ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾತುಕತೆಗೆ ಮುಂದಾದ ಪಾಕ್, ಮೋದಿಗೆ ಇಮ್ರಾನ್ ಖಾನ್ ಪತ್ರ

|
Google Oneindia Kannada News

Recommended Video

ನರೇಂದ್ರ ಮೋದಿಗೆ ಪತ್ರ ಬರೆದ ಪಾಕ್ ಪ್ರಧಾನಿ

ಇಸ್ಲಾಮಾಬಾದ್, ಜೂನ್ 08: ಹಲವು ದಿನಗಳಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ ಎದ್ದಿರುವ ವೈಮನಸ್ಯಕ್ಕೆ ತೆರೆ ಎಳೆಯಲು ಪಾಕ ಪ್ರಧಾನಿ ಇಮ್ರಾನ್ ಖಾನ್ ಮುಂದಾಗಿದ್ದು, ಈ ಸಂಬಮಧ ಭಾರತಕ್ಕೆ ಪತ್ರ ಬರೆದಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ನಡುವಿನ ಎಲ್ಲಾ ವಿವಾದಗಳನ್ನೂ ಮಾತುಕತೆಯ ಮೂಲಕ ಪರಿಹರಿಸೋಣ ಎಂದು ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ.

'ಎಸ್ ಸಿಒ ಸಮಾವೇಶದಲ್ಲೂ ಇಮ್ರಾನ್ ಖಾನ್ ಜತೆ ಮೋದಿ ಭೇಟಿ ಇಲ್ಲ''ಎಸ್ ಸಿಒ ಸಮಾವೇಶದಲ್ಲೂ ಇಮ್ರಾನ್ ಖಾನ್ ಜತೆ ಮೋದಿ ಭೇಟಿ ಇಲ್ಲ'

Pakistan PM Imran Khan writes letter PM Narendra Modi

ಕಿರ್ಗಿಸ್ತಾನದ ರಾಜಧಾನಿಯಾದ ಬಿಶ್ ಕೆಕ್ ನಲ್ಲಿ ಮುಂದಿನ ವಾರ ನಡೆಯಲಿರುವ ಶಾಂಘೈ ಕೋ ಆಪರೇಷನ್ ಆರ್ಗನೈಸೇಶನ್ (ಎಸ್ ಸಿಒ) ಸಮಾವೇಶದಲ್ಲೂ ಇಮ್ರಾನ್ ಖಾನ್ ಅವರನ್ನು ನರೇಂದ್ರ ಮೋದಿ ಭೇಟಿ ಮಾಡುವುದಿಲ್ಲ ಎನ್ನಲಾಗಿತ್ತು.

ಈದ್ ಶುಭ ಕೋರುತ್ತಾ ಭಾರತದ ವಿಮಾನಗಳಿಗೆ ವಾಯು ಪ್ರದೇಶ ಮುಕ್ತಗೊಳಿಸಿದ ಪಾಕ್ಈದ್ ಶುಭ ಕೋರುತ್ತಾ ಭಾರತದ ವಿಮಾನಗಳಿಗೆ ವಾಯು ಪ್ರದೇಶ ಮುಕ್ತಗೊಳಿಸಿದ ಪಾಕ್

ಆದರೆ ಇದೀಗ ಇಮ್ರಾನ್ ಖಾನ್ ಪತ್ರ ಬರೆದಿದ್ದು, ಭಾರತ ನಡೆ ಏನಾಗಿರಲಿದೆ ಎಂಬುದು ಕುತೂಹಲದ ವಿಷಯವಾಗಿದೆ.

"ಎರಡೂ ದೇಶದ ಜನರು ಬಡತನದಿಂದ ಹೊರಬರುವುದಕ್ಕೆ ಮತ್ತು ಪ್ರಾದೇಶಿಕ ಅಭಿವೃದ್ಧಿಗೆ ಮಾತುಕತೆ ನಡೆಸುವುದು ಅನಿವಾರ್ಯ. ಬೇರೆ ಯಾವುದರಿಂದಲೂ ಇದರ ಪರಿಹಾರ ಸಾಧ್ಯವಿಲ್ಲ" ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

ಇಮ್ರಾನ್ ಖಾನ್ ಗೆ ಹಾವಿನ ಚರ್ಮದ ಪಾದರಕ್ಷೆ ಉಡುಗೊರೆಗೆ ತಯಾರಿ, ದಂಡ ಜಡಿದ ಅಧಿಕಾರಿಗಳುಇಮ್ರಾನ್ ಖಾನ್ ಗೆ ಹಾವಿನ ಚರ್ಮದ ಪಾದರಕ್ಷೆ ಉಡುಗೊರೆಗೆ ತಯಾರಿ, ದಂಡ ಜಡಿದ ಅಧಿಕಾರಿಗಳು

ಕಾಶ್ಮೀರ ಸಮಸ್ಯೆ ಸೇರಿದಂತೆ ಎಲ್ಲ ಸಮಸ್ಯೆಗಳನ್ನೂ ಮಾತುಕತೆ ಮೂಲಕ ಪರಿಹರಿಸೋಣ ಎಂದು ಮೋದಿ ಪ್ರಧಾನಿಯಾಗಿ ಮತ್ತೊಮ್ಮೆ ಆಯ್ಕೆಯಾದ ನಂತರ ಎರಡನೇ ಬಾರಿಗೆ ಇಮ್ರಾನ್ ಖಾನ್ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಚುನಾವಣೆ ಫಲಿತಾಂಶದ ನಂತರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುವುದಕ್ಕಾಗಿ ಬರೆದ ಪತ್ರದಲ್ಲೂ ಇಮ್ರಾನ್ ಖಾನ್ ಮಾತುಕತೆಯ ಮನವಿ ಮಾಡಿದ್ದರು ಎನ್ನಲಾಗಿದೆ.

English summary
Pakistan Prie minister Imran Khan writes letter to PM Narendra Modi, saying Pakistan wants to talk with India to resolve all issues between both countries including Kashmir issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X