ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ನಿಂದ ಹೆಚ್ಚುವರಿ ಸೇನೆ; ಚಿಂತೆ ಮಾಡಬೇಕಿಲ್ಲ: ಬಿಪಿನ್ ರಾವತ್

By ಅನಿಲ್ ಆಚಾರ್
|
Google Oneindia Kannada News

ನವದೆಹಲಿ, ಆಗಸ್ಟ್ 13: "ಕಳೆದ ಕೆಲವು ದಿನಗಳಿಂದ ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಉದ್ದಕ್ಕೂ ಪಾಕಿಸ್ತಾನವು ಹೆಚ್ಚುವರಿ ಸೇನೆಯನ್ನು ನಿಯೋಜನೆ ಮಾಡುತ್ತಿದೆ. ಅದು ಸಹಜವಾದದ್ದು. ಚಿಂತೆ ಮಾಡುವುದಕ್ಕೆ ಕಾರಣ ಇಲ್ಲ. ಯಾವುದೇ ಭದ್ರತಾ ಸವಾಲನ್ನು ಎದುರಿಸಲು ಭಾರತ ತಯಾರಿದೆ. ಪ್ರತಿ ದೇಶವು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುತ್ತದೆ. ಪಾಕಿಸ್ತಾನ ಹೆಚ್ಚುವರಿ ಸೇನೆ ನಿಯೋಜಿಸುತ್ತಿರುವುದಕ್ಕೆ ಚಿಂತೆ ಮಾಡಬೇಕಿಲ್ಲ".

'ವಿಶ್ವಸಂಸ್ಥೆ ನಮ್ಮ ಬೆಂಬಲಕ್ಕಿಲ್ಲ', ಪಾಕ್ ವಿದೇಶಾಂಗ ಸಚಿವರ ಅಳಲು!'ವಿಶ್ವಸಂಸ್ಥೆ ನಮ್ಮ ಬೆಂಬಲಕ್ಕಿಲ್ಲ', ಪಾಕ್ ವಿದೇಶಾಂಗ ಸಚಿವರ ಅಳಲು!

- ಭಾರತದ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮಂಗಳವಾರ ಹೀಗೆ ಹೇಳಿದ್ದಾರೆ. ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಭಾರತ ಸರಕಾರ ರದ್ದು ಮಾಡಿ, ಎರಡು ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆ ಮಾಡಿದ ನಂತರ, ಪಾಕಿಸ್ತಾನವು ಗಡಿ ನಿಯಂತ್ರಣ ರೇಖೆ ಬಳಿ ಸೇನಾ ಬಲ ಹೆಚ್ಚಿಸುತ್ತಿರುವ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಅವರು ಉತ್ತರ ನೀಡಿದ್ದಾರೆ.

Pakistan Additional Troops Deployment; Need Not To Worry: Rawat

ಯಾವುದೇ ವ್ಯತ್ಯಾಸಗಳು ಆದರೂ ಅದನ್ನು ಎದುರಿಸಲು, ಭದ್ರತೆಗೆ ಸಂಬಂಧಿಸಿದ ಯಾವ ಸವಾಲನ್ನು ಮೆಟ್ಟಿ ನಿಲ್ಲಲು ಭಾರತೀಯ ಸೇನೆ ಸನ್ನದ್ಧವಾಗಿದೆ. ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನದ ಸೇನಾ ಚಟುವಟಿಕೆಗಳನ್ನು ಭಾರತವು ಗಮನಿಸುತ್ತಿದ್ದು, ಪಾಕ್ ನಿಂದ ಯಾವುದೇ ದುಸ್ಸಾಹಸಕ್ಕೆ ಮುಂದಾದರೆ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಲಾಗುವುದು ಎಂದು ಎಚ್ಚರಿಸಲಾಗಿದೆ.

English summary
Pakistan deploying additional troops along LOC. It's normal, need not to worry, said Indian Army chief General Bipin Rawat on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X