ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಲುಮರದ ತಿಮ್ಮಕ್ಕ ಸೇರಿದಂತೆ ಸಾಧಕರಿಗೆ ದೇಶದ ಅತ್ಯುನ್ನತ ಪ್ರಶಸ್ತಿ

|
Google Oneindia Kannada News

ನವದೆಹಲಿ, ಮಾರ್ಚ್ 16: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ, ಮೂವರು ಸಾಧಕರಿಗೆ ಪದ್ಮವಿಭೂಷಣ, ಆರು ಮಂದಿ ಸಾಧಕರಿಗೆ ಪದ್ಮ ಭೂಷಣ ಹಾಗೂ 48 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಾಧಕರಗೆ ಪ್ರಶಸ್ತಿ ನೀಡಿದರು.

ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತರು

ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತರು

-ಡಾ. ತೀಜನ್ ಭಾಯಿ
-ಇಸ್ಮಾಯಿಲ್ ಓಮರ್ ಗೆಲೇಹ
-ಅನಿಲ್ ಕುಮಾರ್ ಮಣಿಭಾಯಿ ನಾಯಕ್

-ಮಹಾಶಯ ಧರ್ಮ ಪಾಲ್ ಗುಲಾಟಿ

-ಮಹಾಶಯ ಧರ್ಮ ಪಾಲ್ ಗುಲಾಟಿ

-ದರ್ಶನ್ ಲಾಲ್ ಜೈನ್
-ಅಶೋಕ್ ಲಕ್ಷ್ಮಣರಾವ್ ಕುಕಡೆ
-ಶಂಕರಲಿಂಗಮ್ ನಂಬಿ ನಾರಾಯಣ್
-ಬಚೇಂದ್ರಿ ಪಾಲ್
-ವಿಜಯಕೃಷ್ಣನ್ ಶುಂಗ್ಲು

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು

-ಸಾಲುಮರದ ತಿಮ್ಮಕ್ಕ

-ರಾಜೇಶ್ವರ ಆಚಾರ್ಯ

-ಮನೋಜ್ ವಾಜಪೇಯಿ
-ಉದ್ಧವ್ ಕುಮಾರ್ ಬರಾಲಿ
-ಉಮೇಶ್ ಕುಮಾರ್ ಭಾರತಿ
-ಪ್ರೀತಮ್ ಭರತವಾನ್
-ಫ್ರೆಡ್ರಿಕ್ ಇರಾನಿ ಬ್ರುನಿಂಗ್
-ಸಯ್ಯದ್ ಶಬ್ಬೀರ್
-ಸ್ವಪನ್ ಚೌದರಿ
-ಕನ್ವಲ್ ಸಿಂಗ್ ಚೌಹಾಣ್ ಸೇರಿ 48 ಮಂದಿಗೆ ನೀಡಲಾಗಿದೆ.

ಮಾರ್ಚ್ 11 ರಂದು ಮೊದಲ ಹಂತದ ಪ್ರಶಸ್ತಿ ಪ್ರಧಾನ

ಮಾರ್ಚ್ 11 ರಂದು ಮೊದಲ ಹಂತದ ಪ್ರಶಸ್ತಿ ಪ್ರಧಾನ

ಕೇಂದ್ರ ಸರ್ಕಾರ ಕೊಡಮಾಡುವ ಪದ್ಮ ಪ್ರಶಸ್ತಿಗೆ 56 ಮಂದಿ ಭಾಜನರಾಗಿದ್ದಾರೆ. ಸೋಮವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ 56 ಮಂದಿಗೆ ಪದ್ಮ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಖ್ಯಾತ ಕೊರಿಯೊಗ್ರಫರ್, ಚಿತ್ರನಟ ಪ್ರಭುದೇವ, ಖ್ಯಾತ ಸಂಗೀತಗಾರ ಶಂಕರ್ ಮಹದೇವನ್, ಅಕಾಲಿ ದಳ ನಾಯಕ ಸುಖದೇವ್ ಸಿಂಗ್ ದಿನ್ಡ್ಸಾ, ಕುಸ್ತಿಪಟು ಬಜ್ ರಂಗ್ ಪುನಿಯಾ, ಭಾಗೀರತಿ ದೇವಿ, ಸಿಸ್ಕೊ ಸಿಸ್ಟಮ್ಸ್ ನ ಮಾಜಿ ಸಿಇಒ ಜಾನ್ ಚೇಂಬರ್ಸ್ ಮೊದಲಾದವರಿಗೆ ರಾಷ್ಟ್ರಪತಿಗಳು ಪದ್ಮ ಪ್ರಶಸ್ತಿ ನೀಡಿ ಸನ್ಮಾನಿಸಿದರು. ಖ್ಯಾತ ಪತ್ರಿಕೋದ್ಯಮಿ ಕುಲದೀಪ್ ನಾಯರ್ ಅವರಿಗೆ ಮರಣೋತ್ತರ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.112 ಮಂದಿ ಪದ್ಮ ಪ್ರಶಸ್ತಿ ಗಣ್ಯರಲ್ಲಿ 94 ಗಣ್ಯರಿಗೆ ಪದ್ಮಶ್ರೀ, 14 ಮಂದಿಗೆ ಪದ್ಮಭೂಷಣ ಮತ್ತು ನಾಲ್ವರಿಗೆ ಪದ್ಮ ವಿಭೂಷಣ ಪ್ರಶಸ್ತಿ ಪ್ರಕಟಿಸಲಾಗಿದೆ. ಅವರಲ್ಲಿ 21 ಮಹಿಳೆಯರು, 11 ಮಂದಿ ವಿದೇಶಿಯರು/ಅನಿವಾಸಿ ಭಾರತೀಯರು/ ಪಿಐಒ/ಒಸಿಐಗಳು ಸೇರಿದ್ದಾರೆ.

ಸಾಲುಮರದ ತಿಮ್ಮಕ್ಕ ಸೇರಿ 48 ಮಂದಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಮಾರ್ಚ್ 11 ರಂದು ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಟ್ಟು 56 ಮಂದಿಗೆ ಪ್ರಶಸ್ತಿ ನೀಡಲಾಗಿತ್ತು.

English summary
The President of India, Shri Ram Nath Kovind presented three Padma Vibhushan, six Padma Bhushan and forty-eight Padma Shri Awards today (March 16, 2019) at a Civil Investiture Ceremony held at Rashtrapati Bhavan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X