ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದೇಶದಿಂದ ಆಗಮಿಸುವ ಪ್ರಯಾಣಿಕರಿಗೆ ಈ ನಿಯಮಗಳು ಅನ್ವಯ

|
Google Oneindia Kannada News

ನವದೆಹಲಿ, ಜುಲೈ.22: ಕೊರೊನಾವೈರಸ್ ಸೋಂಕು ಹರಡುವಿಕೆ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ದೆಹಲಿ ಸರ್ಕಾರವು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರತಿಯೊಬ್ಬ ಪ್ರಯಾಣಿಕರಿಗಾಗಿ ಹೊಸ ನಿಯಮವನ್ನು ಜಾರಿಗೊಳಿಸಿದೆ.

ನವದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿದೇಶಗಳಿಂದ ಆಗಮಿಸುವ ಪ್ರತಿಯೊಬ್ಬ ಪ್ರಯಾಣಿಕರು ಕಡ್ಡಾಯವಾಗಿ ಏಳು ದಿನಗಳ ಕಾಲ ಸಾಂಸ್ಥಿಕ ಕ್ವಾರೆಂಟೈನ್ ಗೆ ಒಳಗಾಗಬೇಕು. ಈ ಸಾಂಸ್ಥಿಕ ಕ್ವಾರೆಂಟೈನ್ ವೆಚ್ಚವನ್ನು ಆ ವ್ಯಕ್ತಿಗಳೇ ಪಾವತಿಸಬೇಕಿದೆ.

ದೆಹಲಿಯಲ್ಲಿ ನಾಲ್ಕರಲ್ಲಿ ಒಬ್ಬರಿಗೆ ಕೊರೊನಾ ಸೋಂಕುದೆಹಲಿಯಲ್ಲಿ ನಾಲ್ಕರಲ್ಲಿ ಒಬ್ಬರಿಗೆ ಕೊರೊನಾ ಸೋಂಕು

ಏಳು ದಿನಗಳ ಮಟ್ಟಿಗೆ ಸಾಂಸ್ಥಿಕ ಕ್ವಾರೆಂಟೈನ್ ಹಾಗೂ ಏಳು ದಿನ ಹೋಮ್ ಕ್ವಾರೆಂಟೈನ್ ನಲ್ಲಿ ಇರುವಂತೆ ಸೂಚನೆ ನೀಡಲಾಗಿದೆ. ವಿಮಾನಯಾನ ಪ್ರಾಧಿಕಾರವು ಹೊರಡಿಸಿದ ಮಾರ್ಗಸೂಚಿ ಅಡಿಯಲ್ಲಿ ಈ ನಿಯಮ ಪಾಲನೆಯನ್ನು ಕಡ್ಡಾಯಗೊಳಿಸಲಾಗಿದೆ. ವಿದೇಶಗಳಿಂದ ಆಗಮಿಸುವ ಪ್ರತಿಯೊಬ್ಬ ಪ್ರಯಾಣಿಕರು ಈ ಮಾರ್ಗಸೂಚಿಯನ್ನು ಪಾಲನೆ ಮಾಡಬೇಕಿದೆ.

 One Week Paid Quarantine For International Passengers Arriving At Delhi Airport

ನವದೆಹಲಿಯಲ್ಲೇ ಉಳಿದುಕೊಳ್ಳುವವರಿಗೆ ನಿಯಮ:

ವಿದೇಶಗಳಿಂದ ನವದೆಹಲಿಗೆ ಆಗಮಿಸಿದ ಪ್ರಯಾಣಿಕರು ಕಡ್ಡಾಯವಾಗಿ ಸ್ಕ್ರೀನಿಂಗ್ ಗೆ ಒಳಪಡಬೇಕಾಗುತ್ತದೆ. ಎರಡು ಬಾರಿ ಪ್ರಯಾಣಿಕರನ್ನು ಸ್ಕ್ರೀನಿಂಗ್ ಗೆ ಒಳಪಡಿಸಲಾಗುತ್ತದೆ. ಏರ್ ಪೋರ್ಟ್ ಗಳಲ್ಲಿ ಒಂದು ಬಾರಿ ಹಾಗೂ ಸರ್ಕಾರದ ವತಿಯಿಂದ ಮತ್ತೊಂದು ಬಾರಿ ಸ್ಕ್ರೀನಿಂಗ್ ನಡೆಸಲಾಗುತ್ತದೆ. ಗರ್ಭಿಣಿಯರು, ಗಂಭೀರ ಆರೋಗ್ಯ ಸಮಸ್ಯೆಯುಳ್ಳವರು, ಸಾವಿನ ಕಾರಣಕ್ಕೆ ಆಗಮಿಸಿದವರು ಹಾಗೂ 10 ವರ್ಷದೊಳಗಿನ ಮಕ್ಕಳಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ. ಆದರೆ ಪ್ರಯಾಣಕ್ಕೂ ಮೊದಲು ಕಾರಣಕ್ಕೆ ಪೂರಕವಾದ ದಾಖಲೆಗಳನ್ನು ಪ್ರಯಾಣಿಕರು ಸಲ್ಲಿಸುವಂತೆ ಸೂಚಿಸಲಾಗಿದೆ.

ವಿಮಾನ ನಿಲ್ದಾಣದ ಗೇಟ್ ಬಳಿ ಪ್ರತಿಯೊಬ್ಬ ಪ್ರಯಾಣಿಕರನ್ನು ಥರ್ಮಲ್ ಸ್ಕ್ರೀನಿಂಗ್ ಗೆ ಒಳಪಡಿಸಲಾಗುತ್ತದೆ. ಸೋಂಕಿತ ಲಕ್ಷಣಗಳಿಲ್ಲದ ಜನರನ್ನು ಮಾತ್ರ ಏರ್ ಪೋರ್ಟ್ ನಿಂದ ಹೊರರ ಬಿಡಲಾಗುತ್ತಿದ್ದು, ಏಳು ದಿನಗಳ ಕಡ್ಡಾಯ ಹೋಮ್ ಕ್ವಾರೆಂಟೈನ್ ನಲ್ಲಿ ಇರುವಂತೆ ಸೂಚಿಸಲಾಗಿದೆ.

English summary
One Week Paid Quarantine For International Passengers Arriving At Delhi Airport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X