ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಒಂದು ತಪ್ಪಾದ ಮತ ನಿಮ್ಮ ಮಕ್ಕಳು ಪಕೋಡಾ ಮಾರುವ ಹಾಗೆ ಮಾಡಬಹುದು'

|
Google Oneindia Kannada News

Recommended Video

ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ನವಜೋತ್ ಸಿಂಗ್ ಸಿಧ್ದು | Oneindia Kannada

ನವದೆಹಲಿ, ಏಪ್ರಿಲ್ 29: ತಪ್ಪಾದ ಒಂದು ಮತ ಹಾಕುವುದರಿಂದ ನಿಮ್ಮ ಮಕ್ಕಳು ಭವಿಷ್ಯದಲ್ಲಿ ಟೀ ಮಾರುವವರು, ಪಕೋಡಾ ಮಾರುವವರು ಅಥವಾ ಚೌಕೀದಾರ್ (ವಾಚ್ ಮನ್) ಆಗಬಹುದು ಎಂದು ಕಾಂಗ್ರೆಸ್ ನಾಯಕ ನವ್ ಜೋತ್ ಸಿಂಗ್ ಸಿಧು ಸೋಮವಾರ ದಾಳಿ ನಡೆಸಿದ್ದಾರೆ.

ಮೋದಿ ತಾವು ಸಣ್ಣ ವಯಸ್ಸಿನಲ್ಲಿ ಟೀ ಮಾರುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ. ಇನ್ನು ಈಗ ತಮ್ಮನ್ನು ತಾವು ಚೌಕೀದಾರ್ ಎಂದು ಕರೆದುಕೊಳ್ಳುತ್ತಾರೆ. ಯಾವುದೇ ವ್ಯಕ್ತಿ ಜೀವನ ನಡೆಸುವ ಸಲುವಾಗಿ ಪಕೋಡಾ ಮಾರಬಹುದು ಎಂದಿದ್ದರು. ಹೀಗೆ ಮೂರು ವಿಚಾರವನ್ನು ಮುಂದಿಟ್ಟುಕೊಂಡು ಸಿಧು ಲೇವಡಿ ಮಾಡಿದ್ದಾರೆ.

ಅಮೇಥಿಯಲ್ಲಿ ರಾಹುಲ್ ಸೋತರೆ ರಾಜಕೀಯದಿಂದ ನಿವೃತ್ತಿ:ಸಿಧುಅಮೇಥಿಯಲ್ಲಿ ರಾಹುಲ್ ಸೋತರೆ ರಾಜಕೀಯದಿಂದ ನಿವೃತ್ತಿ:ಸಿಧು

ಹೀಗೆ ಭವಿಷ್ಯದಲ್ಲಿ ನಿಮ್ಮ ಮಕ್ಕಳು ಚಾಯ್ ವಾಲಾ ಮತ್ತೊಂದು ಆಗುವ ಬದಲಿಗೆ ಅದನ್ನು ತಡೆಯುವುದು ಮತ್ತು ಸಿದ್ಧಗೊಳ್ಳುವುದು ಮುಖ್ಯ. ಆ ನಂತರ ಸರಿಪಡಿಸಿಕೊಳ್ಳುವುದಕ್ಕಿಂತ ಉತ್ತಮ ಎಂದು ಸಿಧು ಟ್ವೀಟ್ ಮಾಡಿದ್ದಾರೆ. ಅಂದಹಾಗೆ ಇತ್ತೀಚೆಗೆ ಸಿಧು ನೀಡಿದ ಹೇಳಿಕೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಎಪ್ಪತ್ತೆರಡು ಗಂಟೆಗಳ ನಿಷೇಧ ಹೇರಿತ್ತು.

One wrong vote can make your child tea seller: Sidhu

ಚಂಡೀಗಢ ಕ್ಷೇತ್ರದಿಂದ ತಮ್ಮ ಪತ್ನಿಗೆ ಕಾಂಗ್ರೆಸ್ ನಿಂದ ಟಿಕೆಟ್ ನಿರಾಕರಿಸಿದ ನಂತರ ಕೆಲ ಕಾಲ ಪಕ್ಷದ ಯಾವುದೇ ಚಟುವಟಿಕೆಯಲ್ಲಿ ಪಾಲ್ಗೊಂಡಿರಲಿಲ್ಲ. ಆ ನಂತರ ಮತ್ತೆ ಪ್ರಚಾರದಲ್ಲಿ ಸಿಧು ತೊಡಗಿಸಿಕೊಂಡಿದ್ದಾರೆ.

English summary
In an attack on Prime Minister Narendra Modi, Congress leader Navjot Singh Sidhu on Monday warned voters that a "wrong vote" can make their children "tea-seller, pakoda-seller or a chowkidar (watchman)" in the future.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X