ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಪದವಿ ಗಳಿಸಿದವರು ಶೇ. 8.15 ಮಂದಿ ಮಾತ್ರ

By Vanitha
|
Google Oneindia Kannada News

ನವದೆಹಲಿ, ಆಗಸ್ಟ್, 04 : ದಿನಗಳೆದಂತೆ ಕಾಲೇಜುಗಳಲ್ಲಿ ದಾಖಲಾತಿ ಪ್ರಮಾಣ ಅಧಿಕವಾಗುತ್ತಿದೆ. ಆದರೆ ವಿದ್ಯಾರ್ಥಿಗಳು ಮಾತ್ರ ಪದವಿ ಪಡೆಯಲು ಹಿಂದೇಟು ಹಾಕುತ್ತಿದ್ದು, ಭಾರತದಲ್ಲಿ ಪದವೀಧರರ ಸಂಖ್ಯೆ ತೀರಾ ಕಡಿಮೆ ಇದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.

ಕಳೆದ ವಾರಾಂತ್ಯದಲ್ಲಿ ಸೆನ್ಸಸ್ ಕಮೀಷನರ್ ಮತ್ತು ಭಾರತದ ರಿಜಿಸ್ಟ್ರಾರ್ ಜನರಲ್ ಶೈಕ್ಷಣಿಕತೆಗೆ ಸಂಬಂಧಿಸಿದಂತೆ ಹೊಸದಾದ ಅಂಕಿ ಅಂಶ ನೀಡಿದ್ದು, ಭಾರತದಲ್ಲಿ ಕೇವಲ 8.15%ರಷ್ಟು ಮಂದಿ ಮಾತ್ರ ಪದವೀಧರರಿದ್ದಾರೆ ಎಂದು ತಿಳಿಸಿದ್ದಾರೆ.[ವಿಶ್ವದ ದುಬಾರಿ ನಗರಗಳ ಸಾಲಿನಲ್ಲಿ ಮುಂಬೈ]

Only 8.15% of Indians are graduates, Census data show

10 ವರ್ಷಗಳ ಹಿಂದೆ ಸುಮಾರು 26 ಲಕ್ಷ ಇದ್ದ ಪದವೀಧರರ ಸಂಖ್ಯೆ ಈ ವರ್ಷ 67 ಲಕ್ಷಕ್ಕೆ ಏರಿದೆ. ಆದರೆ ಕಳೆದ ದಶಕಕ್ಕೆ ಹೋಲಿಸಿದರೆ ನಗರ ಜನರಿಗಿಂತ ಗ್ರಾಮೀಣ ಜನರು ವಿದ್ಯಾಭ್ಯಾಸ ಪಡೆಯಲು ಉತ್ಸುಕರಾಗಿದ್ದು, ಅದರಲ್ಲಿ ಗ್ರಾಮೀಣ ಮಹಿಳೆಯರು ಒಂದು ಹೆಜ್ಜೆ ಮುಂದಿದ್ದಾರೆ.

ತಂತ್ರಜ್ಞಾನ ಮತ್ತು ವೈದ್ಯಕೀಯ ಪದವಿ ಗಳಿಕೆಗೆ ಹೋಲಿಸಿದರೆ ನಗರ ಭಾರತೀಯರು ಗ್ರಾಮೀಣ ಭಾರತೀಯರಿಗಿಂತ ಹೆಚ್ಚು ಆಸಕ್ತರಾಗಿದ್ದು ಕಲಾತ್ಮಕ ವಿಷಯಗಳಲ್ಲಿ ಕಡೆಗಣನಾ ಭಾವ ತಾಳಿದ್ದಾರೆ. ಗ್ರಾಮೀಣ ಮಂದಿ ಮಾತ್ರ ಕಲಾತ್ಮಕ ವಿಷಯಗಳ ಹೊರತಾಗಿ ಇನ್ನಿತರ ವಿಷಯಗಳತ್ತ ತಮ್ಮ ಒಲವನ್ನು ತೋರದಿರುವುದು ಜನಗಣತಿಯಿಂದ ಸ್ಪಷ್ಟವಾಗಿ ಗೋಚರಿಸಿದೆ.

ತಂತ್ರಜ್ಞಾನ ಪದವಿ ಗಳಿಕೆಯಲ್ಲಿ ಒಲವು

ಈ ವರ್ಷದ ಶೈಕ್ಷಣಿಕ ಜನಗಣತಿಯ ಪ್ರಕಾರ ವಿದ್ಯಾಭ್ಯಾಸ ಗಳಿಕೆಯ ಅಭಿರುಚಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಕಳೆದ ದಶಕಕ್ಕೆ ಹೋಲಿಸಿದರೆ ವಿದ್ಯಾರ್ಥಿಗಳು ತಂತ್ರಜ್ಞಾನ ಕ್ಷೇತ್ರದಲ್ಲಿ ಅಂದರೆ ಎಂಜಿನಿಯರಿಂಗ್, ಡಿಪ್ಲೋಮಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ತಮ್ಮ ಗಮನ ಹರಿಸಿದ್ದಾರೆ.

2011 ರಲ್ಲಿ ಒಟ್ಟು 73 ಲಕ್ಷ ಜನರು ತಂತ್ರಜ್ಞಾನ ಕ್ಷೇತ್ರದಲ್ಲಿ ಪದವಿ ಗಳಿಸಿದ್ದು, ಅದರಲ್ಲಿ ಭಾರತದ ಸುಮಾರು 30 ಲಕ್ಷ ಮಂದಿ ಬೋಧನಾ ವಿಷಯದಲ್ಲಿ (ಕಲಾತ್ಮಕ ವಿಷಯ) ಪದವಿ ಗಳಿಸಿದ್ದು, 15 ಲಕ್ಷ ಮಂದಿ ವೈದ್ಯಕೀಯ ವಿಷಯದಲ್ಲಿ ಪದವಿ ಪಡೆದಿದ್ದಾರೆ.

ಚಂಡೀಗರ್ ಮತ್ತು ದೆಹಲಿಯು ಹೆಚ್ಚು ಪದವೀಧರರನ್ನು ಹೊಂದಿರುವ ರಾಜ್ಯಗಳಾಗಿದ್ದು, ಬಿಹಾರ ಮತ್ತು ಅಸ್ಸಾಮ್ ರಾಜ್ಯಗಳು ತೀರಾ ಕಡಿಮೆ ಪದವೀಧರರನ್ನು ಅಂದರೆ ಕೇವಲ 20 ಮಂದಿ ಮಾತ್ರ ಪದವಿ ಗಳಿಸಿದ್ದಾರೆ. ಚಂಡೀಗರ್ ಮತ್ತು ಕೇರಳ ರಾಜ್ಯಗಳಲ್ಲಿ ಪದವಿ ಗಳಿಕೆ ವಿಷಯದಲ್ಲಿ ಮಹಿಳೆಯರಿಗಿಂತ ಪುರುಷರೇ ಮೇಲುಗೈ ಸಾಧಿಸಿದ್ದಾರೆ.

ಭಾರತದ ಶೈಕ್ಷಣಿಕ ವಿದ್ಯಾಭ್ಯಾಸದ ಮಟ್ಟ

* ಕಳೆದ ದಶಕಕ್ಕೆ ಹೋಲಿಸಿದರೆ ತಂತ್ರಜ್ಞಾನ ವಿಷಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಗಳಿಸುವುದು ಎರಡರಷ್ಟು ಹೆಚ್ಚಾಗಿದೆ.

* ತಂತ್ರಜ್ಞಾನ ಕ್ಷೇತ್ರದಲ್ಲಿ ಮಹಿಳೆಯರು ಪದವಿ ಗಳಿಸಲು ಮುಂದಾಗಿದ್ದು, ಶೇಕಡಾ ಮೂರರಷ್ಟು ಹೆಚ್ಚಳವಾಗಿದೆ

* ನಮ್ಮ ದೇಶದಲ್ಲಿ 36.93%ರಷ್ಟು ಮಂದಿ ಸಾಕ್ಷರರಿದ್ದಾರೆ. ಅದರಲ್ಲಿ 0.60% ಮಂದಿ ತಂತ್ರಜ್ಞಾನ ವಿಷಯದಲ್ಲಿ ಡಿಪ್ಲೋಮಾ ಪೂರೈಸಿದ್ದಾರೆ.

* ಸುಮಾರು 5.64%ನಷ್ಟು ಮಂದಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

* ಚಂಡೀಗರ್ ನಲ್ಲಿ 24.65% , ದೆಹಲಿಯಲ್ಲಿ 22.56% ನಷ್ಟು ಮಂದಿ ಪದವಿಗಳಿಸಿದ್ದು, ಅಸ್ಸಾಂನಲ್ಲಿ ಕೇವಲ 4.83% ಮಂದಿ ಪದವಿ ಗಳಿಸಿದ್ದಾರೆ.

English summary
The office of the Census Commissioner and Registrar-General of India released the level of education achieved by Indians as of 2011. New Census on the educational status of Indians show that the biggest increase is in the number of people pursuing engineering and technology diplomas or technical degrees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X