ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಂದೇ ಭಾರತ್ ಮಿಷನ್: 14 ಲಕ್ಷ ಅನಿವಾಸಿ ಭಾರತೀಯರನ್ನು ಕರೆತರಲಾಗಿದೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 17: ಕೊರೊನಾ ಸೋಂಕು ತೀವ್ರವಾದ ಕಾಲಘಟ್ಟದಲ್ಲಿ ಕೇಂದ್ರ ಸರ್ಕಾರ ರೂಪಿಸಿರುವ ಭಾರತ್ ಮಿಷನ್ ಯೋಜನೆಯಿಂದ 14 ಲಕ್ಷಕ್ಕೂ ಅಧಿಕ ಅನಿವಾಸಿ ಭಾರತೀಯರನ್ನು ಕರೆತರಲಾಗಿದೆ.

ಭಾರತೀಯ ಸಮುದಾಯ ಕಲ್ಯಾಣ ನಿಧಿಯಿಂದ (ಐಸಿಡಬ್ಲ್ಯುಎಫ್) ತೊಂದರೆಯಲ್ಲಿರುವ 62,000 ಭಾರತೀಯ ಪ್ರಜೆಗಳಿಗೆ ವಿದೇಶಗಳಲ್ಲಿನ ಭಾರತೀಯ ಮಿಷನ್‌ಗಳು ಸಹಾಯ ಮಾಡಿವೆ ಎಂದು ಮುರಳೀಧರನ್ ಹೇಳಿದ್ದಾರೆ.

ಕೊವಿಡ್ 19 ಲಸಿಕೆಗಳಿಗಿಂತ ಮಾಸ್ಕ್ ಹೆಚ್ಚು ಸುರಕ್ಷಿತ ಎಂದ ವಿಜ್ಞಾನಿಗಳುಕೊವಿಡ್ 19 ಲಸಿಕೆಗಳಿಗಿಂತ ಮಾಸ್ಕ್ ಹೆಚ್ಚು ಸುರಕ್ಷಿತ ಎಂದ ವಿಜ್ಞಾನಿಗಳು

ಕೊವಿಡ್-19ರ ದೃಷ್ಟಿಯಿಂದ ಹಲವಾರು ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಸಂಸತ್ತಿನ ಮುಂಗಾರು ಅಧಿವೇಶನವು ಅಕ್ಟೋಬರ್ 1 ರಂದು ಮುಕ್ತಾಯಗೊಳ್ಳಲಿದೆ.

Over 14 Lakh Indian Citizens Brought Back To India During COVID-19 Pandemic

ರಾಜ್ಯಸಭೆಯಲ್ಲಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ ಪ್ರಕ್ರಿಯೆ ನಡೆಯುತ್ತಿದ್ದರೆ, ಲೋಕಸಭಾ ಸಭೆ ಮಧ್ಯಾಹ್ನ 3 ರಿಂದ ಸಂಜೆ 7 ರವರೆಗೆ ನಡೆಯುತ್ತಿದೆ.

ವಂದೇ ಭಾರತ್ ಮಿಷನ್ ಇನ್ನೂ ಚಾಲ್ತಿಯಲ್ಲಿದೆ, ಮತ್ತಷ್ಟು ಅನಿವಾಸಿಯರನ್ನು ಕರೆತರಲಾಗುತ್ತದೆ ಎಂದು ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ವಿ ಮುರಳೀಧರನ್ ಅವರು ರಾಜ್ಯಸಭೆಗೆ ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ಲಿಖಿತ ಹೇಳಿಕೆ ನೀಡಿದ ಮುರಳೀಧರನ್ ಅವರು, ಕೊರೋನಾ ಸಾಂಕ್ರಾಮಿಕ ಆರಂಭವಾದ ದಿನದಿಂದ ಇಂದಿನವರೆಗೂ ವಿದೇಶಗಳಲ್ಲಿ ಅತಂತ್ರರಾಗಿದ್ದ 14,12,835 ಮಂದಿ ಅನಿವಾಸಿ ಭಾರತೀಯರನ್ನು ಕೇಂದ್ರ ಸರ್ಕಾರದ ವಂದೇ ಭಾರತ್ ಮಿಷನ್ ಯೋಜನೆಯಡಿಯಲ್ಲಿ ಭಾರತಕ್ಕೆ ಕರೆತರಲಾಗಿದೆ.

ಈ ಪೈಕಿ 56,874 ವಿದ್ಯಾರ್ಥಿಗಳೂ ಕೂಡ ಸೇರಿದ್ದಾರೆ. ಹಾಗೆಯೇ ಇದೇ ಯೋಜನೆ ಅಡಿಯಲ್ಲಿ ಭಾರತಕ್ಕೆ ಬಂದ ಅನಿವಾಸಿಗಳ ಪೈಕಿ 3,248 ಮಂದಿಗೆ ಕೋವಿಡ್ ಸೋಂಕು ತಗುಲಿದೆ. ಅಂತೆಯೇ ಈ ಮಿಷನ್ ಇನ್ನೂ ಚಾಲ್ತಿಯಲ್ಲಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಅನಿವಾಸಿಗಳನ್ನು ಭಾರತಕ್ಕೆ ಕರೆ ತರಲಾಗುತ್ತದೆ ಎಂದು ಹೇಳಿದ್ದಾರೆ.

ಈ ಹಿಂದೆ ಆಗಸ್ಟ್ 4ರಂದು ಪಾಕಿಸ್ತಾನ ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಲಡಾಖ್ ಭೂಭಾಗಗಳನ್ನು ಹೊಂದಿರುವ ನಕ್ಷೆಯನ್ನು ಪಾಕಿಸ್ತಾನ ಜಾಗತಿಕ ವೇದಿಕೆಯಲ್ಲಿಟ್ಟಿತ್ತು. ಇದನ್ನು ವಿರೋಧಿಸಿ ಭಾರತ ಸಭೆಯಿಂದಲೇ ಹೊರ ನಡೆದಿತ್ತು.

English summary
Over 14 lakh Indian citizens from all around the globe were repatriated during the ongoing COVID-19 crisis, according to the Ministry of External Affairs (MEA) on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X