ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಜೆಐ ವಿರುದ್ಧ ವಿಪಕ್ಷಗಳಿಂದ ಮಹಾಭಿಯೋಗ ನಿಲುವಳಿ ಮಂಡನೆ

|
Google Oneindia Kannada News

ನವದೆಹಲಿ, ಏಪ್ರಿಲ್ 20: ಸುಪ್ರೀಂಕೋರ್ಟಿನ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ಮಹಾಭಿಯೋಗ (impeachment) ನಿಲುವಳಿಯನ್ನು ಕಾಂಗ್ರೆಸ್ ನೇತೃತ್ವದ ಏಳು ವಿಪಕ್ಷಗಳು ಮಂಡಿಸಿವೆ.

ಸಿಜೆ ವಿರುದ್ಧ ಕೋರ್ಟ್ ಹಾಲ್ ನಲ್ಲೇ ಪ್ರಶಾಂತ್ ಭೂಷಣ್ ಆಕ್ರೋಶ ಸಿಜೆ ವಿರುದ್ಧ ಕೋರ್ಟ್ ಹಾಲ್ ನಲ್ಲೇ ಪ್ರಶಾಂತ್ ಭೂಷಣ್ ಆಕ್ರೋಶ

ಭಾರತೀಯ ಸಂವಿಧಾನದ 217 ಮತ್ತು 124(4)ನೇ ವಿಧಿಯ ಅಡಿಯಲ್ಲಿ ದೀಪಕ್ ಮಿಶ್ರಾ ಅವರನ್ನು ಪದಚ್ಯುತಿಗೊಳಿಸುವಂತೆ ಒತ್ತಾಯಿಸಿ ಮಹಾಭಿಯೋಗ ನಿಲುವಳಿ ಮಂಡಿಸಲಾಗಿದೆ.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಕಾಂಗ್ರೆಸ್, ನ್ಯಾಶ್ನಲ್ ಕಾಂಗ್ರೆಸ್ ಪಕ್ಷ, ಸಿಪಿಐ-ಎಂ ಮತ್ತು ಸಿಪಿಐ, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷಗಳು ಈ ನಿಲುವಳಿಗೆ ಸಹಿ ಮಾಡಿವೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಮುಖಂಡ ಗುಲಾಬ್ ನಬಿ ಆಜಾದ್, '64 ಸಂಸದರು ಈ ನಿಲುವಳಿಗೆ ಸಹಿ ಮಾಡಿದ್ದಾರೆ. ರಾಜ್ಯ ಸಭೆಯ ಚೇರ್ ಮನ್ ಆಗಿರುವ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ನಮ್ಮ ಬೇಡಿಕೆಗೆ ಸ್ಪಂದಿಸುತ್ತಾರೆ ಎಂಬ ವಿಶ್ವಾಸವಿದೆ' ಎಂದಿದ್ದಾರೆ.

Opposition moves impeachment motion against CJI Dipak Misra

ದೀಪಕ್ ಮಿಶ್ರಾ ಅವರು ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದಲೂ ನ್ಯಾಯಾಂಗಕ್ಕೆ ಸಂಬಂಧಿಸಿಸದಮತೆ ಹಲವು ವಿವಾದಗಳು ಸೃಷ್ಟಿಯಾಗಿವೆ, ಮತ್ತು ಹಲವು ಪ್ರಕರಣಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಲಾಗಿಲ್ಲ ಎಂದು ವಿಪಕ್ಷಗಳು ಆರೋಪಿಸಿವೆ.

ಪ್ರಕರಣಗಳನ್ನು ಇತರೆ ನ್ಯಾಯಮೂರ್ತಿಗಳಿಗೆ ಹಂಚುವಾಗ ಇರುವ ಮಾನದಂಡ ಮತ್ತು ಈ ಹಂಚಿಕೆಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಇರುವ ಆಡಳಿತಾತ್ಮಕ ಅಧಿಕಾರದ ಕುರಿತು ಸ್ಪಷ್ಟನೆ ನೀಡುವಂತೆ ಕೋರಿ ಸುಪ್ರೀಂ ಕೋರ್ಟಿನಲ್ಲಿಇತ್ತೀಚೆಗಷ್ಟೇ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
The Opposition parties on Friday moved an impeachment motion in the Rajya Sabha seeking removal of Chief Justice of India (CJI) Dipak Misra. Seven Opposition parties, led by the Congress, have submitted the motion to initiate impeachment proceedings against the CJI.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X