ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

PAN-ಆಧಾರ್ ಜೋಡಣೆ: ಅಂತಿಮ ಗಡುವು ವಿಸ್ತರಣೆ

|
Google Oneindia Kannada News

ನವದೆಹಲಿ, ಏಪ್ರಿಲ್ 01: ಆಧಾರ್ ಸಂಖ್ಯೆಯನ್ನು PAN ಕಾರ್ಡ್ ನೊಂದಿಗೆ ಜೋಡಿಸಲು ಇದ್ದ ಮಾರ್ಚ್ 31ರ ಗಡುವನ್ನು ಸರ್ಕಾರ ಸೆಪ್ಟೆಂಬರ್ 30 ಕ್ಕೆ ಮುಂದೂಡಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಏಪ್ರಿಲ್ 01 ರಿಂದ ಆದಾಯ ತೆರಿಗೆ ಕಟ್ಟುವವರು ಆದಾಯ ತೆರಿಗೆ ವಿವರದೊಂದಿಗೆ ಪ್ಯಾನ್ ಸಂಖ್ಯೆಯನ್ನು ಜೋಡಿಸುವುದು ಕಡ್ಡಾಯವಾಗಿದೆ.

ಆಧಾರ್ ಗೆ ಸಾಂವಿಧಾನಿಕ ಮಾನ್ಯತೆ: ಯಾರು ಏನಂದರು? ಆಧಾರ್ ಗೆ ಸಾಂವಿಧಾನಿಕ ಮಾನ್ಯತೆ: ಯಾರು ಏನಂದರು?

ಆದರೆ ಮಾರ್ಚ್ 31 ರವರೆಗೆ ಆಧಾರ್-ಪ್ಯಾನ್ ಜೋಡಣೆಗೆ ಇದ್ದ ಗಡುವನ್ನು ಸೆಪ್ಟೆಂಬರ್ 30 ಕ್ಕೆ ಮುಂದೂಡಲಾಗಿದೆ.

PAN-Aadhaar linking: Government extends date by 6 months

ಆಧಾರ್ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತ್ತು. ಆಧಾರ್ ನ ಸಾಂವಿಧಾನಿಕ ಮಾನ್ಯತೆಯನ್ನು ಎತ್ತಿಹಿಡಿದಿದ್ದ ಸುಪ್ರೀಂ ಕೋರ್ಟ್, ಮೊಬೈಲ್ ನಂಬರ್ ಗೆ, ಬ್ಯಾಂಕ್ ಖಾತೆಗೆ, ಶಿಕ್ಷಣ ಸಂಸ್ಥೆಗಳಲ್ಲಿ ಆಧಾರ್ ಕಡ್ಡಾಯ ಮಾಡುವ ಅಗತ್ಯವಿಲ್ಲ ಎಂಬ ಮಹತ್ವದ ಆದೇಶವನ್ನೂ ನೀಡಿತ್ತು.

ಆಧಾರ್ ಸಾಂವಿಧಾನಿಕ ಮಾನ್ಯತೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್ಆಧಾರ್ ಸಾಂವಿಧಾನಿಕ ಮಾನ್ಯತೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

ಈ ಮೂಲಕ ಆಧಾರ್ ಎಲ್ಲದಕ್ಕೂ ಕಡ್ಡಾಯವಲ್ಲ ಎಂದಿತ್ತು. ಆಧಾರ್ ಅನ್ನು ಎಲ್ಲಾ ಅಗತ್ಯ ಗುರುತಿನ ಚೀಟಿಯೊಂದಿಗೆ, ಸೌಲಭ್ಯಗಳೊಂದಿಗೆ ಜೋಡಿಸುವುದರಿಂದ ಖಾಸಗೀತನಕ್ಕೆ ಧಕ್ಕೆಯುಂಟಾಗುತ್ತದೆ ಎಂದು ಕೆಲವರು ಅರ್ಜಿ ಸಲ್ಲಿಸಿದ್ದರು.

English summary
The central board of Direct Taxes extended last date for linking the adhaar number and linking it with permanent account nuber by 6 months to September 30.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X