ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

LoC ಬಳಿ 2000 ಸೇನಾ ಸಿಬ್ಬಂದಿಯನ್ನು ನಿಯೋಜಿಸಿದ ಪಾಕಿಸ್ತಾನ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 05: ಜಮ್ಮು ಮತ್ತು ಕಾಶ್ಮೀರದಲ್ಲಿ ದಿನೇ ದಿನೇ ಉದ್ವಿಗ್ನ ಪರಿಸ್ಥಿತಿ ತಲೆದೂರುತ್ತಿದ್ದು, ಪಾಕಿಸ್ತಾನವು ಗಡಿನಿಯಂತ್ರಣ ರೇಖೆ ಬಳಿ 2000 ಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಿದೆ.

"ಪಾಕಿಸ್ತಾನ ತನ್ನ ಸೈನಿಕರನ್ನು ಗಡಿನಿಯಂತ್ರಣ ರೇಖೆ ಬಳಿ ನಿಯೋಜಿಸಿದ ಸುದ್ದಿ ಸತ್ಯ, ಆದರೆ ಇದುವರೆಗೆ ಆ ಸೈನಿಕರು ಯಾವುದೇ ಪ್ರಚೋದನಾಕಾರಿ ವರ್ತನೆಯಲ್ಲಿ ತೊಡಗಿಲ್ಲ. ಅಕಸ್ಮಾತ್ ಅವರು ಆಕ್ರಮಣಕ್ಕೆ ಮುಂಡಾದರೆ ಭಾರತೀಯ ಸೇನೆ ತಕ್ಕ ಉತ್ತರ ನೀಡಲಿದೆ" ಎಂದು ಸೇನೆಯ ಮೂಲಗಳು ತಿಳಿಸಿವೆ.

ಕಾಶ್ಮೀರ ಸಮಸ್ಯೆಗೆ ಯುದ್ಧವೊಂದೇ ಪರಿಹಾರವಲ್ಲ: ಪಾಕಿಸ್ತಾನದ ಹೊಸ ವರಸೆಕಾಶ್ಮೀರ ಸಮಸ್ಯೆಗೆ ಯುದ್ಧವೊಂದೇ ಪರಿಹಾರವಲ್ಲ: ಪಾಕಿಸ್ತಾನದ ಹೊಸ ವರಸೆ

ಪಾಕಿಸ್ತಾನ ಮೂಲದ ಲಷ್ಕರ್ ಇ ತಾಯಿಬಾ ಮತ್ತು ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆಗಳು ಉಗ್ರರನ್ನು ನೇಮಿಸಿಕೊಳ್ಳುತ್ತಿರುವ ಬಗ್ಗೆ ಸುದ್ದಿ ಹರಡುತ್ತಿದ್ದಂತೆಯೇ ಪಾಕಿಸ್ತಾನ ತನ್ನ ಗಡಿಯಲ್ಲಿ ಹೆಚ್ಚನ ಭದ್ರತೆ ನಿಯೋಜಿಸಿದೆ.

Pakistan moves over 2000 troops close to Line Of Control

ಕಾಶ್ಮೀರದಲ್ಲಿ ಉಗ್ರ ಚಟುವಟಿಕೆ ನಡೆಸುವ, ಆ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಶ್ಮೀರದ ಗಮನ ಸೆಳೆವ ಉದ್ದೇಶ ಪಾಕಿಸ್ತಾನದ್ದು.

ಸಂಚಾರಿ ನಿಯಮ ಉಲ್ಲಂಘನೆ ದಂಡ ಪರಿಷ್ಕರಣೆ: ಯಾವ ತಪ್ಪಿಗೆ ಎಷ್ಟು ದಂಡ?ಸಂಚಾರಿ ನಿಯಮ ಉಲ್ಲಂಘನೆ ದಂಡ ಪರಿಷ್ಕರಣೆ: ಯಾವ ತಪ್ಪಿಗೆ ಎಷ್ಟು ದಂಡ?

ಭಾರತ ಸರ್ಕಾರ ಆಗಸ್ಟ್ 05 ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಲ್ಲಿ ಯುದ್ಧದ ಸನ್ನಿವೇಶ ಏರ್ಪಟ್ಟಿತ್ತು.

English summary
Pakistan moves over 2000 troops close to Line Of Control, Indian Army.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X