ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭ

|
Google Oneindia Kannada News

ನವದೆಹಲಿ, ಏ. 27 : ಶನಿವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕದ ಮೂಲದ ಯೋಗಗುರು ಬಿ.ಕೆ.ಎಸ್.ಅಯ್ಯಂಗಾರ್ ಅವರಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣವನ್ನು ನೀಡಿ ಗೌರವಿಸಲಾಯಿತು. ಶನಿವಾರ ಕಾರ್ಯಕ್ರಮದಲ್ಲಿ ಒಟ್ಟು 56 ಗಣ್ಯರಿಗೆ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಂದು ಪದ್ಮ ವಿಭೂಷಣ, 11 ಪದ್ಮಭೂಷಣ ಹಾಗೂ 44 ಪದ್ಮಶ್ರೀ ಪ್ರಶಸ್ತಿಗಳನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪ್ರದಾನ ಮಾಡಿದರು. ಯೋಗಾಭ್ಯಾಸವನ್ನು ಆಧುನಿಕ ಜಗತ್ತಿಗೆ ಪರಿಚಯಿಸಿದ ಕೋಲಾರ ಜಿಲ್ಲೆಯ ಬೆಳ್ಳೂರು ಕೃಷ್ಣಮಾಚಾರ್ ಸುಂದರರಾಜ ಅಯ್ಯಂಗಾರ್ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಮಾಜಿ ಕುಲಪತಿ, ಕೃಷಿ ವಿಜ್ಞಾನಿ ಮಾದಪ್ಪ ಮಹದೇವಪ್ಪ, ನಟ ಪರೇಶ್ ರಾವಲ್, ಟೆನಿಸ್ ಪಟು ಲಿಯಾಂಡರ್ ಪೇಸ್, ಲೇಖಕ ರಸ್ಕಿನ್ ಬಾಂಡ್, ವಿಜ್ಞಾನಿ ಪಿ. ಬಲರಾಂ, ಇಸ್ರೋ ಅಧ್ಯಕ್ಷ ಕೆ. ರಾಧಾಕೃಷ್ಣನ್ ಸೇರಿದಂತೆ 56 ಮಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕ್ರಿಕೆಟಿಗ ಯುವರಾಜ್ ಸಿಂಗ್, ಲೇಖಕಿ ಅನಿತಾ ದೇಸಾಯಿ ಹಾಗೂ ಕಲಾವಿದ ಸುನೀಲ್ ದಾಸ್ ಅವರು ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು. ಚಿತ್ರಗಳಲ್ಲಿ ನೋಡಿ ಪ್ರಶಸ್ತಿ ಪ್ರಧಾನ ಸಮಾರಂಭ (ಪಿಟಿಐ ಚಿತ್ರಗಳು)

ಪದ್ಮವಿಭೂಷಣ ಪಡೆದ ಬಿ.ಕೆ.ಎಸ್.ಅಯ್ಯಂಗಾರ್

ಪದ್ಮವಿಭೂಷಣ ಪಡೆದ ಬಿ.ಕೆ.ಎಸ್.ಅಯ್ಯಂಗಾರ್

ಯೋಗಾಭ್ಯಾಸವನ್ನು ಆಧುನಿಕ ಜಗತ್ತಿಗೆ ಪರಿಚಯಿಸಿದ ಕೋಲಾರ ಜಿಲ್ಲೆಯ ಬೆಳ್ಳೂರು ಕೃಷ್ಣಮಾಚಾರ್ ಸುಂದರರಾಜ ಅಯ್ಯಂಗಾರ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪ್ರದಾನ ಮಾಡಿದರು.

ರಸ್ಕಿನ್ ಬಾಂಡ್ ಗೆ ಪದ್ಮವಿಭೂಷಣ ಗೌರವ

ರಸ್ಕಿನ್ ಬಾಂಡ್ ಗೆ ಪದ್ಮವಿಭೂಷಣ ಗೌರವ

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಲೇಖಕ ರಸ್ಕಿನ್ ಬಾಂಡ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಪ್ರಧಾನ ಮಾಡಿದರು.

ಸುಪ್ರಿತಾ ದೇವಿಗೆ ಪದ್ಮಶ್ರೀ ಪ್ರಶಸ್ತಿ

ಸುಪ್ರಿತಾ ದೇವಿಗೆ ಪದ್ಮಶ್ರೀ ಪ್ರಶಸ್ತಿ

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಬೆಂಗಾಲಿ ನಟಿ ಸುಪ್ರಿತಾ ದೇವಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಿದರು.

ರೆಹಮಾನ್ ಗೆ ಪದ್ಮಶ್ರೀ ಗೌರವ

ರೆಹಮಾನ್ ಗೆ ಪದ್ಮಶ್ರೀ ಗೌರವ

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಡ್ರಂ ವಾದಕ Musafir Ram Bhardwaj ಅವರಿಗೆ ಪ್ರದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದರು.

ಪ್ರಭುವಿಗೆ ಪದ್ಮಶ್ರೀ ಪ್ರಶಸ್ತಿ

ಪ್ರಭುವಿಗೆ ಪದ್ಮಶ್ರೀ ಪ್ರಶಸ್ತಿ

ಗಾಲಿ ಕುರ್ಚಿ ಟೆನಿಸ್ ಚಾಂಪಿಯನ್ ಬೋನಿಫೇಸ್ ಪ್ರಭು ಅವರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದರು.

ದಿನೇಶ್ ಸಿಂಗ್ ಅವರಿಗೆ ಪದ್ಮಶ್ರೀ ಗೌರವ

ದಿನೇಶ್ ಸಿಂಗ್ ಅವರಿಗೆ ಪದ್ಮಶ್ರೀ ಗೌರವ

ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಪ್ರೊ.ದಿನೇಶ್ ಸಿಂಗ್ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.

 ಭಂಡಾರಿ ಅವರಿಗೆ ಪದ್ಮವಿಭೂಷಣ ಗೌರವ

ಭಂಡಾರಿ ಅವರಿಗೆ ಪದ್ಮವಿಭೂಷಣ ಗೌರವ

ಶನಿವಾರ ರಾಷ್ಟ್ರಪತಿ ಭವನದಲ್ಲಿ ನ್ಯಾಯಮೂರ್ತಿ ದಲ್ವೀರ್ ಭಂಡಾರಿ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಲಲಿತ್ ಕುಮಾರ್ ಅವರಿಗೆ ಪದ್ಮಶ್ರೀ

ಲಲಿತ್ ಕುಮಾರ್ ಅವರಿಗೆ ಪದ್ಮಶ್ರೀ

ವೈದ್ಯಕೀಯ ಕ್ಷೇತ್ರದ ಸಾಧನೆಗಾಗಿ ಡಾ. ಲಲಿತ್ ಕುಮಾರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

English summary
President of India Pranab Mukherjee presents Padma Bhushan, Padma Vibhushan and Padma Bhushan Awards 2014 at Rashtrapati Bhavan New Delhi. Padma Vibhushan awarded to Karnataka based Yogacharya B.K.S. Iyengar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X