ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂರ್ಖ ಸರ್ಕಾರ ಮಾತ್ರ ಭದ್ರತೆಯ ಗುಟ್ಟು ರಟ್ಟು ಮಾಡುತ್ತದೆ: ಚಿದಂಬರಂ

|
Google Oneindia Kannada News

ನವದೆಹಲಿ, ಮಾರ್ಚ್ 30: "ಕೆವಲ ಮೂರ್ಖ ಸರ್ಕಾರ ಮಾತ್ರವೇ ದೇಶಡ ಭದ್ರತಾ ಗೌಪ್ಯತೆಯನ್ನೂ ಬಹಿರಂಗಪಡಿಸುವುದಕ್ಕೆ ಸಾಧ್ಯ" ಎಂದು ಎನ್ ಡಿಎ ಸರ್ಕಾರದ ವಿರುದ್ಧ ಮಾಜಿ ವಿತ್ತ ಸಚಿವ, ಕಾಂಗ್ರೆಸ್ ಮುಖಂಡ ಪಿ ಚಿದಂಬರಂ ಕಿಡಿಕಾರಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಎ ಸ್ಯಾಟ್ ಉಪಗ್ರಹ ಪ್ರತಿರೋಧನ ಅಸ್ತ್ರವನ್ನು ಭಾರತ ಯಶಸ್ವಿಯಾಗಿ ಪರೀಕ್ಷಿಸಿದ ಸಂಗತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರೊಡನೆ ಹಂಚಿಕೊಂಡಿದ್ದನ್ನು ಅವರು ಟೀಕಿಸಿದರು. ನಿಜವಾಗಿಯೂ ಜವಾಬ್ದಾರಿಯಿರುವ ಸರ್ಕಾರವಾದರೆ ಇಂಥ ವಿಷಯಗಳಲ್ಲಿ ಗೌಪ್ಯತೆಯನ್ನು ಕಾಪಾಡಿಕೊಳ್ಳುತ್ತದೆ. ಆದರೆ ಈ ಸರ್ಕಾರ ದೇಶದ ಭದ್ರತೆಗೆ ಸಂಬಂಧಿಸಿದ ಗೌಪ್ಯ ವಿಚಾರವನ್ನೂ ತನ್ನ ಪ್ರಚಾರಕ್ಕೆಂದು ಬಳಸಿಕೊಳ್ಳುವ ಮೂಲಕ ಮೂರ್ಖತನ ಮೆರೆಯುತ್ತಿದೆ ಎಂದು ಅವರು ಮೋದಿ ಸರ್ಕಾರದ ಮೇಲೆ ಕಿಡಿಕಾರಿದರು.

ಮಿಶನ್ ಶಕ್ತಿ ಯಶಸ್ಸಿಗೆ ಅಮೆರಿಕ ಹೇಳಿದ್ದೇನು? ಅದೇನು ವಾರ್ನಿಂಗಾ?! ಮಿಶನ್ ಶಕ್ತಿ ಯಶಸ್ಸಿಗೆ ಅಮೆರಿಕ ಹೇಳಿದ್ದೇನು? ಅದೇನು ವಾರ್ನಿಂಗಾ?!

"ಎ ಸ್ಯಾಟ್ ಯಶಸ್ವೀ ಪರೀಕ್ಷೆಯ ಬಗ್ಗೆ ಈಗ ಘೋಷಣೆ ಮಾಡುವ ಅಗತ್ಯವೇನಿತ್ತು? ಚುನಾವಣೆಯ ಮೇಲೆ ಇದು ಪರಿಣಾಮ ಬೀಳಲಿ ಎಮಬ ಕಾರಣಕ್ಕೇ ಅಲ್ಲವೇ? ಉಪಗ್ರಹವನ್ನು ನಾಶ ಮಾಡುವ ತಂತ್ರಜ್ಞಾನ ಭಾರತದಲ್ಲಿ ಎಂದೋ ಇತ್ತು. ಆದರೆ ಅದನ್ನು ಬೇರೆ ಯಾರೂ ಹೀಗೆ ಹೇಳಿಕೊಂಡು ಪ್ರಚಾರ ಮಾಡಿಕೊಂಡಿರಲಿಲ್ಲ. ಪ್ರಚಾರಕ್ಕಿಂತ ದೇಶದ ಭದ್ರತೆಯ ಗೌಪ್ಯತೆ ಕಾಯುವುದು ಮುಖ್ಯ ಎಂಬುದು ನಮಗೆ ತಿಳಿದಿತ್ತು" ಚಿದಂಬರಂ ಹೇಳಿದರು.

Only foolish government will disclose defence secrets: P Chidambaram

ಭಾರತವು ಉಪಗ್ರಹ ಪ್ರತಿರೋಧಕ ಅಸ್ತ್ರ ಎ-ಸ್ಯಾಟ್ ಅನ್ನು ಯಶಸ್ವೀಯಾಗಿ ಪರೀಕ್ಷಿಸಿದ್ದು, ಇಂಥದೊಂದು ಅಸ್ತ್ರವನ್ನು ಹೊಂದಿರುವ ಜಗತ್ತಿನ ನಾಲ್ಕನೇ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು ಮಾರ್ಚ್ 27 ರಂದು ಪ್ರಧಾನಿ ಮೋದಿ ಘೋಷಿಸಿದ್ದರು. ಅಮೆರಿಕ, ರಷ್ಯಾ, ಚೀನಾ ಬಿಟ್ಟರೆ ಈ ಸಾಲು ಸೇರಿದ ನಾಲ್ಕನೇ ರಾಷ್ಟ್ರವಾಗಿ ಭಾರತ ಇಲೈಟ್ ಕ್ಲಬ್ ಸೇರಿತ್ತು.

English summary
Former finance minister and senior Congress leader P Chidambaram attacks PM Modi government for revealing A-SAT secrets. 'Only foolish government will disclose defence secrets' he said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X