ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಪ್ಟೆಂಬರ್ 2 ರವರೆಗೆ ಚಿದಂಬರಂ ಸಿಬಿಐ ವಶದಲ್ಲೇ

|
Google Oneindia Kannada News

ನವದೆಹಲಿ, ಆಗಸ್ಟ್ 30: ಐಎನ್‌ಎಕ್ಸ್‌ ಮೀಡಿಯಾ ಹಗರಣ ಪ್ರಕರಣದಲ್ಲಿ ಸಿಬಿಐ ವಶದಲ್ಲಿರುವ ಪಿ.ಚಿದಂಬರಂ ಅವರು ಸೆಪ್ಟೆಂಬರ್ 2 ರವರೆಗೂ ಸಿಬಿಐ ವಶದಲ್ಲಿಯೇ ಇರಲಿದ್ದಾರೆ.

ಚಿದಂಬರಂ ಅವರನ್ನು ಆಗಸ್ಟ್ 30 ರವರೆಗೆ ಸಿಬಿಐ ವಶಕ್ಕೆ ನೀಡಿ ಆದೇಶ ನೀಡಲಾಗಿತ್ತು. ಇಂದು ಮತ್ತೆ ಅರ್ಜಿ ಸಲ್ಲಿಸಿದ ಸಿಬಿಐ ಮತ್ತೆ ಐದು ದಿನಗಳ ಕಾಲ ಸಿಬಿಐಗೆ ವಶಕ್ಕೆ ನೀಡುವಂತೆ ಕೇಳಿತ್ತು. ಆದರೆ ಇದಕ್ಕೆ ನಿರಾಕರಿಸಿರುವ ನ್ಯಾಯಾಲಯವು ಸೆಪ್ಟೆಂಬ್ ಎರಡರ ವರೆಗೆ ಮಾತ್ರವೇ ಚಿದಂಬರಂ ಅವರನ್ನು ಸಿಬಿಐ ವಶಕ್ಕೆ ನೀಡಿದೆ.

ಪಿ ಚಿದಂಬರಂ ಬಂಧನದ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ ಇಂದ್ರಾಣಿಪಿ ಚಿದಂಬರಂ ಬಂಧನದ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ ಇಂದ್ರಾಣಿ

Recommended Video

Chidambaram : ಅಂದೇ ಶಪಥ ಮಾಡಿದ್ದ ಪ್ರಧಾನಿ ಮೋದಿ | Oneindia Kannada

ಸೆಪ್ಟೆಂಬರ್ 5 ವರೆಗೆ ತಮ್ಮ ವಶಕ್ಕೆ ನೀಡುವಂತೆ ಸಿಬಿಐ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯವು ತಳ್ಳಿ ಹಾಕಿದೆ. ಈಗಾಗಲೇ 10 ದಿನಗಳ ಕಾಲ ಚಿದಂಬರಂ ಸಿಬಿಐ ವಶದಲ್ಲಿಯೇ ಇದ್ದರು. ಹಾಗಾಗಿ ಇನ್ನೂ ಹೆಚ್ಚಿನ ಕಾಲ ಸಿಬಿಐ ವಶಕ್ಕೆ ಬೇಡವೆಂದು ನ್ಯಾಯಾಲಯವು ಯೋಚಿಸಿದೆ.

P Chidambaram Custody Extended Till September 2

ಆಗಸ್ಟ್ 21 ರಂದು ಸಿಬಿಐ ಅಧಿಕಾರಿಗಳು ಪಿ.ಚಿದಂಬರಂ ಅವರನ್ನು ಬಂಧಿಸಿದ್ದರು. ಐಎನ್‌ಎಕ್ಸ್‌ ಮೀಡಿಯಾ ಹಗರಣಕ್ಕೆ ಸಂಬಂಧಿಸಿದಂತೆ ಈ ಬಂಧನವು ನಡೆದಿತ್ತು.

ಪಿ.ಚಿದಂಬರಂ ಜಾಮೀನು ಅರ್ಜಿ: ಸೆಪ್ಟೆಂಬರ್ 5 ಕ್ಕೆ ಸುಪ್ರೀಂ ಆದೇಶಪಿ.ಚಿದಂಬರಂ ಜಾಮೀನು ಅರ್ಜಿ: ಸೆಪ್ಟೆಂಬರ್ 5 ಕ್ಕೆ ಸುಪ್ರೀಂ ಆದೇಶ

ಇಡಿ ಸಹ ಚಿದಂಬರಂ ಅವರನ್ನು ತಮ್ಮ ವಶಕ್ಕೆ ನೀಡಬೇಕೆಂದು ಕೋರಿತ್ತು. ಆದರೆ ನ್ಯಾಯಾಲಯವು ಇಡಿ ವಶದಿಂದ ಚಿದಂಬರಂ ಅವರಿಗೆ ಸೆಪ್ಟೆಂಬರ್ ಐದರ ವರೆಗೆ ಮಧ್ಯಂತರ ರಕ್ಷಣೆ ನೀಡಿದೆ.

English summary
P Chidambaram CBI custody extended till September 2 court ordered today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X