ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶ್ಮೀರ ಕಣಿವೆಯ 200ಕ್ಕೂ ಹೆಚ್ಚು ಯುವಕರು ಪಾಕ್‌ ವೀಸಾದೊಂದಿಗೆ ನಾಪತ್ತೆ: ಗುಪ್ತಚರ ಸಂಸ್ಥೆ ಎಚ್ಚರಿಕೆ

|
Google Oneindia Kannada News

ನವದೆಹಲಿ, ಜೂನ್ 26: ಕಾಶ್ಮೀರ ಕಣಿವೆಯಿಂದ 200 ಕ್ಕೂ ಹೆಚ್ಚು ಯುವಕರು ಪಾಕಿಸ್ತಾನದ ವೀಸಾದೊಂದಿಗೆ ನಾಪತ್ತೆಯಾಗಿರುವ ಬೆಚ್ಚಿ ಬೀಳಿಸುವ ಸುದ್ದಿಯನ್ನು ಗುಪ್ತಚರ ಸಂಸ್ಥೆ ತಿಳಿಸಿದ್ದು, ಭದ್ರತಾ ಸಂಸ್ಥೆಗಳಿಗೆ ತಲೆ ನೋವಾಗಿ ಪರಿಣಮಿಸಲಿದೆ. ನಾಪತ್ತೆಯಾದ ಎಲ್ಲಾ ಯುವಕರು ಪಾಕಿಸ್ತಾನಿ ವೀಸಾಗಳನ್ನು ಹೊಂದಿದ್ದರು ಎನ್ನಲಾಗಿದೆ.

ಪಾಕಿಸ್ತಾನವು ಈ ನಾಪತ್ತೆಯಾದ 200 ಕ್ಕೂ ಯುವಕರಿಗೆ ಭಯೋತ್ಪಾದಕ ಚಟುವಟಿಕೆಗಳಿಗೆ ತರಬೇತಿ ನೀಡುತ್ತಿದೆ ಎಂದು ಭದ್ರತಾ ಸಂಸ್ಥೆಗಳು ಶಂಕಿಸಿವೆ. ಜನವರಿ 2017 ರಿಂದ ಜಮ್ಮು ಮತ್ತು ಕಾಶ್ಮೀರದ 399 ಯುವಕರಿಗೆ ಪಾಕಿಸ್ತಾನದ ಹೈಕಮಿಷನ್ ಪಾಕಿಸ್ತಾನ ವೀಸಾಗಳನ್ನು ನೀಡಿದೆ ಅದರಲ್ಲಿ 218 ಮಂದಿ ಬಗ್ಗೆ ಇನ್ನೂ ಕೂಡ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎನ್ನಲಾಗಿದೆ.

Over 200 Youths From Jammu and Kashmir With Pak Visa Goes Missing

ಜಮ್ಮು-ಕಾಶ್ಮೀರದ ತ್ರಾಲ್‌ನಲ್ಲಿ ಎನ್‌ಕೌಂಟರ್‌: ಓರ್ವ ಉಗ್ರನ ಹತ್ಯೆ ಜಮ್ಮು-ಕಾಶ್ಮೀರದ ತ್ರಾಲ್‌ನಲ್ಲಿ ಎನ್‌ಕೌಂಟರ್‌: ಓರ್ವ ಉಗ್ರನ ಹತ್ಯೆ

ಫೆಬ್ರವರಿ 14, 2019 ರಂದು ಪುಲ್ವಾಮ ದಾಳಿಯ ಮಾದರಿಯಲ್ಲಿ ಕಣಿವೆಯಲ್ಲಿ ಹೆಚ್ಚಿನ ಭಯೋತ್ಪಾದಕ ದಾಳಿಗಳನ್ನು ನಡೆಸಲು ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರದ ಯುವಕರನ್ನು ತನ್ನ ಬಲೆಗೆ ಬೀಳಿಸುತ್ತಿದೆ ಎಂದು ಗುಪ್ತಚರ ಮೂಲಗಳು ನಮ್ಮ ಅಂಗಸಂಸ್ಥೆ ಚಾನೆಲ್ ವಿಯಾನ್‌ಗೆ ತಿಳಿಸಿವೆ. ಇದಕ್ಕಾಗಿ ಯುವಕರಿಗೆ ಸೂಕ್ತವಾಗಿ ತರಬೇತಿ ನೀಡಲಾಗುತ್ತದೆ, ಅವರಿಗೆ ಎಲ್ಲಾ ರೀತಿಯ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಾಗಿಸಲು ತರಬೇತಿ ನೀಡಲಾಗುತ್ತದೆ ಎಂದು ಹೇಳಲಾಗಿದೆ.

English summary
200 youths from Jammu and Kashmir with Pakistani visa went missing with the authorities, it set off alarm bells as intelligence agencies
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X