ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1000ಕ್ಕೂ ಹೆಚ್ಚು ವಿದೇಶಿ ಉತ್ಪನ್ನಗಳನ್ನು ಬ್ಯಾನ್ ಮಾಡಿದ ಅರೆ ಸೈನಿಕ ಪಡೆ ಕ್ಯಾಂಟೀನ್

|
Google Oneindia Kannada News

ನವ ದೆಹಲಿ, ಜೂನ್ 1: ಕೆಪಿಕೆಬಿ (ಕೇಂದ್ರೀಯ ಪೊಲೀಸ್ ಕಲ್ಯಾಣ ಭಂಡಾರ) ಕ್ಯಾಂಟೀನ್​ಗಳಲ್ಲಿ ದೇಶದಲ್ಲಿ ತಯಾರಾಗುವ ಉತ್ಪನ್ನಗಳನ್ನು ಮಾತ್ರ ಮಾರಾಟ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿತ್ತು. ಇದೀಗ ಅಲ್ಲಿ 1000ಕ್ಕೂ ಹೆಚ್ಚು ವಿದೇಶಿ ಉತ್ಪನ್ನಗಳ ನಿಷೇಧ ಮಾಡಲಾಗಿದೆ.

ಮೈಕ್ರೋವೇವ್ ನಿಂದ ಹಿಡಿದು ಪಾದರಕ್ಷೆಯವರೆಗೆ ಎಲ್ಲ ವಿದೇಶಿ ಬ್ರಾಂಡ್ ವಸ್ತುಗಳನ್ನು ನಿಷೇಧ ಮಾಡಲಾಗಿದೆ. ಟಾಮಿ ಹಿಲ್ಫಿಗರ್ ಶರ್ಟ್‌ ನಂತಹ ಪ್ರತಿಷ್ಠಿತ ಬ್ರಾಂಡ್ ಶರ್ಟ್‌ ಸೇರಿದಂತೆ, 1000ಕ್ಕೂ ಹೆಚ್ಚು ವಿದೇಶಿ ಉತ್ಪನ್ನಗಳಿಗೆ ಗುಡ್ ಬಾಯ್ ಹೇಳಲಾಗಿದೆ.

ಸಿ.ಎ.ಪಿ.ಎಫ್ ಕ್ಯಾಂಟೀನ್ ನಲ್ಲಿ 'ಸ್ವದೇಶಿ' ಮಂತ್ರ: ಆದೇಶಕ್ಕೆ ತಡೆಸಿ.ಎ.ಪಿ.ಎಫ್ ಕ್ಯಾಂಟೀನ್ ನಲ್ಲಿ 'ಸ್ವದೇಶಿ' ಮಂತ್ರ: ಆದೇಶಕ್ಕೆ ತಡೆ

ಬಿಎಸ್​ಎಫ್, ಐಟಿಬಿಪಿ, ಅಸ್ಸಾಂ ರೈಫಲ್ಸ್​ನ, ಎಸ್​ಎಸ್​ಬಿ, ಸಿಆರ್​ಪಿಎಫ್, ಸಿಐಎಸ್​ಎಫ್ ಹಾಗೂ ಎನ್​ಎಸ್​ಜಿಯ 10 ಲಕ್ಷ ಸಿಬ್ಬಂದಿಗಳು ಅವರ 50 ಲಕ್ಷ ಕುಟುಂಬ ಸದಸ್ಯರು ಕೇಂದ್ರೀಯ ಪೊಲೀಸ್ ಕ್ಯಾಂಟೀನ್ ಉತ್ಪನ್ನಗಳನ್ನು ಉಪಯೋಗಿಸಲಿದ್ದಾರೆ.

Over 1000 Imported Products Delisted From Paramilitary Canteen

ಇದರಲ್ಲಿ ಸ್ಕೇಚೆರ್ಸ್, ಫೆರೆರೊ, ರೆಡ್ ಬುಲ್, ವಿಕ್ಟ್ರೋನೆಕ್ಸ್​, ಸಫೀಲೋ (ಪೊಲಾರೈಡ್ ಕ್ಯಾರೆರಾ) ಸೇರಿ 7 ಕಂಪನಿಗಳಿಂದ ಆಮದು ಮಾಡಿಕೊಳ್ಳುತ್ತಿದ್ದ ಉತ್ಪನ್ನಗಳನ್ನು ಸೇರಿದೆ. ಇವೆಲ್ಲ ಕಂಪನಿಯ ಉತ್ಪನ್ನಗಳು ಬ್ಯಾನ್ ಮಾಡಲಾಗಿದೆ.

ದೇಶದಲ್ಲಿ ಇರುವ ಅರೆ ಸೈನಿಕ ಕ್ಯಾಂಟೀನ್​ಗಳಲ್ಲಿ ಜೂನ್ 1 ರಿಂದ ಸ್ವದೇಶಿ ಉತ್ಪನ್ನಗಳು ಮಾತ್ರ ದೊರೆಯಲಿವೆ. ಹಲವು ಕಂಪನಿಗಳಿಗೆ ತಿಳಿಸದೆ, ವಸ್ತುಗಳನ್ನು ನಿಷೇಧಿಸಲಾಗಿದೆ.

English summary
From Microwave to Footwear, over 1000 imported products delisted from paramilitary canteens.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X