ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕೇಂದ್ರ ಸರ್ಕಾರಕ್ಕೆ ಸಮಯವಿದೆ, ಆದರೆ, ಕಾರ್ಮಿಕರು ಉಳಿಯಲು ಸಮಯವಿಲ್ಲ'

|
Google Oneindia Kannada News

ನವದೆಹಲಿ, ಏಪ್ರಿಲ್ 29: ಕೊರೊನಾ ಹಾವಳಿಯಿಂದ ದೇಶದ ಅರ್ಥವ್ಯವಸ್ಥೆ ತತ್ತರಿಸಿ ಹೋಗಿದೆ. ಹಳಿ ತಪ್ಪಿರುವ ಅರ್ಥ ವ್ಯವಸ್ಥೆಯನ್ನು ಸರಿ ದಾರಿಗೆ ತರುವ ದೊಡ್ಡ ಜವಾಬ್ದಾರಿ ಕೇಂದ್ರ ಸರ್ಕಾರದ ಮೇಲಿದೆ.

Recommended Video

IPL ಕಪ್ ಗಾಗಿ RCB ಅಭಿಮಾನಿ ಮಾಡಿದ್ದೇನು ನೋಡಿ..! ಶಾಕ್ ಆಗ್ತೀರ | Oneindia Kannada

ಅದರಲ್ಲೂ ಗ್ರಾಮೀಣ ಮಟ್ಟದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳನ್ನು ನೀಡುವ ಅತಿ ಸಣ್ಣ, ಸಣ್ಣ, ಮತ್ತು ಮಧ್ಯಮ ಕೈಗಾರಿಕೆಗಳಿಗೆ ಕೊರೊನಾ ಲಾಕ್‌ಡೌನ್ ನಿಂದ ಭಾರೀ ದುಷ್ಪರಿಣಾಮ ಆಗಿದೆ.

ಉದ್ದಿಮೆದಾರರ ಸಾಲ WRITTEN OFF: ರಾಜಕೀಯ ನಾಯಕರ ಪ್ರತಿಕ್ರಿಯೆಉದ್ದಿಮೆದಾರರ ಸಾಲ WRITTEN OFF: ರಾಜಕೀಯ ನಾಯಕರ ಪ್ರತಿಕ್ರಿಯೆ

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಮಾಜಿ ಹಣಕಾಸು ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಪಿ ಚಿದಂಬರಂ, ''ಅತಿ ಸಣ್ಣ, ಸಣ್ಣ, ಮತ್ತು ಮಧ್ಯಮ ಕೈಗಾರಿಕೆಗಳಿಗೆ (MSMEs) ಆರ್ಥಿಕ ಚಟುವಟಿಕೆಗಳನ್ನು ಪುನರಾರಂಭಿಸಲು ಸಹಾಯ ಮಾಡಲು ಕೇಂದ್ರ ಹಣಕಾಸು ಇಲಾಖೆ 1 ಲಕ್ಷ ಕೋಟಿ ರೂ.ಗಳ ಪರಿಹಾರ ಪ್ಯಾಕೇಜ್ ಘೋಷಿಸಬೇಕು'' ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

11 ಕೋಟಿ ಜನರು ಸಂಕಷ್ಟದಲ್ಲಿ

11 ಕೋಟಿ ಜನರು ಸಂಕಷ್ಟದಲ್ಲಿ

ನವದೆಹಲಿಯಲ್ಲಿ ವಿಡಿಯೋ-ಕಾನ್ಫರೆನ್ಸಿಂಗ್ ಮೂಲಕ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಚಿದಂಬರಂ, ಈ ಎಂಎಸ್‌ಎಂಇಗಳಲ್ಲಿ ತೊಡಗಿರುವ 11 ಕೋಟಿ ಜನರ ಜನರಿಗೆ ವೇತನ ಮತ್ತು ಸಂಬಳ ನೀಡಲು ಸಹಾಯ ಮಾಡಲು 6.3 ಕೋಟಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ 1 ಲಕ್ಷ ಕೋಟಿ ರೂ.ಗಳ ವೇತನ ಸಂಕಷ್ಟದ ನೆರವು ನೀಡುವಂತೆ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಬುಧವಾರ ಒತ್ತಾಯಿಸಿದ್ದಾರೆ. ಎಂಎಸ್‌ಎಂಇ ಅಲ್ಲದವರಿಗೆ, ಅಮೆರಿಕ ಕೈಗೊಂಡ ಕ್ರಮಗಳ ಪ್ರಕಾರ ಸರ್ಕಾರವು "Paycheque Protection Programme" ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ.

ಮುಳಗಿಸುತ್ತೋ ಅಥವಾ ತೇಲಿಸುತ್ತೋ?

ಮುಳಗಿಸುತ್ತೋ ಅಥವಾ ತೇಲಿಸುತ್ತೋ?

"ಕೋವಿಡ್ -19 ಪ್ರಾರಂಭವಾದಾಗಿನಿಂದ ವ್ಯವಹಾರಗಳಿಗೆ ಯಾವುದೇ ಹಣಕಾಸಿನ ಪ್ಯಾಕೇಜ್ ಅಥವಾ ಸಹಾಯವನ್ನು ಘೋಷಿಸಲಾಗಿಲ್ಲ ಎಂಬುದು ಆಶ್ಚರ್ಯಕರವಾಗಿದೆ. ಸರ್ಕಾರವು ಸಮಯವನ್ನು ಹೊಂದಿರಬಹುದು. ಆದರೆ, ಎಂಎಸ್‌ಎಂಇಗಳು ಉಳಿಯಲು ಸಮಯ ಇಲ್ಲ. ಎಂಎಸ್‌ಎಂಇಗಳನ್ನು ಸರ್ಕಾರ ಮುಳಗಿಸುತ್ತೋ ಅಥವಾ ತೇಲಿಸುತ್ತೋ ಎಂಬುದನ್ನು ಕಾಯ್ದು ನೋಡಬೇಕಿದೆ'' ಎಂದು ಹೇಳಿದರು.

ಕುಟುಂಬಗಳಲ್ಲಿ ಅನಿಶ್ಚಿತತೆ ಹೆಚ್ಚುತ್ತಿದೆ

ಕುಟುಂಬಗಳಲ್ಲಿ ಅನಿಶ್ಚಿತತೆ ಹೆಚ್ಚುತ್ತಿದೆ

"ನಾಳೆ (ಏಪ್ರಿಲ್ 1) ತಿಂಗಳ ಕೊನೆಯ ಕೆಲಸದ ದಿನ. ಭಾರತದ 12 ಕೋಟಿಗೂ ಹೆಚ್ಚು ಜನರು ಇದಕ್ಕೆ ಕಾಯುತ್ತಿದ್ದಾರೆ. ಏಪ್ರಿಲ್ ತಿಂಗಳ ವೇತನ ಮತ್ತು ವೇತನವನ್ನು ಅವರಿಗೆ ನೀಡಲಾಗುತ್ತದೆಯೇ ಎಂಬುದನ್ನು ತಿಳಿಯಲು ಅವರು ಬಯಸುತ್ತಿದ್ದಾರೆ. ಭಾರತದ ಎಂಎಸ್‌ಎಂಇಗಳಲ್ಲಿ ದುಡಿಯುವ ಜನರು ಮತ್ತು ಅವರ ಕುಟುಂಬಗಳಲ್ಲಿ ಅನಿಶ್ಚಿತತೆ ಹೆಚ್ಚುತ್ತಿದೆ'' ಎಂದು ಸರ್ಕಾರದ ಗಮನ ಸೆಳೆದಿದ್ದಾರೆ.

ಸಂಬಳವನ್ನು ನೀಡಲು ಸಾಧ್ಯವಾಗುತ್ತಿಲ್ಲ

ಸಂಬಳವನ್ನು ನೀಡಲು ಸಾಧ್ಯವಾಗುತ್ತಿಲ್ಲ

''ಎಂಎಸ್‌ಎಂಇಗಳಲ್ಲಿ ಕೆಲಸ ಮಾಡುವ ಜನರು ಆದಾಯವಿಲ್ಲದೆ ತಮ್ಮನ್ನು ಮತ್ತು ತಮ್ಮ ಕುಟುಂಬವನ್ನು ಹೇಗೆ ಪೋಷಿಸುತ್ತಾರೆ? ಎಂದು ಪ್ರಶ್ನಿಸಿರುವ ಅವರು, ಈ 11 ಕೋಟಿ ಜನರ ಜೀವನೋಪಾಯ ಈಗ ಅಪಾಯದಲ್ಲಿದೆ. ಏಕೆಂದರೆ ಲಾಕ್‌ಡೌನ್‌ನಿಂದಾಗಿ ಹೆಚ್ಚಿನ ಉದ್ಯೋಗದಾತರಿಗೆ ವೇತನ ಮತ್ತು ಸಂಬಳವನ್ನು ನೀಡಲು ಸಾಧ್ಯವಾಗುತ್ತಿಲ್ಲ. ಕೇಂದ್ರ ಸರ್ಕಾರ ಎಷ್ಟೇ ಕಷ್ಟವಾದರೂ ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಪರಿಹಾರ ಪ್ಯಾಕೇಜ್ ಘೋಷಿಸಬೇಕು'' ಎಂದು ಆಗ್ರಹಿಸಿದ್ದಾರೆ.

English summary
Former Finance P Chidambaram Proposes Rs 1 Lakh Crore Special Fund For MSMEs. 11 crore MSMEs Employees In Critical Condition, he said at video conference press meet on wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X