ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದ ಬೆಂಬಲಕ್ಕೆ ನಿಂತಿವೇ ವಿಪಕ್ಷಗಳು? ಬಿಜೆಪಿ ಲೇವಡಿ

|
Google Oneindia Kannada News

ನವದೆಹಲಿ, ಫೆಬ್ರವರಿ 28: ವಿಪಕ್ಷಗಳು ಭಾರತೀಯ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ನೀಡುತ್ತಿರುವ ಹೇಳಿಕೆಗಳು ಯಾರಿಗೆ ಸಂತಸ ನೀಡುತ್ತಿದೆ? ಭಾರತಕ್ಕಂತೂ ಅಲ್ಲವೇ ಅಲ್ಲ, ಪಾಕಿಸ್ತಾನಕ್ಕೆ, ಅದರ ಮಾಧ್ಯಮಕ್ಕೆ ಎಂದು ಬಿಜೆಪಿ ಲೇವಡಿ ಮಾಡಿದೆ.

ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಏರ್ಪಡುವ ಸ್ಥಿತಿ ನಿರ್ಮಾಣವಾಗಿರುವ ಕಾರಣ ಬುಧವಾರ 21 ಪಕ್ಷದ ಮುಖಂಡರು ಸಂಸತ್ತಿನಲ್ಲಿ ಸಭೆ ನಡೆಸಿದರು.

ಅಭಿನಂದನ್ ಅವರನ್ನು ವಾಪಸ್ ಕರೆತನ್ನಿ : ಟ್ವಿಟ್ಟಿಗರ ಒಕ್ಕೊರಲ ಕೂಗು ಅಭಿನಂದನ್ ಅವರನ್ನು ವಾಪಸ್ ಕರೆತನ್ನಿ : ಟ್ವಿಟ್ಟಿಗರ ಒಕ್ಕೊರಲ ಕೂಗು

ಸಭೆಯ ಬಳಿಕೆ ಮಾತನಾಡಿದ ವಿಪಕ್ಷಗಳ ನಾಯಕರು, ಭಾರತ-ಪಾಕ್ ನಡುವಿನ ಸಂದಿಗ್ಧ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದಿದ್ದವು. 'ನಮ್ಮ ಯೋಧರ ಬಲಿದಾನವನ್ನು ಬಿಜೆಪಿ ಮತ್ತು ನರೇಂದ್ರ ಮೋದಿ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ' ಎಂದಿದ್ದವು.

Pakistan and its media happy for Opposition statement: BJP claims

ಈ ಕುರಿತು ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, "ವಿಪಕ್ಷಗಳ ಹೇಳಿಕೆಗೆ ಆಧಾರವಿಲ್ಲ. ಅವರ ಹೇಳಿಕೆಯಿಂದ ಸಂತಸವಾಗಿದ್ದು, ಪಾಕಿಸ್ತಾನಕ್ಕೆ ಮತ್ತು ಅದರ ಮಾಧ್ಯಮಕ್ಕೆ" ಎಂದಿದ್ದಾರೆ.

'ಪಾಕ್ ನಲ್ಲಿದ್ದ ಲಾಡೆನ್ ನನ್ನು ಅಮೆರಿಕ ಹೊಡೆದಂತೆ ನಾವ್ಯಾಕೆ ದಾಳಿ ಮಾಡಬಾರದು?''ಪಾಕ್ ನಲ್ಲಿದ್ದ ಲಾಡೆನ್ ನನ್ನು ಅಮೆರಿಕ ಹೊಡೆದಂತೆ ನಾವ್ಯಾಕೆ ದಾಳಿ ಮಾಡಬಾರದು?'

ವಿತ್ತ ಸಚಿವ ಅರುಣ್ ಜೇಟ್ಲಿ ಪ್ರತಿಕ್ರಿಯೆ ನೀಡಿ, "ಇಂಥ ವಿಷಯಗಳಲ್ಲಿ ಸೂಕ್ಷ್ಮವಾಗಿ ವರ್ತಿಸುವುದನ್ನು ಕಲಿಯಬೇಕು. ನಮ್ಮಲ್ಲಿ ಒಗ್ಗಟ್ಟಿಲ್ಲ ಎಮಬುದನ್ನು ತೋರಿಸುವ ರೀತಿಯಲ್ಲಿ ಹೇಳಿಕೆ ನೀಡಬಾರದು" ಎಂದಿದ್ದಾರೆ.

English summary
Union ministers Prakash Javadekar and Arun Jaitley claimed allegations of opposition parties are baseless and Pakistan and its media is happy by their statement
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X