ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಡ್ರೋನ್ ಮೂಲಕ ಪಾಕಿಸ್ತಾನದಿಂದ ಪಂಜಾಬಿಗೆ ಬಂದ ಶಸ್ತ್ರಾಸ್ತ್ರಗಳು!

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 25: ಪಂಜಾಬಿನ ತಾರ್ನ್ ತರಾನ್ ನಲ್ಲಿ ಸುಟ್ಟ ಡ್ರೋನ್ ವೊಂದು ಪತ್ತೆಯಾಗಿದ್ದು, ಚೀನಾಕ್ಕೆ ಸೇರಿದ ಈ ಡ್ರೋನ್ ಮೂಲಕ ಪಾಕಿಸ್ತಾನದಿಂದ ಭಾರತಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಸಲಾಗಿದೆ ಎಂಬ ಮಾಹಿತಿ ಗುಪ್ತಚರ ಇಲಾಖೆಗೆ ಲಭ್ಯವಾಗಿದೆ.

ಈ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಅವಂತಿಪೊರ, ಜಮ್ಮು, ಪಠಾಣ್ ಕೋಟ್ ಮತ್ತು ಹಿಂಡನ್ ಗಳಲ್ಲಿ ಕಟ್ಟೆಚ್ಚರ ವಹಿಸಲು ಆದೇಶಿಸಲಾಗಿದೆ.

ಅಮೆರಿಕದ ನೆರವಿಗೆ ನಿಂತಿದ್ದು ಪಾಕಿಸ್ತಾನದ ಮಹಾ ಪ್ರಮಾದ: ಇಮ್ರಾನ್ ಖಾನ್ಅಮೆರಿಕದ ನೆರವಿಗೆ ನಿಂತಿದ್ದು ಪಾಕಿಸ್ತಾನದ ಮಹಾ ಪ್ರಮಾದ: ಇಮ್ರಾನ್ ಖಾನ್

ಮೂಲಗಳ ಪ್ರಕಾರ ಹತ್ತು ದಿನಗಳಲ್ಲಿ ಸುಮಾರು 80 ಕೆಜಿ ತೂಕದ ಶಸ್ತ್ರಾಸ್ತ್ರವನ್ನು ಪಂಜಾಬಿಗೆ ಸಾಗಿಸಲಾಗಿದೆ.

Pakistan terror groups use chines drone

ಈ ಘಟನೆಗೆ ಪೂರಕ ಎಂಬಂತೆ ಸೋಮವಾರ ಖಾಲಿಸ್ತಾನ್ ಜಿಂದಾಬಾದ್ ಫೋರ್ಸ್ ನ ನಾಲ್ವರು ಉಗ್ರರನ್ನು ಪೊಲೀಸರು ಇದೇ ಪ್ರದೇಶದಲ್ಲಿ ಬಂಧಿಸಿದ್ದು, ಅವರಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ವಶಪಡಿಸಿಕೊಂಡಿದ್ದರು.

ಉಗ್ರ ತರಬೇತಿ ನೆಲೆ ಹೊಸ ಹೆಸರಿನೊಂದಿಗೆ ಬಾಲಾಕೋಟ್ ನಲ್ಲಿ ಮತ್ತೆ ಸಕ್ರಿಯಉಗ್ರ ತರಬೇತಿ ನೆಲೆ ಹೊಸ ಹೆಸರಿನೊಂದಿಗೆ ಬಾಲಾಕೋಟ್ ನಲ್ಲಿ ಮತ್ತೆ ಸಕ್ರಿಯ

ಈ ಶಸ್ತ್ರಾಸ್ತ್ರ ಪೂರೈಕೆ ಕಾರ್ಯಾಚರಣೆಯಲ್ಲಿ 10 ಕೆಜಿ ಪೇಲೋಡ್ ಸಾಮರ್ಥ್ಯದ ಚೀನಿ ಕಮರ್ಶಿಯಲ್ ಡ್ರೋನ್ ಗಳನ್ನು ಬಳಸಲಾಗಿದೆ ಎಂಬ ವಿಷಯವೂ ಪತ್ತೆಯಾಗಿದೆ.

English summary
Pakistan terror groups use chines drone
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X