• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕರ್ತಾರ್‌ಪುರ ಯಾತ್ರಿಕರ ಮೇಲೆ ದುಬಾರಿ ಶುಲ್ಕ, ಪಾಕ್ ವಿರುದ್ಧ ಆಕ್ರೋಶ

|

ನವದೆಹಲಿ, ಅಕ್ಟೋಬರ್ 21: ಕರ್ತಾರ್‌ಪುರ್ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಲಿರುವ ಯಾತ್ರಿಕರಿಗೆ ದುಬಾರಿ ಸೇವಾ ಶುಲ್ಕ ವಿಧಿಸಿರುವುದು ಖಂಡನೀಯ ಎಂದು ಕೇಂದ್ರ ಸಚಿವೆ ಹರ್‌ಸಿಮ್ರತ್ ಕೌರ್ ಬಾದಲ್ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಭಾನುವಾರ ಟ್ವಿಟ್ಟರ್‌ನಲ್ಲಿ ಈ ಕುರಿತು ಬರೆದುಕೊಂಡಿರುವ ಕೌರ್ ಇದು 'ನಾಚಿಕೆಗೇಡು' ಮತ್ತು 'ದೌರ್ಜನ್ಯ' ಎಂದು ಕರೆದಿದ್ದಾರೆ. ಬಡ ಭಕ್ತರು ಈ ಮೊತ್ತವನ್ನು ಹೇಗೆ ಪಾವತಿಸುತ್ತಾರೆ ಎಂದು ಕೇಳಿದ ಬಾದಲ್, ಇಮ್ರಾನ್ ಖಾನ್ ಸರ್ಕಾರವು ನಂಬಿಕೆಯಿಲ್ಲದ ವ್ಯವಹಾರವನ್ನು ವ್ಯವಹಾರ ಮಾಡುತ್ತಿದೆ ಎಂದು ಪಾಕಿಸ್ತಾನವನ್ನು ಟೀಕಿಸಿದರು.

ಕರ್ತರ್ ಪುರ್ ಕಾರಿಡಾರ್: ಎರಡು ಷರತ್ತಿಗೆ ಒಪ್ಪದ ಪಾಕಿಸ್ತಾನ

ಕರ್ತಾರ್ಪುರ್ ಸಾಹಿಬ್ ದರ್ಶನಕ್ಕಾಗಿ ಪಾಕ್ ವಿಧಿಸುವ $ 20 ಶುಲ್ಕ ಅಂದರೆ ಸುಮಾರು 1500 ರೂ ನೀಡಬೇಕಾಗುತ್ತದೆ. ಇದು ಬಡವರಿಗೆ ನೀಡಲು ಸಾಧ್ಯವಿಲ್ಲ, ಅವರು ಹೇಗೆ ಪಾವತಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಶುಲ್ಕವು ಪಾಕಿಸ್ತಾನ ಆರ್ಥಿಕತೆಯನ್ನು ಹೆಚ್ಚಿಸುತ್ತದೆ ಮತ್ತು ವಿದೇಶಿ ವಿನಿಮಯವನ್ನು ಕಳಿಸುತ್ತದೆ ಎಂದು ಇಮ್ರಾನ್ ಖಾನ್ ಹೇಳಿದ್ದರು ಇದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ.

ಭಾರತದಲ್ಲಿ ರಾಜಕೀಯ ಆಶ್ರಯ ಕೇಳಿದ ಪಾಕ್ ಮಾಜಿ ಶಾಸಕ, ಕಾರಣ?

ಕರ್ತಾರ್‌ಪುರ್ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಲು ಬಯಸುವ ಎಲ್ಲ ಭಕ್ತರಿಂದ $ 20 ಸೇವಾ ಶುಲ್ಕ ವಿಧಿಸುವುದಾಗಿ ಪಾಕಿಸ್ತಾನ ಸರ್ಕಾರ ಈ ಹಿಂದೆ ತಿಳಿಸಿತ್ತು. ಭಾರತ ಸೇರಿದಂತೆ ವಿಶ್ವದಾದ್ಯಂತದ ಸಿಖ್ಖರು ಭೇಟಿ ನೀಡುವ ನಿರೀಕ್ಷೆಯಿರುವ ಕರ್ತಾರ್‌ಪುರ ಕಾರಿಡಾರ್ ಅನ್ನು ನವೆಂಬರ್ 9 ರಂದು ಸಾರ್ವಜನಿಕರಿಗೆ ತೆರೆಯಲಾಗುವುದು ಎಂದು ಖಾನ್ ಭಾನುವಾರ ಹೇಳಿದ್ದಾರೆ.

ಕಾರಿಡಾರ್ ಕರ್ತಾರ್‌ಪುರದ ದರ್ಬಾರ್ ಸಾಹಿಬ್ ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಡೇರಾ ಬಾಬಾ ನಾನಕ್ ದೇವಾಲಯದೊಂದಿಗೆ ಸಂಪರ್ಕಿಸುತ್ತದೆ.

ಸಿಖ್ಖರ ಪವಿತ್ರ ತಾಣ ಹೇಮಕುಂಡ್ ಸಾಹಿಬ್ ಸುತ್ತಾ ರೋಚಕ ಚಾರಣ

ಕಾರಿಡಾರ್ ಭಾರತೀಯ ಯಾತ್ರಿಕರ ವೀಸಾ ಮುಕ್ತ ಸಂಚಾರಕ್ಕೆ ಅನುಕೂಲವಾಗಲಿದ್ದು, ಅವರು 1522 ರಲ್ಲಿ ಸಿಖ್ ನಂಬಿಕೆ ಸಂಸ್ಥಾಪಕ ಗುರುನಾನಕ್ ದೇವ್ ಅವರು ಸ್ಥಾಪಿಸಿದ ಕರ್ತಾರ್ಪುರ್ ಸಾಹಿಬ್ ಗೆ ಭೇಟಿ ನೀಡಲು ಅನುಮತಿ ಪಡೆಯಬೇಕಾಗುತ್ತದೆ. ಇಬ್ಬರು ನೆರೆಹೊರೆಯವರ ನಡುವಿನ ಮೊದಲ ವೀಸಾ ಮುಕ್ತ ಕಾರಿಡಾರ್ ಆಗಲಿದೆ ಎಂದು ವರದಿಗಳು ತಿಳಿಸಿವೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Harsimrat Kaur Badal Tweeted that The $20 fee each charged by Pak for Kartarpur Sahib darshan is atrocious. How will a poor devotee pay this amount? Pakistan has made a business out of faith.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more