ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಪ್ರಜೆಗಳಿದ್ದ ಬಸ್‌ ಮೇಲೆ ದಾಳಿ, ಭಾರತದ ಕೈವಾಡವಿಲ್ಲ ಎಂದ ಎಂಇಎ

|
Google Oneindia Kannada News

ನವದೆಹಲಿ, ಆಗಸ್ಟ್ 14: ಚೀನಾ ಹಾಗೂ ಪಾಕಿಸ್ತಾನ ಸೈನಿಕರನ್ನು ಕೊಂಡೊಯ್ಯುತ್ತಿದ್ದ ಬಸ್‌ ಮೇಲೆ ನಡೆದಿದ್ದ ಐಇಡಿ ದಾಳಿಯಲ್ಲಿ ಭಾರತದ ಕೈವಾಡವಿಲ್ಲ ಎಂದು ಎಂಇಎ ತಿಳಿಸಿದೆ.

ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲಿಲು ಬಸ್ ಮೇಲಿನ ಆತ್ಮಾಹುತಿ ದಾಳಿಯಲ್ಲಿ ಭಾರತದ ಕೈವಾಡವಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಆರೋಪಕ್ಕೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ(ಎಂಇಎ) ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ಭಯೋತ್ಪಾದನೆಯ ಕೇಂದ್ರಬಿಂದು ಮತ್ತು ಉಗ್ರರ ಸುರಕ್ಷಿತ ಧಾಮವಾಗಿರುವ ಪಾಕಿಸ್ತಾನ ಅಂತಾರಾಷ್ಟ್ರೀಯ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನದಲ್ಲಿ ಭಾರತವನ್ನು ನಿಂದಿಸುವ ಇನ್ನೊಂದು ಪ್ರಯತ್ನವಾಗಿದೆ ಎಂದು ಹೇಳಿದರು.

India-China

ತನಿಖೆ ಪೂರ್ಣಗೊಂಡ ನಂತರ ಇಸ್ಲಾಮಾಬಾದ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಖುರೇಷಿ ಭಾರತ ಮತ್ತು ಅಫ್ಘಾನಿಸ್ತಾನ ದಾಳಿಯ ಹಿಂದಿದೆ ಎಂದು ಆರೋಪಿಸಿದರು.

"ಅಂತಾರಾಷ್ಟ್ರೀಯ ಸಮುದಾಯದ ಸಹಭಾಗಿತ್ವದಲ್ಲಿ ಭಯೋತ್ಪಾದನೆ ವಿರುದ್ಧದ ಜಾಗತಿಕ ಪ್ರಯತ್ನಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ಭಯೋತ್ಪಾದನೆಯ ವಿಷಯ ಬಂದಾಗ ಪಾಕಿಸ್ತಾನದ ಅರ್ಹತೆಗಳ ಬಗ್ಗೆ ಚೆನ್ನಾಗಿ ತಿಳಿದಿದೆ ಎಂದು ಬಾಗ್ಚಿ ಹೇಳಿದರು.

ಜುಲೈ 14ರಂದು ನಿರ್ಮಾಣವಾಗುತ್ತಿರುವ ದಾಸು ಅಣೆಕಟ್ಟಿನ ಸ್ಥಳಕ್ಕೆ ಚೀನಾದ ಎಂಜಿನಿಯರ್‌ಗಳು ಮತ್ತು ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬಸ್ ಸ್ಫೋಟಗೊಂಡು ಕನಿಷ್ಠ 13 ಜನರು ಸಾವನ್ನಪ್ಪಿದ್ದರು. ಸ್ಫೋಟದ ನಂತರ ಬಸ್ ಆಳವಾದ ಕಮರಿಗೆ ಉರುಳಿತ್ತು.

ಇದರಲ್ಲಿದ್ದ ಒಟ್ಟು ಎಂಟು ಮಂದಿ ಮೃತಪಟ್ಟಿದ್ದು, ಅದರಲ್ಲಿ ನಾಲ್ಕು ಜನರು ಚೀನಾದ ಎಂಜಿನಿಯರ್​ಗಳೇ ಆಗಿದ್ದು, ನಾಲ್ವರು ಪಾಕಿಸ್ತಾನದ ಸೈನಿಕರು ಎನ್ನಲಾಗಿದೆ. ಇನ್ನು ಹಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಏರಬಹುದೆಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.

ಇನ್ನು ಪಾಕಿಸ್ತಾನ ಸೇನೆಯ ಮೇಲೆ ಮಂಗಳವಾರ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಭಯೋತ್ಪಾದಕರು ದಾಳಿ ನಡೆಸಿ, ಓರ್ವ ಕ್ಯಾಪ್ಟನ್ ಸೇರಿ 11 ಯೋಧರನ್ನು ಕೊಂದಿದ್ದರು. ದಾಳಿ ನಡೆದ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ ಕೆಲ ನಾಗರಿಕರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ. ಮೃತ ಸೇನಾಧಿಕಾರಿಯನ್ನು ಕ್ಯಾಪ್ಟನ್ ಅಬ್ದುಲ್ ಬಾಸಿತ್ ಎಂದು ಗುರುತಿಸಲಾಗಿದೆ. ದಾಳಿಯಲ್ಲಿ ಕನಿಷ್ಠ 15 ಯೋಧರು ಗಾಯಗೊಂಡಿದ್ದಾರೆ ಎಂದು ವರದಿಗಳು ಹೇಳಿವೆ.

ಪಾಕಿಸ್ತಾನದ ಕೊಹಿಸ್ತಾನ ಜಿಲ್ಲೆಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಸಿಂಧೂ ನದಿಗೆ ನಿರ್ಮಾಣವಾಗುತ್ತಿರುವ ದಾಸು ಅಣೆಕಟ್ಟು ನಿರ್ಮಾಣಕಾರ್ಯ ನಡೆಸುತ್ತಿರುವ ಚೀನಾದ ಸುಮಾರು 30 ಎಂಜಿನಿಯರ್​ಗಳು, ಪಾಕ್​ನ ಕೆಲವು ಸೈನಿಕರು ಮತ್ತು ಹಲವು ಕಾರ್ಮಿಕರು ಈ ಬಸ್​ನಲ್ಲಿ ಪ್ರಯಾಣಿಸುತ್ತಿದ್ದರು.

ಆದರೆ ಸ್ಫೋಟ ಹೇಗಾಯಿತು ಎಂಬುದು ಇನ್ನೂ ಸ್ಪಷ್ಟಗೊಂಡಿಲ್ಲ. ಉಗ್ರು ಬಸ್​ನೊಳಗೆ ಐಇಡಿ ಇರಿಸಿದ್ದರೋ? ಅಥವಾ ಮಾರ್ಗಮಧ್ಯೆ ಎಸೆಯಲ್ಪಟಿತೋ ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ. ಸ್ಫೋಟದ ಬೆನ್ನಲ್ಲೇ ರಕ್ಷಣಾ ಕಾರ್ಯಾಚರಣೆಗಳು ಚುರುಕಾಗಿ ನಡೆದಿವೆ. ಅನೇಕರನ್ನು ಕಂದಕದಿಂದ ಎತ್ತಿ ಆಸ್ಪತ್ರೆಗಳಿಗೆ ಸೇರಿಸಲಾಗಿದೆ ಎಂದೂ ಅಲ್ಲಿನ ಮಾಧ್ಯಮಗಳು ಹೇಳಿವೆ.

ದಾಸು ಅಣೆಕಟ್ಟು ನಿರ್ಮಾಣದಲ್ಲಿ ತೊಡಗಿದ್ದ 37 ಚೀನಾ ಇಂಜಿನೀಯರ್‌ಗಳು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದು, ರಕ್ಷಣೆಗೆ ಇಬ್ಬರು ಪಾಕಿಸ್ತಾನಿ ಯೋಧರು ಜೊತೆಯಿದ್ದರು. ಪ್ರಬಲ IED ಸ್ಪೋಟಕದ ದಾಳಿಯ ಭೀಕರತೆಗೆ ಬಸ್‌ ಸ್ಫೋಟಗೊಂಡಿದ್ದುಚಿದ್ರಗೊಂಡಿದೆ. ಇನ್ನು ಹಲವರು ಗಂಭೀರ ಗಾಯಗಳಾಗಿವೆ. ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗುವ ಅತಂಕ ಮನೆಮಾಡಿದೆ ಎಂದು ರಾಯಿಟರ್ಸ್‌ ವರದಿ ಮಾಡಿದೆ.

"ಸ್ಫೋಟದ ನಂತರ ಬಸ್ ಆಳವಾದ ಪ್ರಪಾತಕ್ಕೆ ಬಿದ್ದಿದ್ದು, ಬಸ್‌ನಲ್ಲಿದ್ದ ಒಬ್ಬ ಚೀನಾದ ಎಂಜಿನಿಯರ್ ಮತ್ತು ಓರ್ವ ಸೈನಿಕರಿಗಾಗಿ ಶೋಧಕಾರ್ಯ ನಡೆಯುತ್ತಿದೆ. ಪಾಕಿಸ್ತಾನ ಸೇನೆ ಮತ್ತು ಇತರ ಇಲಾಖೆಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ. ಗಾಯಗೊಂಡವರನ್ನು ಏರ್ ಆಂಬುಲೆನ್ಸ್ ಮೂಲಕ ರಕ್ಷಿಸಲು ಇಡೀ ಸರ್ಕಾರಿ ವ್ಯವಸ್ಥೆ ತೊಡಗಿಸಿಕೊಂಡಿದೆ. " ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ರಾಯಿಟರ್ಸ್‌ಗೆ ತಿಳಿಸಿದ್ದರು.

ಬಸ್‌ನೊಳಗೆ ಸ್ಪೋಟಕಗಳನ್ನು ಇಡಲಾಗಿತ್ತೊ ಅಥವಾ ರಸ್ತೆ ಪಕ್ಕದಲ್ಲಿ ಸ್ಪೋಟಕಗಳನ್ನಿಟ್ಟು ಬಸ್‌ ಸ್ಫೋಟಿಸಲಾಗಿದೆಯೇ ಎಂಬ ಕುರಿತು ಇದುವರೆಗೆ ಮಾಹಿತಿ ತಿಳಿದು ಬಂದಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿ ಕಳೆದ ಒಂದು ವಾರದಿಂದ ಸೇನಾಪಡೆಗಳನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕ ದಾಳಿಗಳು ನಡೆಯುತ್ತಿದ್ದು ಮಂಗಳವಾರ 11 ಜನ ಪಾಕಿಸ್ತಾನ ಸೈನ್ಯದ ಯೋಧರನ್ನು ತೆಹ್ರಿಕ್‌ ಎ ತಾಲಿಬಾನ್‌ ಉಗ್ರರು ಹತ್ಯೆಗೈದಿದ್ದರು. ಕೆಲವು ಸೈನಿಕರನ್ನು ಒತ್ತೆಯಾಳುಗಳನ್ನಾಗಿ ಉಗ್ರರು ಹೊತ್ತೊಯ್ದಿದ್ದಾರೆ ಎಂದು ವರದಿಯಾಗಿದೆ.

ಅಫ್ಘಾನಿಸ್ತಾನದಲ್ಲೂ ತಾಲಿಬಾನ್​ ಉಗ್ರ ಸಂಘಟನೆ ತನ್ನ ಪ್ರಾಬಲ್ಯವನ್ನು ವಿಸ್ತರಿಸುತ್ತಿದ್ದು, ಈಗಾಗಲೇ ಸಾಕಷ್ಟು ಪ್ರದೇಶಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ. ಕಳೆದ ವಾರ ಭಾರತವು ಕಂದಾಹಾರ್​ನಲ್ಲಿಇರುವ ರಾಯಭಾರ ಕಚೇರಿಯಿಂದ ತನ್ನ ಸಿಬ್ಬಂಧಿಗಳನ್ನು ಮರಳಿ ತವರಿಗೆ ಕರೆಸಿಕೊಂಡಿತ್ತು.

ಅಫ್ಘಾನಿಸ್ತಾನದ ವಿದೇಶಾಂಗ ವಕ್ತಾರ ದಾಳಿ ನಡೆಯುವ ಸಂಭವ ಹೆಚ್ಚಿದೆ ಅದರಲ್ಲೂ ಭಾರತೀಯರನ್ನು ಹಾಗೂ ವಿದೇಶಿಯರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗುತ್ತಿದೆ ಎಂದು ಹೇಳಿದ್ದರು. ಅದರಂತೆ ಬುಧವಾರ ಇಂತಹ ದುಷ್ಕೃತ್ಯ ನಡೆದಿದೆ.

English summary
India on Friday described as “lies” Pakistan Foreign Minister Shah Mahmood Qureshi’s allegations that it was involved in last month’s suicide attack on a bus in the country’s Khyber Pakhtunkhwa province that killed nine Chinese engineers and four others.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X