ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಿಂದ ಪಾಕಿಸ್ತಾನಕ್ಕೆ ಹೊರಟ ಕೊನೆ ಬಸ್ಸಿನಲ್ಲಿ 2 ಪ್ರಯಾಣಿಕರು!

|
Google Oneindia Kannada News

ನವದೆಹಲಿ, ಆಗಸ್ಟ್ 10: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಅಧಿಕಾರವನ್ನು ನೀಡುವ ಕಲಂ 370 ರದ್ದು ಪಡಿಸಿದ ಬಳಿಕ ಭಾರತ ಜೊತೆಗಿನ ಸಾರಿಗೆ ಸಂಪರ್ಕ, ವ್ಯಾಪಾರ ವಹಿವಾಟು ಸಂಬಂಧ ಕಡಿದುಕೊಳ್ಳಲು ಪಾಕಿಸ್ತಾನ ಮುಂದಾಗಿದೆ. ಸಂಜೋತಾ ಎಕ್ಸ್ ಪ್ರೆಸ್, ಥಾರ್ ಎಕ್ಸ್ ಪ್ರೆಸ್ ಸಂಚಾರ ಸ್ಥಗಿತಗೊಳಿಸಲಾಗಿದೆ.

"ದೆಹಲಿ-ಲಾಹೋರ್ ನಡುವಿನ ಬಸ್ ಸಂಚಾರವನ್ನು ಭಾನುವಾರದಿಂದ ಸ್ಥಗಿತಗೊಳಿಸಲಾಗುವುದು" ಎಂದು ಪಾಕಿಸ್ತಾನ ಸಚಿವ ಮುರಾದ್ ಸಯೀದ್ ಹೇಳಿದ್ದಾರೆ. ಇದಕ್ಕೂ ಮುನ್ನ ರೈಲ್ವೆ ಸಚಿವ ಶೇಖ್ ರಶೀದ್ ಅಹ್ಮದ್ ಅವರು ಎಕ್ಸ್ ಪ್ರೆಸ್ ರೈಲುಗಳ ಸಂಚಾರ ಬಂದ್ ಮಾಡಿರುವ ಬಗ್ಗೆ ಘೋಷಿಸಿದ್ದರು.

ಅಟಲ್ ಬಿಹಾರಿ ವಾಜಪೇಯಿ ಅವರು 1999ರ ಫೆಬ್ರವರಿ 19ರಂದು ದೆಹಲಿ- ಲಾಹೋರ್ ನಡುವೆ ಬಸ್ ಸೇವೆಗೆ ಚಾಲನೆ ನೀಡಿದ್ದರು. ಕಾರ್ಗಿಲ್ ಯುದ್ಧ ನಡೆದಾಗಲೂ ಬಸ್ ಸೇವೆ ಸ್ಥಗಿತಗೊಂಡಿರಲಿಲ್ಲ. 2001ರಲ್ಲಿ ಭಾರತದ ಸಂಸತ್ತಿನ ಮೇಲೆ ಉಗ್ರರ ದಾಳಿ ನಡೆದ ಬಳಿಕ ಬಸ್ ಸೇವೆ ಬಂದ್ ಮಾಡಲಾಗಿತ್ತು. 2003ರಿಂದ ಮತ್ತೆ ಸಂಚಾರ ಆರಂಭಿಸಿತ್ತು.

Pak bus for Lahore leaves Delhi on Saturday

ಬಸ್ ಸಂಚಾರ: ವಾರಕ್ಕೆ ಮೂರು ದಿನದಂತೆ ಉಭಯ ದೇಶಗಳ ನಡುವೆ ಬಸ್ ಸಂಚರಿಸುವ ವ್ಯವಸ್ಥೆಯಿದೆ. ದೆಹಲಿ ಸಾರಿಗೆ ಸಂಸ್ಥೆ ನಿಗಮ(ಪಿಟಿಡಿಸಿ)ದಿಂದ ಲಾಹೋರ್ ಗೆ ತೆರಳುವ ಬಸ್ ಗಳು ಅಂಬೇಡ್ಕರ್ ಟರ್ಮಿನಲ್ ನಿಂದ ಬೆಳಗ್ಗೆ ಹೊರಡುತ್ತವೆ. ಅತ್ತ ಕಡೆಯಿಂದ ಪಾಕಿಸ್ತಾನ ಪ್ರವಾಸೋದ್ಯಮ ನಿಗಮದ ಮೂಲಕ ಪಾಕಿಸ್ತಾನದಿಂದ ಒಂದು ಬಸ್ ಇತ್ತ ಕಡೆ ಪ್ರಯಾಣ ಬೆಳೆಸಿದ್ದಾರೆ.

ಕಾಶ್ಮೀರದ ಶಾಂತಿ ಕದಡಿದರೆ ಅಷ್ಟೇ! ಪಾಕ್ ಗೆ ಭಾರತದ ಎಚ್ಚರಿಕೆ ಕಾಶ್ಮೀರದ ಶಾಂತಿ ಕದಡಿದರೆ ಅಷ್ಟೇ! ಪಾಕ್ ಗೆ ಭಾರತದ ಎಚ್ಚರಿಕೆ

ಭಾರತದಿಂದ ಸೋಮವಾರ, ಬುಧವಾರ ಮತ್ತು ಶುಕ್ರವಾರ ಹಾಗೂ ಪಾಕಿಸ್ತಾನದಿಂದ ಮಂಗಳವಾರ, ಗುರುವಾರ್ ಮತ್ತು ಶನಿವಾರ ಬಸ್ ಸಂಚರಿಸುತ್ತವೆ.

ಭಾರತಕ್ಕೆ ಬರಬೇಕಿದ್ದ ಮತ್ತೊಂದು ರೈಲು ಸ್ಥಗಿತಗೊಳಿಸಿದ ಪಾಕಿಸ್ತಾನ ಭಾರತಕ್ಕೆ ಬರಬೇಕಿದ್ದ ಮತ್ತೊಂದು ರೈಲು ಸ್ಥಗಿತಗೊಳಿಸಿದ ಪಾಕಿಸ್ತಾನ

ಇಬ್ಬರು ಪ್ರಯಾಣಿಕರು: ಸುಮಾರು 530 ಕಿ.ಮೀ ದೂರದ ಪ್ರಯಾಣಕ್ಕೆ 8 ಗಂಟೆಗಳ ಅವಧಿ ನಿಗದಿ ಮಾಡಲಾಗಿದೆ. "ಇಂದು ಬೆಳಗ್ಗೆ 6 ಗಂಟೆಗೆ ದೆಹಲಿ ಗೇಟ್ ಬಳಿಯ ಅಂಬೇಡ್ಕರ್ ಸ್ಟೇಡಿಯಂನಿಂದ ಹೊರಟ ಪಿಟಿಡಿಸಿ ಬಸ್ ಹೊರಡಿದ್ದು, ಇಬ್ಬರು ಪ್ರಯಾಣಿಕರಿದ್ದರು. ಲಾಹೋರ್ ನಿಂದ ಹೊರಟ ಬಸ್ ನಲ್ಲಿ ಮೂವರು ಪ್ರಯಾಣಿಕರು ಬರುತ್ತಿರುವ ಮಾಹಿತಿಯಿದೆ" ಎಂದು ದೆಹಲಿ ಸಾರಿಗೆ ನಿಗಮ(ಡಿಟಿಸಿ) ಅಧಿಕಾರಿ ಹೇಳಿದರು.

English summary
Two passengers left for Lahore on early Saturday morning from Ambedkar Stadium Terminal here in a PTDC bus, even as the Pakistan government announced.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X