ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರ ನುಡಿದ ಸತ್ಯ: 2009ರ ಜಮ್ಮು-ಕಾಶ್ಮೀರ ಬಸ್ ನಿಲ್ದಾಣ ಸ್ಫೋಟದ ಹಿಂದೆ ಐಎಸ್ಐ ಕೈವಾಡ

|
Google Oneindia Kannada News

ನವದೆಹಲಿ, ಅಕ್ಟೋಬರ್ 13: ಪಾಕಿಸ್ತಾನ ಗುಪ್ತಚರ ಇಲಾಖೆ(ಐಎಸ್ಐ) ಜೊತೆ ನಂಟು ಹೊಂದಿರುವ ಬಂಧಿತ ಉಗ್ರ ಮೊಹಮ್ಮದ್ ಅಶ್ರಫ್ ಅಲಿ ವಿಚಾರಣೆ ವೇಳೆ ಆಘಾತಕಾರಿ ಅಂಶವೊಂದು ಬಹಿರಂಗವಾಗಿದೆ.

2009ರ ಜಮ್ಮು ಕಾಶ್ಮೀರ ಬಸ್ ನಿಲ್ದಾಣದಲ್ಲಿ ಸಂಭವಿಸಿದ ಸ್ಫೋಟದ ಹಿಂದೆ ಐಎಸ್ಐ ಕೈವಾಡವಿದೆ ಎಂದು ಆರೋಪಿ ಬಾಯಿ ಬಿಟ್ಟಿದ್ದಾನೆ ಎಂದು ಗೊತ್ತಾಗಿದೆ. ಮೂಲಗಳ ಪ್ರಕಾರ, 2011 ರ ದೆಹಲಿ ಹೈಕೋರ್ಟ್ ಹೊರಗೆ ನಡೆದ ಸ್ಫೋಟಕ್ಕೆ ಮುಂಚೆ, ಅವರು ಆವರಣದ ರೆಸಿಯನ್ನು ನಡೆಸಿದ್ದರು ಎಂದು ಹೇಳಲಾಗಿದೆ. ಆದರೆ, ಸ್ಫೋಟದಲ್ಲಿ ಉಗ್ರ ಮೊಹಮ್ಮದ್ ಅಶ್ರಫ್ ಅಲಿ ಭಾಗಿಯಾಗಿದ್ದಾನೋ ಇಲ್ಲವೋ ಎಂಬುದು ವಿಚಾರಣೆಯಿಂದ ಸ್ಪಷ್ಟವಾಗಬೇಕಿದೆ.

Breaking News: ದೆಹಲಿಯಲ್ಲಿ ಪಾಕ್ ಮೂಲದ ಭಯೋತ್ಪಾದಕನ ಬಂಧನ Breaking News: ದೆಹಲಿಯಲ್ಲಿ ಪಾಕ್ ಮೂಲದ ಭಯೋತ್ಪಾದಕನ ಬಂಧನ

ಕಳೆದ 2011ರಲ್ಲಿ ಆತ ಹಲವು ಬಾರಿ ITO ನಲ್ಲಿರುವ ಪೊಲೀಸ್ ಪ್ರಧಾನ ಕಛೇರಿಯ (ಹಳೆಯ ಪೊಲೀಸ್ ಪ್ರಧಾನ ಕಛೇರಿಯನ್ನು) ಸುತ್ತಮುತ್ತಲಿನಲ್ಲಿ ಓಡಾಡಿದ್ದಾನೆ. ಆದರೆ, ಪೊಲೀಸರು ಜನರನ್ನು ಆವರಣದ ಹೊರಗೆ ನಿಲ್ಲಿಸಲು ಬಿಡದ ಕಾರಣಕ್ಕೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ಸಾಧ್ಯವಾಗಿರಲಿಲ್ಲ. ಇದರೊಂದಿಗೆ ಆತ ಪಾಕಿಸ್ತಾನದಲ್ಲಿರುವ ತನ್ನ ISBT ಸಹಚರರಿಗೆ ಮಾಹಿತಿಯನ್ನು ಕಳುಹಿಸಿದ್ದನು ಎಂದು ಗೊತ್ತಾಗಿದೆ.

Pakistani terrorist Mohammad Ashraf reveals ISI Involvement behind 2009 Jammu bus stand blast

ಪ್ರಸ್ತುತ ತನಿಖಾ ತಂಡದಿಂದ ವಿಚಾರಣೆ:

ನವದೆಹಲಿಯಲ್ಲಿ ಯಾವುದೇ ರೀತಿ ಸ್ಫೋಟ ಮತ್ತು ವಿಧ್ವಂಸಕ ಕೃತ್ಯಗಳಲ್ಲಿ ಬಂಧಿತ ಉಗ್ರ ಮೊಹಮ್ಮದ್ ಅಶ್ರಫ್ ಅಲಿ ಭಾಗಿಯಾಗಿದ್ದಾನೆಯೇ ಎಂಬುದರ ಬಗ್ಗೆ ತನಿಖಾ ತಂಡದ ಅಧಿಕಾರಿಗಳು ವಿಚಾರಣೆಯನ್ನು ಮುಂದುವರಿಸಿದ್ದಾರೆ.

ಐಎಸ್ಐ ಉಗ್ರ ಅಶ್ರಫ್ ಅಲಿ ಹೇಳಿದ್ದೇನು?:

ಜಮ್ಮು ಕಾಶ್ಮೀರದ ಬಸ್ ನಿಲ್ದಾಣದಲ್ಲಿ 2009ರಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ 3 ರಿಂದ 4 ಮಂದಿ ಮೃತಪಟ್ಟಿದ್ದರು. ಅಂದು ನಡೆದ ಬಾಂಬ್ ಸ್ಫೋಟದ ಹಿಂದೆ ಐಎಸ್ಐ ಅಧಿಕಾರಿ ನಾಸಿರ್ ಕೈವಾಡವಿದೆ ಎಂಬುದರ ಬಗ್ಗೆ ಬಂಧಿತ ಉಗ್ರ ಮೊಹಮ್ಮದ್ ಅಶ್ರಫ್ ಅಲಿ ವಿಚಾರಣೆ ವೇಳೆ ತಿಳಿಸಿದ್ದಾನೆ. 2011ರಲ್ಲಿ ದೆಹಲಿ ಹೈಕೋರ್ಟ್ ಬಳಿ ಸ್ಫೋಟ ನಡೆಸಲು ಇಬ್ಬರು ಪಾಕಿಸ್ತಾನಿಯರು ಬಂದಿದ್ದು, ಅವರಲ್ಲಿ ಒಬ್ಬರನ್ನು ಗುಲಾಂ ಸರ್ವಾರ್ ಎಂದು ಅಶ್ರಫ್ ಅಲಿ ಬಹಿರಂಗಪಡಿಸಿದ್ದಾನೆ. ಜಮ್ಮು ಮತ್ತು ಕಾಶ್ಮೀರದಲ್ಲಿ 5 ಸೇನಾ ಸಿಬ್ಬಂದಿಯನ್ನು ಬರ್ಬರವಾಗಿ ಹತ್ಯೆಗೈದಿರುವ ಬಗ್ಗೆ ಆರೋಪಿ ತಪ್ಪೊಪ್ಪಿಕೊಂಡಿದ್ದು, ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಇ-ಮೇಲ್ ಮೂಲಕ ಐಎಸ್ಐ ಸಂಪರ್ಕ:

ಉಗ್ರ ಮೊಹಮ್ಮದ್ ಅಶ್ರಫ್ ಪಾಕಿಸ್ತಾನದ ಗುಪ್ತಚರ ಇಲಾಖೆ(ಐಎಸ್ಐ) ಜೊತೆಗೆ ನೇರ ಸಂಪರ್ಕದಲ್ಲಿದ್ದನು ಎಂದು ಗೊತ್ತಾಗಿದೆ. ಬಂಧಿತ ಭಯೋತ್ಪಾದಕ ತಾನು ಕೆಲವು ದಿನಗಳವರೆಗೆ ಕಾಶ್ಮೀರದಲ್ಲೂ ವಾಸವಾಗಿರುವ ಬಗ್ಗೆ ಹೇಳಿಕೊಂಡಿದ್ದಾನೆ. ಐಎಸ್‌ಐ ಅಧಿಕಾರಿ ನಾಸಿರ್ ಆಜ್ಞೆಯ ಮೇರೆಗೆ ತಾನು ಹಲವಾರು ಬಾರಿ ಶಸ್ತ್ರಾಸ್ತ್ರಗಳನ್ನು ಪೂರೈಸಲು ಜಮ್ಮು ಮತ್ತು ಕಾಶ್ಮೀರಕ್ಕೆ ಹೋಗಿದ್ದೆ ಎಂದು ಬಂಧಿತ ಉಗ್ರ ಮೊಹಮ್ಮದ್ ಅಶ್ರಫ್ ಅಲಿ ಹೇಳಿದ್ದಾನೆ. ತಾನು ಯಾವಾಗಲೂ ಐಎಸ್ಐ ಅಧಿಕಾರಿಗಳೊಂದಿಗೆ ಇ-ಮೇಲ್ ಮೂಲಕ ಸಂವಹನ ನಡೆಸುತ್ತಿದ್ದೆ ಎಂದು ಉಗ್ರ ಬಹಿರಂಗಪಡಿಸಿದ್ದಾನೆ.

ಮಂಗಳವಾರ ಸೆರೆ ಸಿಕ್ಕಿದ್ದ ಉಗ್ರ ಅಶ್ರಫ್ ಅಲಿ:

ಪಾಕಿಸ್ತಾನ ಮೂಲದ ಭಯೋತ್ಪಾದಕನನ್ನು ಮಂಗಳವಾರ ದೆಹಲಿಯ ಲಕ್ಷ್ಮೀನಗರ ಪ್ರದೇಶದಲ್ಲಿ ಬಂಧಿಸಲಾಗಿತ್ತು. ಪಾಕಿಸ್ತಾನದ ನರೋವಾಲ್ ನಿವಾಸಿ ಮೊಹಮ್ಮದ್ ಅಶ್ರಫ್ ಬಂಧಿತ ಉಗ್ರ ಎಂದು ಗುರುತಿಸಲಾಗಿದ್ದು, ಬಂಧಿತ ಉಗ್ರನಿಂದ ನಕಲಿ ಗುರುತಿನ ಚೀಟಿ, ಎಕೆ 47 ಬಂದೂಕು, ಗ್ರೆನೇಡ್ ಸೇರಿದಂತೆ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ದೆಹಲಿಯಲ್ಲಿ ವಿಶೇಷ ತನಿಖಾ ತಂಡದ ಕೈಗೆ ಸಿಕ್ಕಿ ಬಿದ್ದಿರುವ ಉಗ್ರ ಮೊಹಮ್ಮದ್ ಅಶ್ರಫ್ ಅಲಿ, ಮೌಲಾನಾ ಆಗಿ ವಾಸವಾಗಿದ್ದನು. ದೆಹಲಿಯಷ್ಟೇ ಅಲ್ಲದೇ ಬೇರೆ ಬೇರೆ ನಗರಗಳಲ್ಲಿ ಈತ ಮೌಲಾನಾ ಆಗಿ ವಾಸವಾಗಿದ್ದನು ಎಂದು ವಿಚಾರಣೆ ವೇಳೆ ತಿಳಿದು ಬಂದಿತ್ತು.

English summary
Pakistani terrorist Mohammad Ashraf reveals ISI Involvement behind 2009 Jammu bus stand blast.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X