ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದಿಂದ ಎಲ್‌ಒಸಿಯಲ್ಲಿ 3 ಸಾವಿರ ಬಾರಿ ಕದನ ವಿರಾಮ ಉಲ್ಲಂಘನೆ

|
Google Oneindia Kannada News

ಶ್ರೀನಗರ, ಸೆಪ್ಟೆಂಬರ್ 19: 17ವರ್ಷಗಳಲ್ಲೇ ಮೊದಲ ಬಾರಿ ಪಾಕಿಸ್ತಾನವು ಹೆಚ್ಚು ಬಾರಿ ಕದನವಿರಾಮ ಉಲ್ಲಂಘಿಸಿದೆ.

ಜೂನ್‌1 ರಿಂದ ಸೆಪ್ಟೆಂಬರ್‌ವರೆಗೆ ಎಲ್‌ಒಸಿಯಲ್ಲಿ 3 ಸಾವಿರ ಬಾರಿ ಕದನ ವಿರಾಮ ಉಲ್ಲಂಘಿಸಿದೆ ಎಂದು ಸಂಸತ್‌ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಕದನ ವಿರಾಮ ಉಲ್ಲಂಘಿಸಿದ ಪಾಕ್: ಒಬ್ಬ ಭಾರತೀಯ ಯೋಧ ಹುತಾತ್ಮ ಕದನ ವಿರಾಮ ಉಲ್ಲಂಘಿಸಿದ ಪಾಕ್: ಒಬ್ಬ ಭಾರತೀಯ ಯೋಧ ಹುತಾತ್ಮ

ಪಾಕಿಸ್ತಾನವು 3186 ಬಾರಿ ಕದನ ವಿರಾಮ ಉಲ್ಲಂಘಿಸಿದೆ.17 ವರ್ಷಗಳಲ್ಲಿ ಕದನವಿರಾಮ ಒಪ್ಪಂದವನ್ನು 2003ಬಾರಿ ಉಲ್ಲಂಘಿಸಿದ್ದಾರೆ. ಜನವರಿ 1 ರಿಂದ ಆಗಸ್ಟ್ 31ರವರೆಗೆ 242 ಬಾರಿ ಗಡಿಯಾಚೆಗೆ ಗುಂಡಿನ ದಾಳಿ ನಡೆದಿದೆ. ಹಾಗೆಯೇ ಅಂತಾರಾಷ್ಟ್ರೀಯ ಗಡಿಯಲ್ಲೂ ಕೂಡ ಉಲ್ಲಂಘನೆ ನಡೆದಿದೆ.

Over 3,000 Ceasefire Violations By Pakistan Along LoC

ಈ ವರ್ಷ ಕದನವಿರಾಮ ಉಲ್ಲಂಘನೆ ಸಂದರ್ಭದಲ್ಲಿ ಎಂಟು ಮಂದಿ ಸೈನಿಕರು ಹುತಾತ್ಮರಾಗಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ. ಸಾಕಷ್ಟು ಘಟನೆಯಲ್ಲಿ ಸಾರ್ವಜನಿಕರು, ಮಹಿಳೆ, ಮಕ್ಕಳು ಸಾವನ್ನಪ್ಪಿದ್ದಾರೆ. ಹಲವು ಮನೆ, ಕಟ್ಟಡಗಳು ನೆಲಸಮಗೊಂಡಿವೆ.

ಶುಕ್ರವಾರ ಪಾಕಿಸ್ತಾನ ನಡೆಸಿದ ಗುಂಡಿನ ದಾಳಿಯಲ್ಲಿ ಎಲ್‌ಒಸಿ ಬಳಿ ವಾಸವಿರುವ ಮಹಿಳೆಗೆ ಗುಂಡು ತಗುಲಿದೆ. ಕೊರೊನಾ ಸೋಂಕಿನಿಂದಾಗಿ ಕದನ ವಿರಾಮ ಉಲ್ಲಂಘನೆ ಕಡಿಮೆಯಾಗಿದೆ.

ಪಾಕಿಸ್ತಾನದಲ್ಲಿ 3 ಲಕ್ಷ ಮಂದಿಗೆ ಕೊರೊನಾ ಸೋಂಕು ತಗುಲಿದೆ, ಭಾರತದಲ್ಲಿ 53 ಲಕ್ಷ ಮಂದಿಗೆ ಸೋಂಕು ತಗುಲಿದೆ.

ಈ ವರ್ಷ ಜೂನ್‌ವರೆಗೆ 2432 ಬಾರಿ ಕದನವಿರಾಮ ಉಲ್ಲಂಘನೆ ನಡೆದಿದೆ.2019ರಲ್ಲಿ 2 ಸಾವಿರ ಬಾರಿ ಕದನ ವಿರಾಮ ಉಲ್ಲಂಘಿಸಲಾಗಿತ್ತು. ಎಲ್‌ಎಸಿಯಲ್ಲಿ ಚೀನಾ ಹಾಗೂ ಭಾರತ ನಡುವೆ ಸಂಘರ್ಷ ನಡೆಯುತ್ತಿದ್ದ ಸಂದರ್ಭದಲ್ಲಿ ಪಾಕಿಸ್ತಾನವು ಪರಿಸ್ಥಿತಿಯ ಲಾಭ ಪಡೆದುಕೊಂಡಿತ್ತು.

English summary
There have been 3,186 ceasefire violations by Pakistan along the LoC (Line of Control) in Jammu over the past eight months (from January 1 to September 7), the government told Parliament this week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X