿವಾದಾತ್ಮಕ ಪೌರತ್ವ (ತಿದ್ದುಪಡಿ) ಮಸೂದೆಯ ಕುರಿತಾದ ಚರ್ಚೆ, ವಿರೋಧಗಳು ನಡೆಯುವ ಸಂದರ್ಭದಲ್ಲಿಯೇ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮಂಡಿಸಲಾಯಿತು. ಇಡೀ ಸಭೆಯ ಗಮನ ಪೌರತ್ವ ತಿದ್ದುಪಡಿ ಮಸೂದೆ ಮೇಲೆ ಕೇಂದ್ರೀಕೃತವಾಗಿದ್ದರಿಂದ ಮೀಸಲಾತಿ ವಿಸ್ತರಣೆ ಮಾಡುವ ಮಸೂದೆ ಹೆಚ್ಚು ಚರ್ಚೆಗೆ ಒಳಗಾಗಲಿಲ್ಲ.

ಆಕ್ಷೇಪ ತಿರಸ್ಕೃತ

ಆಕ್ಷೇಪ ತಿರಸ್ಕೃತ

ಆಂಗ್ಲೋ ಇಂಡಿಯನ್ ಸಮುದಾಯವನ್ನು ಹೊರಗಿಡಲಾಗುತ್ತಿದೆ ಎಂದು ತೃಣಮೂಲ ಕಾಂಗ್ರೆಸ್ ಸಂಸದ ಸುಗತ ರಾಯ್, ಸಂವಿಧಾನದ 126ನೇ ತಿದ್ದುಪಡಿ ಮಸೂದೆಗೆ ಆಕ್ಷೇಪ ವ್ಯಕ್ತಪಡಿಸಿದರು. ಆಂಗ್ಲೋ ಇಂಡಿಯನ್ ಸಮುದಾಯದಲ್ಲಿ ಈಗ ಕೇವಲ 296 ಸದಸ್ಯರಿದ್ದಾರೆ ಎಂದು ಸಚಿವ ರವಿಶಂಕರ್ ಪ್ರಸಾದ್ ಸಮಜಾಯಿಷಿ ನೀಡಿದರು. ರಾಯ್ ಅವರ ಆಕ್ಷೇಪವು ಧ್ವನಿಮತದಿಂದ ತಿರಸ್ಕೃತಗೊಂಡಿತು.

70 ವರ್ಷಗಳಿಂದ ಮೀಸಲಾತಿ

70 ವರ್ಷಗಳಿಂದ ಮೀಸಲಾತಿ

ಈ ಮಸೂದೆಯ ಮೂಲಕ ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿನ ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳ ಮೀಸಲಾತಿಯು 2030ರ ಜನವರಿ 25ರವರೆಗೂ ವಿಸ್ತರಣೆಯಾಗಲಿದೆ. 334ನೇ ವಿಧಿಯ ಅಡಿ ಕಳೆದ 70 ವರ್ಷಗಳಿಂದ ಆಂಗ್ಲೋ ಇಂಡಿಯನ್ ಸೇರಿದಂತೆ ಈ ಸಮುದಾಯಗಳಿಗೆ ಮೀಸಲಾತಿ ನೀಡಲಾಗುತ್ತಿದೆ.

ಮಹತ್ವದ ಪೌರತ್ವ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಪಾಸ್ಮಹತ್ವದ ಪೌರತ್ವ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಪಾಸ್

ಆಂಗ್ಲೋ ಇಂಡಿಯನ್ ನಾಮನಿರ್ದೇಶನ ಮಾಡಿಲ್ಲ

ಆಂಗ್ಲೋ ಇಂಡಿಯನ್ ನಾಮನಿರ್ದೇಶನ ಮಾಡಿಲ್ಲ

ಸಂಸತ್‌ನಲ್ಲಿ 84 ಪರಿಶಿಷ್ಟ ಜಾತಿ ಮತ್ತು 47 ಪರಿಶಿಷ್ಟ ಪಂಗಡಗಳ ಸಮುದಾಯದ ಸದಸ್ಯರಿದ್ದಾರೆ. ದೇಶದಾದ್ಯಂತ ವಿಧಾನಸಭೆಗಳಲ್ಲಿ ಎಸ್‌ಸಿ ಸಮುದಾಯದ 614 ಮತ್ತು ಎಸ್‌ಟಿ ಸಮುದಾಯದ 554 ಸದಸ್ಯರಿದ್ದಾರೆ.

ಲೋಕಸಭೆಗೆ ಇಬ್ಬರು ಆಂಗ್ಲೋ ಇಂಡಿಯನ್ ಸದಸ್ಯರನ್ನು ನಾಮನಿರ್ದೇಶನ ಮಾಡುವ ಅವಕಾಶವಿದೆ. ಆದರೆ ಈ ಅವಧಿಯಲ್ಲಿ ಇದುವರೆಗೂ ಯಾವುದೇ ಸದಸ್ಯರನ್ನು ನಾಮನಿರ್ದೇಶನ ಮಾಡಿಲ್ಲ.

ರಾಜ್ಯಸರ್ಕಾರಗಳಿಂದ ನಿರ್ಧಾರ

ರಾಜ್ಯಸರ್ಕಾರಗಳಿಂದ ನಿರ್ಧಾರ

ಸ್ಪೀಕರ್ ಸೇರಿದಂತೆ ಲೋಕಸಭೆಯಲ್ಲಿ 543 ಸದಸ್ಯರಿದ್ದಾರೆ. ಸಂಸತ್ ಹಾಗೂ ವಿಧಾನಸಭೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ನೀಡಲು ಸಾಂವಿಧಾನಿಕ ತಿದ್ದುಪಡಿ ಮಾಡುವಂತೆ, ಈ ವರ್ಗಗಳಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಲು ಆಯಾ ರಾಜ್ಯ ಸರ್ಕಾರಗಳು ನಿರ್ಧಾರ ತೆಗೆದುಕೊಳ್ಳುತ್ತವೆ.

English summary
Parliament Winter Session: Constitution Amendment Bill was introduced by Union Law minister Ravi Shankar Prasad in Lok Sabha to extend quota of SC, ST in Lok Sabha and state assemblies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X