ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೃದ್ರೋಗ ತಜ್ಞ ಡಾ. ಕೆ. ಕೆ. ಅಗರ್ವಾಲ್ ಕೋವಿಡ್‌ಗೆ ಬಲಿ

|
Google Oneindia Kannada News

ನವದೆಹಲಿ, ಮೇ 18; ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಐಎಂಎಯ ಮಾಜಿ ಅಧ್ಯಕ್ಷ ಡಾ. ಕೆ. ಕೆ. ಅಗರ್ವಾಲ್ ವಿಧಿವಶರಾಗಿದ್ದಾರೆ. ಕೋವಿಡ್ ಸೋಂಕು ತಗುಲಿದ್ದ ಅವರು ಹಲವು ದಿನಗಳಿಂದ ವೆಂಟಿಲೇಟರ್ ವ್ಯವಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

62 ವರ್ಷದ ಡಾ. ಕೆ. ಕೆ. ಅಗರ್ವಾಲ್ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕೋವಿಡ್ ಸೋಂಕು ತಗುಲಿದ ಬಳಿಕ ಹಲವು ದಿನದಿಂದ ಅವರು ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಭಾರತ; ಒಂದು ವಾರದಲ್ಲಿ ಹೊಸ ಪ್ರಕರಣ ಇಳಿಕೆ, ಸಾವು ಹೆಚ್ಚಳಭಾರತ; ಒಂದು ವಾರದಲ್ಲಿ ಹೊಸ ಪ್ರಕರಣ ಇಳಿಕೆ, ಸಾವು ಹೆಚ್ಚಳ

ಹೃದ್ರೋಗ ತಜ್ಞರಾಗಿದ್ದ ಡಾ. ಕೆ. ಕೆ. ಅಗರ್ವಾಲ್ ಹಾರ್ಟ್ ಕೇರ್ ಫೌಂಡೇಷನ್‌ ಆಫ್ ಇಂಡಿಯಾದ ಮುಖ್ಯಸ್ಥರಾಗಿದ್ದರು. 2005ರಲ್ಲಿ ಡಾ. ಬಿಸಿ ರಾಯ್ ಪ್ರಶಸ್ತಿ, 2010ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದರು.

ಬ್ಲ್ಯಾಕ್ ಫಂಗಸ್ ಹೆಚ್ಚಳ ಕುರಿತು ಏಮ್ಸ್ ನಿರ್ದೇಶಕರಿಂದ ಎಚ್ಚರಿಕೆ ಬ್ಲ್ಯಾಕ್ ಫಂಗಸ್ ಹೆಚ್ಚಳ ಕುರಿತು ಏಮ್ಸ್ ನಿರ್ದೇಶಕರಿಂದ ಎಚ್ಚರಿಕೆ

Dr KK Aggarwal

ದೆಹಲಿಯಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದ ಡಾ. ಕೆ. ಕೆ. ಅಗರ್ವಾಲ್, ನಾಗ್ಪುರ ವಿಶ್ವವಿದ್ಯಾಲಯದಿಂದ ಎಂಬಿಬಿಎಸ್ ಪದವಿ ಪಡೆದಿದ್ದರು. ಕಳೆದ ವರ್ಷದಿಂದ ಕೋವಿಡ್ ಕುರಿತು ಹಲವಾರು ವಿಡಿಯೋಗಳನ್ನು ಮಾಡಿ ಅವರು ಟ್ವೀಟ್‌ ಮಾಡುತ್ತಿದ್ದರು.

ಬ್ಲಾಕ್ ಫಂಗಸ್‌ನಿಂದ ಸಾವನ್ನಪ್ಪಿದವರಿಗೆ ಪರಿಹಾರ ನೀಡಿ ಬ್ಲಾಕ್ ಫಂಗಸ್‌ನಿಂದ ಸಾವನ್ನಪ್ಪಿದವರಿಗೆ ಪರಿಹಾರ ನೀಡಿ

ಡಾ. ಕೆ. ಕೆ. ಅಗರ್ವಾಲ್ ಅವರ ಟ್ವಿಟರ್ ಖಾತೆಯಲ್ಲಿ ಸಂತಾಪವನ್ನು ಸೂಚಿಸಲಾಗಿದ್ದು, ಸೋಮವಾರ ರಾತ್ರಿ 11.30ಕ್ಕೆ ಅವರು ಮೃತಪಟ್ಟಿದ್ದಾರೆ ಎಂದು ಮಾಹಿತಿಯನ್ನು ನೀಡಲಾಗಿದೆ.

English summary
Padma Shree awardee and former national president of the IMA Dr KK Aggarwal (62) passed away on May 17, 2021. He admitted to New Delhi’s All India Institute of Medical Sciences after tested positive for COVID 19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X