ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಡಿ ನಿಯಂತ್ರಣ ರೇಖೆ ಸಮೀಪ ಕಾಣಿಸಿಕೊಂಡ ಪಾಕ್ ಹೆಲಿಕಾಪ್ಟರ್

|
Google Oneindia Kannada News

ನವದೆಹಲಿ, ಫೆಬ್ರವರಿ 21 : ಪಾಕಿಸ್ತಾನದ ಹೆಲಿಕಾಪ್ಟರ್ ವೊಂದು ಗಡಿ ನಿಯಂತ್ರಣ ರೇಖೆಯ ಮುನ್ನೂರು ಮೀಟರ್ ಸಮೀಪ ಹಾರಾಟ ನಡೆಸಿದೆ. ಪಾಕ್ ಆಕ್ರಮಿತ ಪ್ರದೇಶದ ಜಮ್ಮು-ಕಾಶ್ಮೀರದ ಪೂಂಛ್ ವಲಯದ ಬಳಿ ಹೆಲಿಕಾಪ್ಟರ್ ಕಾಣಿಸಿಕೊಂಡಿದೆ. ಆದರೆ ಯಾವುದೇ ಗುಂಡಿನ ದಾಳಿ ಅಥವಾ ಸೇನಾ ಕಾರ್ಯಾಚರಣೆ ನಡೆದಿಲ್ಲ ಎಂದು ತಿಳಿದುಬಂದಿದೆ.

ಎರಡೂ ದೇಶಗಳ ಮಧ್ಯದ ನಿಯಮಗಳ ಪ್ರಕಾರ ರೋಟರಿ ವಿಂಗ್ ಏರ್ ಕ್ರಾಫ್ಟ್ ಗಳು ಗಡಿ ನಿಯಂತ್ರಣ ರೇಖೆಯ ಒಂದು ಕಿಲೋಮೀಟರ್ ವ್ಯಾಪ್ತಿಯೊಳಗೆ ಹಾರಾಟ ನಡೆಸುವಂತಿಲ್ಲ. ಅದೇ ರೀತಿ ಫಿಕ್ಸ್ಡ್ ವಿಂಗ್ ಏರ್ ಕ್ರಾಫ್ಟ್ ಎಲ್ ಒಸಿಯ ಹತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ಹಾರಾಟ ನಡೆಸುವಂತಿಲ್ಲ.

Pakistan Chopper Spotted Within 300 Metres Of LOC In Poonch

ಸ್ವಲ್ಪ ಸಮಯದ ನಂತರ ಪಾಕಿಸ್ತಾನದ ಹೆಲಿಕಾಪ್ಟರ್ ಹಿಂತಿರುಗಿತು ಎಂದು ಮೂಲಗಳು ತಿಳಿಸಿವೆ. ಆದರೆ ನಿಯಮ ಮೀರಿ ಹಾರಾಟ ನಡೆಸಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಜಗತ್ತಿನ ಅತ್ಯಂತ ಉದ್ವಿಗ್ನ ಗಡಿಯಲ್ಲಿ ಭಾರತ- ಪಾಕಿಸ್ತಾನದ ಗಡಿ ನಿಯಂತ್ರಣ ರೇಖೆಯೂ ಒಂದು ಎಂಬುದನ್ನು ಇಲ್ಲಿ ಸ್ಮರಿಸಬಹುದು.

English summary
A Pakistani helicopter came within 300 metres of the Line of Control in the Pakistan-occupied territory near Poonch sector in Jammu and Kashmir, official sources said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X