ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಪಿ-ಬಿಎಸ್ಪಿ ಮೈತ್ರಿ: ಇದೇ ಅಂತಿಮವಲ್ಲ ಎಂದ ಚಿದಂಬರಂ!

|
Google Oneindia Kannada News

ನವದೆಹಲಿ, ಜನವರಿ 13: ಉತ್ತರ ಪ್ರದೇಶದಲ್ಲಿ ಮುಂಬರುವ ಲೋಕಸಭಾ ಚುನಾವಣೆಗೆ ಬಹುಜನ ಸಮಾಜ ಪಕ್ಷ ಮತ್ತು ಸಮಾಜವಾದಿ ಪಕ್ಷ ಮೈತ್ರಿ ಮಾಡಿಕೊಂಡಿರುವ ಬಗ್ಗೆ ಕಾಂಗ್ರೆಸ್ ಮುಖಂಡ, ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಪ್ರತಕ್ರಿಯೆ ನೀಡಿದ್ದಾರೆ.

ಈ ಮೈತ್ರಿಯ ನಿರ್ಧಾರವೇ ಅಂತಿಮವಲ್ಲ. ಕೊನೆಯ ಕ್ಷಣದ ಬದಲಾವಣೆಯ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಅವರು ಕಾಂಗ್ರೆಸ್ ಕೊನೆಯ ಕ್ಷಣದಲ್ಲಿ ಬಿಎಸ್ಪಿ-ಎಸ್ಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಮಾತುಕತೆಗೆ ಮುಂದಾಗಬಹುದು ಎಂಬ ಸೂಚನೆಯನ್ನು ನೀಡಿದ್ದಾರೆ.

ಮಾಯಾ-ಅಖಿಲೇಶ್ ರನ್ನು ಗೌರವಿಸುತ್ತೇನೆ: ರಾಹುಲ್ ಗಾಂಧಿಮಾಯಾ-ಅಖಿಲೇಶ್ ರನ್ನು ಗೌರವಿಸುತ್ತೇನೆ: ರಾಹುಲ್ ಗಾಂಧಿ

"ಬಿಎಸ್ಪಿ-ಎಸ್ಪಿ ನಿರ್ಧಾರವೇ ಅಂತಿಮವಲ್ಲ. ಒಂದು ಬಲಾಡ್ಯ ಮೈತ್ರಿಯ ಅಗತ್ಯವಿದೆ. ಆದ್ದರಿಂದ ಈ ಪಕ್ಷಗಳು ಮತ್ತೊಮ್ಮೆ ಯೋಚಿಸಬಹುದು. ಅಕಸ್ಮಾತ್ ಅವರ ನಿರ್ಧಾರದಲ್ಲಿ ಬದಲಾವಣೆ ಇಲ್ಲವೆಂದರೆ ಚುನಾವಣೆಯನ್ನು ಸ್ವತಂತ್ರವಾಗಿ ಎದುರಿಸುವ ತಾಕತ್ತು ಕಾಂಗ್ರೆಸ್ಸಿಗೆ ಇದೆ" ಎಮದು ಅವರು ವಿಶ್ವಾಸ ವ್ಯಕ್ತಪಡಿಸಿದರು.

P Chidambaram on BSP and SP alliance: This decision is not final

ಟೂ ಬಿಟ್ಟ ಮಾಯಾವತಿ... ಇನ್ನು ಏಕಾಂಗಿ ಹೋರಾಟವೇ ಕಾಂಗ್ರೆಸ್ಸಿಗೆ ಗತಿ!ಟೂ ಬಿಟ್ಟ ಮಾಯಾವತಿ... ಇನ್ನು ಏಕಾಂಗಿ ಹೋರಾಟವೇ ಕಾಂಗ್ರೆಸ್ಸಿಗೆ ಗತಿ!

2019 ರ ಏಪ್ರಿಲ್ ಮೇ ತಿಂಗಳಿನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಎಸ್ಪಿ ಮತ್ತು ಬಿಎಸ್ಪಿ ಪಕ್ಷಗಳು ಮೈತ್ರಿ ಮಾಡಿಕೊಳ್ಳುವುದಾಗಿ ಶನಿವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದವು. ಉತ್ತರ ಪ್ರದೇಶದ 80 ಕ್ಷೇತ್ರಗಳ ಪೈಕಿ 76 ಕ್ಷೇತ್ರಗಳಲ್ಲಿ ಎಸ್ಪಿ-ಬಿಎಸ್ಪಿ ಸ್ಪರ್ಧಿಸಲಿದ್ದು, ತಲಾ 38 ಕ್ಷೇತ್ರಗಳನ್ನು ಸಮಾನವಾಗಿ ಹಂಚಿಕೊಂಡಿವೆ.

English summary
The announcement of the Mayawati-Akhilesh Yadav alliance in Uttar Pradesh for the upcoming national elections may have aimed to give BJP sleepless nights, but it hasn't come as a comfort for the Congress either.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X