ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಣ್ಣನನ್ನು ಕೊಂಡಾಡಿದ ಪ್ರಿಯಾಂಕಾ ಗಾಂಧಿಗೆ ಟ್ವಿಟ್ಟಿಗರಿಂದ ವ್ಯಂಗ್ಯದ ಬಾಣ

|
Google Oneindia Kannada News

ನವದೆಹಲಿ, ಜುಲೈ 04: "ಕೆಲವರಿಗಷ್ಟೇ ನಿನ್ನ ರೀತಿ ಧೈರ್ಯ ಇರೋಕೆ ಸಾಧ್ಯ. ನಿನ್ನ ನಿರ್ಧಾರಕ್ಕೆ ನನ್ನ ಹೃದಯತುಂಬಿದ ಗೌರವ" ಎಂದು ಸಹೋದರ ರಾಹುಲ್ ಗಾಂಧಿ ರಾಜೀನಾಮೆಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಭಾವುಕರಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಅವರ ಈ ಟ್ವೀಟ್ ಗೆ ಹಲವರು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದು, 'ನಿಮಗೆ ಸಿಂಹಾಸನವನ್ನು ಪಡೆವ ಹಾದಿ ಸುಲಭವಾಯಿತಲ್ಲ' ಎಂದಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ನೈತಿಕ ಹೊಣೆ ಹೊತ್ತು 49 ವರ್ಷ ವಯಸ್ಸಿನ ರಾಹುಲ್ ಗಾಂಧಿ ಅವರು ರಾಜೀನಾಮೆ ಸಲ್ಲಿಸಿದ್ದರು. ಈ ಮೊದಲೇ ಅರು ರಾಜೀನಾಮೆ ಸಲ್ಲಿಸಿದ್ದರೂ ಅವರ ಮನವೊಲಿಸುವ ಪ್ರಯತ್ನ ನಡೆದಿತ್ತು. ಆದರೆ ಬುಧವಾರ ಅಧಿಕೃತವಾಗಿ ತಮ್ಮ ರಾಜೀನಾಮೆಯನ್ನು ಘೋಷಿಸಿದ ರಾಹುಲ್ ಗಾಂಧಿ ಅವರ ನಡೆಯನ್ನು ಸಹೋದರಿ ಪ್ರಿಯಾಕಾ ಗಾಂಧಿ ಶ್ಲಾಘಿಸಿದ್ದರು.

ಮನಸ್ಸಿಗೆ ನೋವಾಗಿದ್ದರಿಂದ ರಾಹುಲ್ ರಾಜೀನಾಮೆ ನೀಡಿರಬಹುದು: ದೇವೇಗೌಡಮನಸ್ಸಿಗೆ ನೋವಾಗಿದ್ದರಿಂದ ರಾಹುಲ್ ರಾಜೀನಾಮೆ ನೀಡಿರಬಹುದು: ದೇವೇಗೌಡ

"ಈ ಸುಂದರ ದೇಶದ ಆದರ್ಶ ಮತ್ತು ಮೌಲ್ಯಗಳನ್ನು ಕಾಪಾಡುವ ಗುರಿ ಹೊತ್ತ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನ ಪಡೆದಿದ್ದು ನನ್ನ ಪುಣ್ಯ. ಈ ದೇಶ ಮತ್ತು ನನ್ ಪಕ್ಷದ ಋಣ ಮತ್ತು ಪ್ರೀತಿ ನನ್ನ ಮೇಲಿದೆ" ಎಂದು ಬುಧವಾರ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು. ಜೊತೆಗೆ ತಮ್ಮ ಬೆಂಬಲಿಗರು, ಕಾಂಗ್ರೆಸ್ ಮುಖಂಡರಿಗೆ ಬಹಿರಂಗ ಪತ್ರವೊಂದನ್ನು ಬರೆದು ಕೃತಜ್ಞತೆ ಸಲ್ಲಿಸಿದ್ದರು.

ಸಹೋದರನ ಧೈರ್ಯವನ್ನು ಮೆಚ್ಚಿಕೊಂಡ ಪ್ರಿಯಾಂಕಾ ಗಾಂಧಿಸಹೋದರನ ಧೈರ್ಯವನ್ನು ಮೆಚ್ಚಿಕೊಂಡ ಪ್ರಿಯಾಂಕಾ ಗಾಂಧಿ

2017 ರಲ್ಲಿ ಸೋನಿಯಾ ಗಾಂಧಿ ಅವರ ನಂತರ ಕಾಂಗ್ರೆಸ್ ಅಧ್ಯಕ್ಷ ಪಟ್ಟಕ್ಕೆ ರಾಹುಲ್ ಗಾಂಧಿ ಏರಿದ್ದರು. "ನಾನು ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುತ್ತೇನೆ. ಮತ್ತು ಮುಮದಿನ ಅಧ್ಯಕ್ಷರನ್ನು ನಾನೇ ಆರಿಸುವುದು ಸಮಂಜಸ ಎಂದು ನನಗನ್ನಿಸುವುದಿಲ್ಲ. ಅದನ್ನು ಪಕ್ಷದ ಬೇರೊಬ್ಬರು ನಿರ್ಧರಿಸಬೇಕು" ಎಂದು ರಾಹುಲ್ ಗಾಂಧಿ ಹೇಳಿದ್ದರು.

ರಾಹುಲ್ ಗಾಂಧಿ ರಾಜೀನಾಮೆ: ಮೆಚ್ಚಿನ ನಾಯಕಗೆ ಭಾವುಕ ಸಂದೇಶರಾಹುಲ್ ಗಾಂಧಿ ರಾಜೀನಾಮೆ: ಮೆಚ್ಚಿನ ನಾಯಕಗೆ ಭಾವುಕ ಸಂದೇಶ

ರಾಹುಲ್ ನಡೆಯನ್ನು 'ಧೈರ್ಯ' ಎಂದು ಬಣ್ಣಿಸಿದ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಟ್ವಿಟ್ಟಿಗರು ಕಾಲೆಳೆದಿದ್ದು ಹೀಗೆ...

ರಿಮೋಟ್ ಕಂಟ್ರೋಲ್ ಗಾಂಧಿ ಕುಟುಂಬದ ಬಳಿಯೇ ಇದೆ

ರಿಮೋಟ್ ಕಂಟ್ರೋಲ್ ಗಾಂಧಿ ಕುಟುಂಬದ ಬಳಿಯೇ ಇದೆ

"ರಾಜೀನಾಮೆಯನ್ನು ನೀಡಿದ ಮೇಲೂ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಬಳಿ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವಂತೆ ಹೇಳುವ ಅಧಿಕಾರವನ್ನು ರಾಹುಲ್ ಗಾಂಧಿ ಉಳಿಸಿಕೊಂಡಿದ್ದು ಆಶ್ಚರ್ಯವೇ ಸರಿ! ಈಗಲೂ ರಿಮೋಟ್ ಕಂಟ್ರೋಲ್ ಗಾಂಧಿ ಕುಟುಂಬದ ಬಳಿಯೇ ಇದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ." ಎಂದಿದ್ದಾರೆ ರಮೇಶ್ ರಾಮಚಂದ್ರನ್

ನೀವು ಧೈರ್ಯ ತೋರಿಸುವುದು ಯಾವಾಗ?

ನೀವು ಧೈರ್ಯ ತೋರಿಸುವುದು ಯಾವಾಗ?

"ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದೆ. ಅದೂ ನಿಮ್ಮ ನಾಯಕತ್ವದಲ್ಲಿ. ನೀವೂ ಇಂಥದೇ 'ಧೈರ್ಯ' ತೋರುವುದು ಯಾವಾಗ? " ಎಂದು ಕಾಲೆಳೆದಿದ್ದಾರೆ ಅಜಯ್ ಕುಮಾರ್.

ನಿಮ್ಮ ಹಾದಿ ಸುಲಭವಾಯ್ತು...

ನಿಮ್ಮ ಹಾದಿ ಸುಲಭವಾಯ್ತು...

ಸಿಂಹಾಸನದ ಕಡೆಗಿನ ನಿಮ್ಮ ಹಾದಿ ಸುಲಭವಾಯ್ತಲ್ಲ, ನಿಮಗೆ ಇಬ್ಬರು ಮಕ್ಕಳಿದ್ದಾರೆ ಸಹ. ಇನ್ನು ನೂರು ವರ್ಷದ ಯೋಜನೆ ಸಿದ್ಧವಾಗಿರಬೇಕಲ್ಲ!- ಪಾಟ್ಲಾ ಆಲೂ

ಹೌದು, ಧೈರ್ಯ ಅವರಿಗೆ ಮಾತ್ರ ಇರೋದು!

ಹೌದು, ಧೈರ್ಯ ಅವರಿಗೆ ಮಾತ್ರ ಇರೋದು!

ನಿಮ್ಮ ಮಾತು ನಿಜ, ಕೇಲವರಿಗೆ ಮಾತ್ರವೇ ಅವರ ರೀತಿಯಲ್ಲಿ ಸೋಲುವುದಕ್ಕೆ ಧೈರ್ಯ ಇರೋದು!

ಅಂದೇ ರಾಜೀನಾಮೆ ನೀಡಬೇಕಿತ್ತು!

ಅಂದೇ ರಾಜೀನಾಮೆ ನೀಡಬೇಕಿತ್ತು!

ನಿಜಕ್ಕೂ ತಾಕತ್ತಿರುವವರು ಅಂದು ಫಲಿತಾಂಶ ಬಂದ ದಿನವೇ ರಾಜೀನಾಮೆ ನೀಡಬೇಕಿತ್ತು. ಇಷ್ಟೆಲ್ಲ ನಾಟಕವಾಡುವ ಅಗತ್ಯ ಇರಲಿಲ್ಲ ಎಂದಿದ್ದಾರೆ ಶೇಶನ್ ಅಯ್ಯರ್.

English summary
Congress general secretary Priyanka Gandhi Vadra on her brother Rahul Gandhi's official resignation to Congress president post tells, Few have the courage that you do Rahul Gandhi. Deepest respect for your decision. witterians reacted for this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X