• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಾಳೆ ನಿವೃತ್ತಿ ಹೊಂದಲಿದ್ದಾರೆ ಸಿಜೆಐ ರಂಜನ್ ಗೊಗೊಯ್: z+ಭದ್ರತೆ ಮುಂದುವರಿಕೆ

By ಮಧುಕರ್ ಶೆಟ್ಟಿ
|
Google Oneindia Kannada News

ನವದೆಹಲಿ ನವೆಂಬರ್ 16: ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ಅಧಿಕಾರಾವಧಿ ನಾಳೆಗೆ(ನವೆಂಬರ್17) ಅಂತ್ಯವಾಗಲಿದೆ. ಆದರೆ ಅವರಿಗೆ ನೀಡಲಾಗಿರುವ z+ಭದ್ರತೆಯನ್ನು ಮುಂದುವರಿಯಲಿದೆ.ಸಿಜೆಐ ರಂಜನ್ ಗೊಗೊಯ್ ಅಸ್ಸಾಂ ನಲ್ಲಿ ನಿವೃತ್ತಿ ಜೀವನವನ್ನು ಕಳೆಯಲಿದ್ದಾರೆ.

ರಂಜನ್ ಗೊಗೊಯ್ ಅವರ ದಿಬ್ರುಘರ್‌ನಲ್ಲಿರುವ ಮನೆ ಹಾಗೂ ಗುವಾಹಟಿಯಲ್ಲಿರುವ ಮತ್ತೊಂದು ಮನೆಗೂ ಪೊಲೀಸ್‌ ಭದ್ರತೆಯನ್ನು ನೀಡಲಾಗಿದೆ. ಅಯೋಧ್ಯೆ ತೀರ್ಪು ಹಿನ್ನೆಲೆಯಲ್ಲಿ ಮುಖ್ಯನ್ಯಾಯಮೂರ್ತಿ ಹಾಗೂ ನ್ಯಾಯಪೀಠದ ಇತರ ನಾಲ್ವರು ನ್ಯಾಯಮೂರ್ತಿಗಳಿಗೆ z+ಭದ್ರತೆಯನ್ನು ನೀಡಲಾಗಿದೆ.

ಅಯೊಧ್ಯೆ ತೀರ್ಪಿನ ನಂತರ ದೇವಾಲಯಕ್ಕೆ ತೆರಳಿದ ಸಿಜೆಐ, ಪತ್ನಿ: ವಿಡಿಯೋ ವೈರಲ್ಅಯೊಧ್ಯೆ ತೀರ್ಪಿನ ನಂತರ ದೇವಾಲಯಕ್ಕೆ ತೆರಳಿದ ಸಿಜೆಐ, ಪತ್ನಿ: ವಿಡಿಯೋ ವೈರಲ್

ರಾಜಕೀಯ ಹಾಗೂ ಧಾರ್ಮಿಕ ಸೂಕ್ಷ್ಮತೆಯ ಪ್ರಕರಣವಾದ ಅಯೋಧ್ಯಾ ತೀರ್ಪು ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳ ಭದ್ತೆಯನ್ನು z+ಗೆ ಏರಿಸಲಾಗಿತ್ತು. ಶತಮಾನಗಳಷ್ಟು ಹಳೆಯ ಪ್ರಕರಣವಾದ ರಾಮಜನ್ಮಭೂಮಿ ವಿವಾದವನ್ನು ಇತ್ಯರ್ಥಗೊಳಿಸುವ ಜವಾಬ್ಧಾರಿ ಸಿಜೆಐ ಪೀಠದ ಮುಂದಿತ್ತು. ಅಕ್ಟೋಬರ್ 16ರವರೆಗೆ ಸುಧೀರ್ಘ ವಿಚಾರಣೆಯನ್ನು ಈ ಪೀಠ ನಡೆಸಿತ್ತು. ಇದೇ ತಿಂಗಳ 9ರಂದು ಐತಿಹಾಸಿಕ ತೀರ್ಪನ್ನು ನೀಡಲಾಗಿತ್ತು.

z+ ಸೆಕ್ಯೂರಿಟಿ ಭಾರತದಲ್ಲಿ ನೀಡುವ ಉನ್ನತ ಭದ್ರತೆಯಾಗಿದೆ. ಪ್ರದಾನಿಗಳಿಗೆ ನೀಡುವ ಎಸ್‌ಪಿಜಿ ತಂಡದ ಬಳಿಕ ರಾಷ್ಟ್ರದ ಅತ್ಯುನ್ನದ ಭದ್ರತಾ ತಂಡ ಇದಾಗಿದೆ. ಸಿಎಪಿಎಫ್ ಹಾಗೂ ಸಿಆರ್‌ಪಿಎಫ್‌ನ 55 ಸಿಬ್ಬಂದಿಗಳು ಭದ್ರತೆಯನ್ನು ನೀಡುತ್ತಾರೆ. ಇದರಲ್ಲಿ 10 ಎನ್‌ಎಸ್‌ಜಿ ಕಮಾಂಡೋಗಳೂ ಇರುತ್ತಾರೆ.

English summary
Outgoing Chief Justice of India Ranjan Gogoi, who is set to retire on November 17, will enjoy Z plus security. CJI Gogoi is likely to settle in Assam after his retirement. The security of the CJI and four other judges was beefed up ahead of the delivery of Ayodhya verdict.he left engine failing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X