• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆಕ್ಸಿಜನ್ ಎಕ್ಸ್‌ಪ್ರೆಸ್ ಮೂಲಕ 2511 ಮೆಟ್ರಿಕ್ ಟನ್ ಆಮ್ಲಜನಕ ಸರಬರಾಜು

|

ನವದೆಹಲಿ, ಮೇ 06: ದೇಶದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಅಟ್ಟಹಾಸದ ನಡುವೆ ವೈದ್ಯಕೀಯ ಆಮ್ಲಜನಕವಿಲ್ಲದೇ ಪರದಾಡುತ್ತಿರುವ ರೋಗಿಗಳ ನೆರವಿಗೆ ಭಾರತೀಯ ರೈಲ್ವೆ ಬಿಟ್ಟಿರುವ ಆಕ್ಸಿಜನ್ ಎಕ್ಸ್‌ಪ್ರೆಸ್ ಸಹಾಯಕವಾಗಿದೆ.

ಭಾರತದಾದ್ಯಂತ ಈವರೆಗೂ 2511 ಮೆಟ್ರಿಕ್ ಟನ್ ದ್ರವರೂಪದ ವೈದ್ಯಕೀಯ ಆಮ್ಲಜನಕವನ್ನು ರೈಲ್ವೆ ಮಾರ್ಗದ ಮೂಲಕ 161 ಟ್ಯಾಂಕರ್ ಗಳಲ್ಲಿ ತುಂಬಿಸಿ ಹಲವು ರಾಜ್ಯಗಳಿಗೆ ಸರಬರಾಜು ಮಾಡಲಾಗಿದೆ. ದೇಶದಲ್ಲಿ ಈಗಾಗಲೇ 40 ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲುಗಳು ತಮ್ಮ ಗುರಿಯನ್ನು ಮುಟ್ಟಿದ್ದು, ಸೂಚಿಸಿರುವ ಸ್ಥಳಗಳಿಗೆ ಆಮ್ಲಜನಕವನ್ನು ತಲುಪಿಸುವಲ್ಲಿ ಯಶಸ್ವಿಯಾಗಿವೆ.

ಮೊದಲು ಓದಿ: ಭಾರತದಲ್ಲಿ ಕೊರೊನಾವೈರಸ್ 2ನೇ ಅಲೆ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳಿ ಮೊದಲು ಓದಿ: ಭಾರತದಲ್ಲಿ ಕೊರೊನಾವೈರಸ್ 2ನೇ ಅಲೆ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳಿ

ದೇಶದಲ್ಲಿ ಗುರುವಾರದ ಅಂಕಿ-ಅಂಶಗಳ ಪ್ರಕಾರ, ಮಹಾರಾಷ್ಟ್ರ 174 ಮೆಟ್ರಿಕ್ ಟನ್, ಉತ್ತರ ಪ್ರದೇಶ 689 ಮೆಟ್ರಿಕ್ ಟನ್, ಮಧ್ಯ ಪ್ರದೇಶ 190 ಮೆಟ್ರಿಕ್ ಟನ್, ಹರಿಯಾಣ 259 ಮೆಟ್ರಿಕ್ ಟನ್, ತೆಲಂಗಾಣ 123 ಮೆಟ್ರಿಕ್ ಟನ್ ಹಾಗೂ ದೆಹಲಿಗೆ 1053 ಮೆಟ್ರಿಕ್ ಟನ್ ವೈದ್ಯಕೀಯ ಆಮ್ಲಜನಕವನ್ನು ರವಾನಿಸಲಾಗಿದೆ.


22 ಟ್ಯಾಂಕರ್ ಗುರಿ ಮುಟ್ಟುವುದೊಂದೇ ಬಾಕಿ:

ಪ್ರಸ್ತುತ 400 ಟನ್ ದ್ರವರೂಪದ ಆಮ್ಲಜನಕದ 22 ಟ್ಯಾಂಕರ್ ಹೊತ್ತಿರುವ ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲು ಮಧ್ಯ ಪ್ರದೇಶ, ಹರಿಯಾಣ ಮತ್ತು ರಾಜಸ್ಥಾನದತ್ತ ಸಂಚರಿಸುತ್ತಿವೆ. ಇನ್ನೇನೆ ಕೆಲವೇ ಗಂಟೆಗಳಲ್ಲಿ ಈ ಆಮ್ಲಜನಕದ ರೈಲುಗಳು ನಿಗದಿತ ಗುರಿಗೆ ತಲುಪಲಿವೆ. ರಾಜಸ್ಥಾನಕ್ಕೆ ಇದೇ ಮೊದಲ ಬಾರಿಗೆ ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲಿನ ಮೂಲಕ ವೈದ್ಯಕೀಯ ಆಮ್ಲಜನಕವನ್ನು ಸರಬರಾಜು ಮಾಡಲಾಗುತ್ತಿದೆ.

English summary
Oxygen Express: More Than 2511 MT Liquid Oxygen In 161 Tanker Reached To Different States.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X