ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ: ವಿಷಾನಿಲ ಉಸಿರಾಡಿದ 150ಕ್ಕೂ ಹೆಚ್ಚು ಶಾಲಾ ಮಕ್ಕಳು ಅಸ್ವಸ್ಥ

ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಯಾರ ಸ್ಥಿತಿಯೂ ಗಂಭೀರವಾಗಿಲ್ಲ. ಆದರೆ, ವಿದ್ಯಾರ್ಥಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.

|
Google Oneindia Kannada News

ನವದೆಹಲಿ, ಮೇ 6: ವಿಷಾನಿಲ ಸೋರಿಕೆಯಿಂದಾಗಿ ದಕ್ಷಿಣ ದೆಹಲಿಯ ಸರ್ಕಾರಿ ಶಾಲೆಯೊಂದರ ಸುಮಾರು 150 ವಿದ್ಯಾರ್ಥಿಗಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಯಾರ ಸ್ಥಿತಿಯೂ ಗಂಭೀರವಾಗಿಲ್ಲ ಎಂಬುದೇ ಸಮಾಧಾನಕರ ವಿಚಾರ. ಆದರೆ, ವಿದ್ಯಾರ್ಥಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.

Over 150 Students Hospitalized After Gas Leak Near South Delhi School

ಏನಿದು ಪ್ರಕರಣ?
ದಕ್ಷಿಣ ದೆಹಲಿಯ ತುಘಲಕಾಬಾದ್ ಪ್ರಾಂತ್ಯದಲ್ಲಿರುವ ರೈಲ್ವೇ ಕಾಲೋನಿಯಲ್ಲಿರುವ ರಾಣಿ ಝಾನ್ಸಿ ಸರ್ವೋದಯ ಕನ್ಯಾ ವಿದ್ಯಾಲಯವು ಎಂದಿನಂತೆ ಶನಿವಾರವೂ ಆರಂಭವಾಗಿತ್ತು.

ಶಾಲೆಗೆ ಪಕ್ಕದಲ್ಲೇ ಅನಿಲ ಸಿಲಿಂಡರ್ ಗಳ ಡಿಪೋ ಒಂದಿದ್ದು, ಇದರಲ್ಲಿನ ಸಿಲಿಂಡರ್ ನಲ್ಲಿನ ದೋಷದಿಂದಾಗಿ ಅನಿಲ ಸೋರಿಕೆಯಾಗಿದೆ. ಹೀಗೆ ಸೋರಿಕೆಯಾದ ಅನಿಲವು ಪಕ್ಕದಲ್ಲೇ ಇದ್ದ ಶಾಲೆಯ ಕೆಲ ಕಿಟಕಿಗಳ ಮೂಲಕ ಆಯಾ ತರಗತಿಗಳನ್ನು ಪ್ರವೇಶಿಸಿದೆ. ಇದನ್ನು ಉಸಿರಾಡಿದ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆಂದು ಮೂಲಗಳು ತಿಳಿಸಿವೆ.

ಅಸ್ವಸ್ಥರಾಗುತ್ತಿದ ಮಕ್ಕಳನ್ನು ತಕ್ಷಣವೇ ಆಸ್ಪತ್ರೆಗೆ ರವಾನಿಸಲಾಗಿದೆ. ಅಲ್ಲದೆ, ಶಾಲೆಯ ಇತರ ತರಗತಿಗಳಲ್ಲಿದ್ದ ಮಕ್ಕಳನ್ನೂ ತಕ್ಷಣವೇ ಶಾಲೆಯಿಂದ ಹೊರಗೆ ಕಳುಹಿಸಲಾಗಿದೆ.

English summary
Over 150 students from a government school in south Delhi were hospitalized after a gas leak from a container nearby was reported this morning. All the students from the school have been evacuated after the incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X