• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟೂಲ್‌ಕಿಟ್‌ ಪ್ರಕರಣ; ದಿಶಾ ರವಿ ಬಂಧನಕ್ಕೆ ಪಾಕ್ ಪ್ರಧಾನಿ ಖಂಡನೆ

|

ನವದೆಹಲಿ, ಫೆಬ್ರುವರಿ 15: ಗ್ರೆಟಾ ಥನ್‌ಬರ್ಗ್‌ ಟ್ವಿಟ್ಟರ್ ಟೂಲ್ ಕಿಟ್ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ದಿಶಾ ರವಿ ಬಂಧನವನ್ನು ವಿರೋಧ ಪಕ್ಷಗಳು ಖಂಡಿಸಿವೆ. ಇದೀಗ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಪಕ್ಷ ಪಾಕಿಸ್ತಾನ್ ತೆಹ್ರೀಕ್ ಇ ಇನ್‌ಸಾಫ್ (ಪಿಟಿಐ) ದಿಶಾ ರವಿಗೆ ಬೆಂಬಲ ಘೋಷಿಸಿದೆ.

"ಭಾರತದಲ್ಲಿ ಮೋದಿ ಸರ್ಕಾರ/ಆರ್‌ಎಸ್‌ಎಸ್ ಆಡಳಿತ ತಮ್ಮ ವಿರುದ್ಧದ ಎಲ್ಲಾ ದನಿಗಳನ್ನು ಅಡಗಿಸುವಲ್ಲಿ ನಿರತವಾಗಿದೆ" ಎಂದು ಪಕ್ಷ ಹೇಳಿದ್ದು, ಕ್ರಿಕೆಟಿಗರು ಹಾಗೂ ಬಾಲಿವುಡ್ ಸೆಲೆಬ್ರಿಟಿಗಳಿಂದ ಹೇಳಿಕೆ ನೀಡಿಸುತ್ತಿರುವುದು ನಾಚಿಗೆಗೇಡಿನ ಸಂಗತಿ ಎಂದಿದೆ. ಇದೀಗ ಟ್ವಿಟ್ಟರ್ ಟೂಲ್ ಕಿಟ್ ಪ್ರಕರಣದಲ್ಲಿ ದಿಶಾ ರವಿ ಅವರನ್ನು ಕಸ್ಟಡಿಗೆ ತೆಗೆದುಕೊಂಡಿದೆ. ಇದನ್ನು ಖಂಡಿಸುತ್ತೇವೆ ಎಂದು ತಿಳಿಸಿದೆ.

ಸೌದಿ ಸಾಲ ತೀರಿಸಲು ಚೀನಾಗೆ ಬಕೆಟ್ ಹಿಡಿದ ಪಾಕ್ ನಾಯಕರು..!ಸೌದಿ ಸಾಲ ತೀರಿಸಲು ಚೀನಾಗೆ ಬಕೆಟ್ ಹಿಡಿದ ಪಾಕ್ ನಾಯಕರು..!

ಸಚಿನ್ ತಂಡೂಲ್ಕರ್, ವಿರಾಟ್ ಕೊಹ್ಲಿ, ಲತಾ ಮಂಗೇಶ್ವರ್, ಅಕ್ಷಯ್ ಕುಮಾರ್ ಹಾಗೂ ಇತರ ಸೆಲೆಬ್ರಿಟಿಗಳು ರೈತರ ಪ್ರತಿಭಟನೆ ಬೆಂಬಲಿಸಿ ಪಾಪ್ ತಾರೆ ರಿಹಾನಾ ಹಾಗೂ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್ ಟ್ವೀಟ್ ಗಳಿಗೆ ವಿರೋಧ ವ್ಯಕ್ತಪಡಿಸಿದ್ದರು. ಭಾರತದ ವಿಷಯವನ್ನು ಭಾರತದವರೇ ನೋಡಿಕೊಳ್ಳುತ್ತಾರೆ. ಇದರಲ್ಲಿ ಹೊರಗಿನವರ ಅಭಿಪ್ರಾಯ ಬೇಡ ಎಂದು ಟ್ವೀಟ್ ಮಾಡಿದ್ದರು.

ನಂತರದ ಬೆಳವಣಿಗೆಯಲ್ಲಿ ಗ್ರೆಟಾ ಥನ್ ಬರ್ಗ್ ರೈತರಿಗೆ ಬೆಂಬಲ ವ್ಯಕ್ತಪಡಿಸಿ ಮಾಡಿದ್ದ ಟ್ವೀಟ್ ವೊಂದರ ಟೂಲ್‌ಕಿಟ್‌ ನಲ್ಲಿ ಖಲಿಸ್ತಾನಿ ನಂಟಿನ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದು, ಟೂಲ್ ಕಿಟ್ ಸಂಪಾದನೆ ಮಾಡಿದ್ದ ಆರೋಪದಲ್ಲಿ ಶನಿವಾರ ಬೆಂಗಳೂರಿನಲ್ಲಿ ದಿಶಾ ರವಿ ಅವರನ್ನು ಬಂಧಿಸಿ ದೆಹಲಿಗೆ ಕರೆದುಕೊಂಡು ಹೋಗಲಾಗಿತ್ತು.

English summary
Pakistan prime minister Imran Khan's PTI extends support to Disha Ravi and joins Opposition to slam Modi government
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X