ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಶೇ. 41ಕ್ಕಿಂತ ಹೆಚ್ಚಿನ ಉದ್ಯೋಗಿಗಳಿಗೆ ಹೆಚ್ಚಿದ ಕೆಲಸದ ಒತ್ತಡ: ಮೈಕ್ರೋಸಾಫ್ಟ್

|
Google Oneindia Kannada News

ನವದೆಹಲಿ, ಅಕ್ಟೋಬರ್ 08: ಸಾಂಕ್ರಾಮಿಕ ಕಾಲದಲ್ಲಿ ಜಾಗತಿಕವಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದರ ಜೊತೆಗೆ ಕೆಲಸ ಮತ್ತು ವೈಯಕ್ತಿಕ ಜೀವನದ ಯೋಗಕೇಮದ ಮೇಲೂ ಋಣಾತ್ಮಕ ಪರಿಣಾಮ ಬೀರಿದೆ. ಇದರಿಂದಾಗಿ ಉದ್ಯೋಗಿಗಳ ಮೇಲಿನ ಒತ್ತಡ ಹೆಚ್ಚಾಗುತ್ತಿದೆ ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ.

ಭಾರತದ ಶೇಕಡಾ 41ಕ್ಕಿಂತ ಹೆಚ್ಚಿನ ಕಾರ್ಮಿಕರು ಮನೆಯಿಂದಲೇ ಕೆಲಸವಾಗಲಿ, ಕಚೇರಿಯ ಕೆಲಸವಾಗಲಿ ಉದ್ಯೋಗದಲ್ಲಿ ತುಂಬಾ ಒತ್ತಡ ಎದುರಿಸುತ್ತಿದ್ದಾರೆ ಎಂದು ಮೈಕ್ರೋಸಾಫ್ಟ್ ಅಧ್ಯಯನವೊಂದು ಬುಧವಾರ ಬಹಿರಂಗಪಡಿಸಿದೆ.

ವರ್ಕ್ ಫ್ರಂ ಹೋಮ್ ಮುಂದುವರಿಸಲು 75% ಉದ್ಯೋಗಿಗಳ ಒಲವು: ಸಮೀಕ್ಷೆವರ್ಕ್ ಫ್ರಂ ಹೋಮ್ ಮುಂದುವರಿಸಲು 75% ಉದ್ಯೋಗಿಗಳ ಒಲವು: ಸಮೀಕ್ಷೆ

ಮೈಕ್ರೋಸಾಫ್ಟ್‌ನ ಇತ್ತೀಚಿನ 'ವರ್ಕ್ ಟ್ರೆಂಡ್ ಇಂಡೆಕ್ಸ್' ವರದಿಯ ಪ್ರಕಾರ, ಕಳೆದ ಆರು ತಿಂಗಳುಗಳಲ್ಲಿ ಭಾರತದ ಮೂರನೇ ಒಂದು ಭಾಗದಷ್ಟು ಕಾರ್ಮಿಕರಿಗೆ ಕೆಲಸದ ಒತ್ತಡದ ಹೆಚ್ಚಾಗಿದೆ ಎನ್ನಲಾಗಿದೆ.

Over 41% Indians Under Stress, Burnout Due To Work From Home – Microsoft Survey

"ವ್ಯವಹಾರಗಳು ಹೊಸ ಕೆಲಸದ ವಿಧಾನಕ್ಕೆ ಹೊಂದಿಕೊಂಡಂತೆ, ಹೊಸ ಕೆಲಸದ ಪರಿಸ್ಥಿತಿಗಳು ನೌಕರರ ಮೇಲೆ ಬೀರುತ್ತಿರುವ ಬಹುಮುಖಿ ಪರಿಣಾಮವನ್ನು ಪರೀಕ್ಷಿಸುವುದು ಬಹಳ ಮುಖ್ಯ. ಇದು ನಮ್ಮ ಎಲ್ಲ ಗ್ರಾಹಕರು ಮತ್ತು ಬಳಕೆದಾರರಿಗೆ ಸೂಕ್ತವಾದ ಮತ್ತು ಸಮಯೋಚಿತ ಪರಿಹಾರಗಳನ್ನು ಒದಗಿಸಲು ಸಹಾಯ ಮಾಡುತ್ತದೆ "ಎಂದು ಮೈಕ್ರೋಸಾಫ್ಟ್ ಇಂಡಿಯಾದ ಮಾಡರ್ನ್ ವರ್ಕ್‌ನ ಕಂಟ್ರಿ ಹೆಡ್ ಸಮಿಕ್ ರಾಯ್ ಹೇಳಿದರು.

ಆಸ್ಟ್ರೇಲಿಯಾ, ಜಪಾನ್, ಭಾರತ ಮತ್ತು ಸಿಂಗಾಪುರ ಸೇರಿದಂತೆ ಜಾಗತಿಕವಾಗಿ ಎಂಟು ದೇಶಗಳಲ್ಲಿ 6,000 ಕ್ಕೂ ಹೆಚ್ಚು ಮಾಹಿತಿ ಮತ್ತು ಮೊದಲ ಸಾಲಿನ ಕಾರ್ಮಿಕರನ್ನು ಸಮೀಕ್ಷೆ ನಡೆಸಿದ ಅಧ್ಯಯನವು, ಏಷ್ಯಾದಲ್ಲಿ ಹೆಚ್ಚಿದ ಉದ್ಯೋಗ ಒತ್ತಡ ಎದುರಿಸುತ್ತಿರುವ ಕಾರ್ಮಿಕರಲ್ಲಿ ಭಾರತವು ಎರಡನೇ ಅತಿ ಹೆಚ್ಚು ಶೇಕಡಾ 29 ರಷ್ಟಿದೆ ಎಂದು ಹೇಳಿದೆ.

ಸಮೀಕ್ಷೆ ನಡೆಸಿದವರಲ್ಲಿ ಶೇಕಡಾ 92 ರಷ್ಟು ಜನರು ಧ್ಯಾನವು ಕೆಲಸ-ಸಂಬಂಧಿತ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದರು.

English summary
India came out top with over 41 per cent of workers citing the lack of separation between work and personal life negatively impacting their personal life says Microsoft survey
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X