ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

8 ಸಂಸದರ ಅಮಾನತು: ಸಂಸತ್ತಿನ ಆವರಣದಲ್ಲಿ ಅನಿರ್ದಿಷ್ಟಾವಧಿ ಧರಣಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 21: ರಾಜ್ಯಸಭೆಯಲ್ಲಿ ಕೃಷಿ ಮಸೂದೆ ಚರ್ಚೆ ವೇಳೆ ಗದ್ದಲ ಮಾಡಿ ಅನುಚಿತ ವರ್ತನೆ ತೋರಿದ ಆರೋಪದ ಹಿನ್ನೆಲೆ ವಿಪಕ್ಷದ ಎಂಟು ಮಂದಿ ಸಂಸದರನ್ನು ಒಂದು ವಾರಗಳ ಕಲಾಪದಿಂದ ಅಮಾನತು ಮಾಡಲಾಗಿದೆ.

ಹಾಸಿಗೆ, ದಿಂಬು ತೆಗೆದುಕೊಂಡು ಹೋಗಿರುವ ಆಮ್ ಆದ್ಮಿ ಪಕ್ಷದ ಸಂಜಯ್ ಸೀಮಗ್ ಸಂಸತ್ತಿನ ಆವರಣದಲ್ಲಿಯೇ ಧರಣಿ ಕೂತಿದ್ದಾರೆ.ರಾಜ್ಯಸಭೆಯಲ್ಲಿ ಕೃಷಿ ಮಸೂದೆ ಮಂಡನೆ ವೇಳೆ ಕೋಲಾಹಲ ಸೃಷ್ಟಿಯಾಗಿತ್ತು, ಉಪಸಭಾಪತಿ ಎದುರೇ ರೂಲ್ ಬುಕ್ ಹರಿದುಹಾಕಿದ್ದರು.

ರಾಜ್ಯಸಭೆಯಲ್ಲಿ ಅನುಚಿತ ವರ್ತನೆ: ಸಂಸದರ ಅಮಾನತುರಾಜ್ಯಸಭೆಯಲ್ಲಿ ಅನುಚಿತ ವರ್ತನೆ: ಸಂಸದರ ಅಮಾನತು

ಭಾನುವಾರ ಕೋಲಾಹಲ ಸೃಷ್ಟಿಯಾಗಿದ್ದರೆ ಸೋಮವಾರವೂ ಅದರ ಬಿಸಿ ಇತ್ತು, ಅಮಾನತುಗೊಂಡ ಸದಸ್ಯರನ್ನು ಹೊರನಡೆಯಲು ಸೂಚಿಸಿದಾಗ ಮತ್ತಷ್ಟು ಗೊಂದಲ ವಾತಾವರಣ ನಿರ್ಮಾಣವಾಯಿತು.

Opposition Parties Hit Out At Govt Over Suspension Of 8 MPs, Hold Protest At Parliament Premises

ಕೃಷಿ ಮಸೂದೆ ರೈತರ ವಿರೋಧಿಯಾಗಿದ್ದು, ಕೇಂದ್ರ ಸರ್ಕಾರ ಮರಣ ಶಾಸನ ಬರೆಯುತ್ತಿದೆ ಎಂದು ಆರೋಪಿಸಿರುವ ಸಂಸದರು ಇದೀಗ ಅಮಾನತು ವಿರೋಧಿಸಿ ಧರಣಿ ಕುಳಿತಿದ್ದಾರೆ.

ಅಶಿಸ್ತಿನಿಂದ ನಡೆದುಕೊಂಡ ರಾಜ್ಯಸಭಾ ಸದಸ್ಯರಾದ ಡೆರೆಕ್ ಒಬ್ರಿಯಾನ್, ಸಂಜಯ್ ಸಿಂಗ್, ರಾಜು ಸತವ್, ಕೆಕೆ ರಾಕೇಶ್, ರಿಪೂನ್ ಬೋರಾ, ಡೋಲಾ ಸೇನ್, ಸೈಯದ್ ನಜೀರ್ ಹುಸೇನ್ ಮತ್ತು ಎಲಮರನ್ ಕರೀಮ್ ಅವರನ್ನು ಎಂಟು ದಿನ ಅಮಾನತು ಮಾಡಲಾಗಿದೆ.

ಸಂಸದರ ಅಮಾನತು ನಿರ್ಧಾರ ಪ್ರಕಟಿಸುವ ಮುನ್ನ ಮಾತನಾಡಿದ ಸಭಾಧ್ಯಕ್ಷ ವೆಂಕಯ್ಯನಾಯ್ಡು ನಿನ್ನೆ ಬೆಳವಣಿಗೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯಸಭೆಗೆ ನಿನ್ನೆ ಕೆಟ್ಟ ದಿನ, ಉಪ ಸಭಾಧ್ಯಕ್ಷರಿಗೆ ಸದಸ್ಯರು ದೈಹಿಕ ಬೆದರಿಕೆ ಹಾಕಿದ್ದಾರೆ. ಕರ್ತವ್ಯ ನಿಭಾಯಿಸಲು ಅಡ್ಡಿಪಡಿಸಿದ್ದಾರೆ ಇದೊಂದು ದುರಾದೃಷ್ಟವಕರ ಬೆಳವಣಿಗೆ ಸಂಸದರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಬೇಸರ ವ್ಯಕ್ತಪಡಿಸಿದ್ದರು.

English summary
Opposition parties hit out at the government at the government on Monday over the suspension of 8 Rajyasabha MPs and holding an indefinite protest at Parliament premises against Move.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X