ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದೆಂಥಾ ಸ್ಥಿತಿ: ಮನೆ-ಮನೆಯಲ್ಲೂ ಒಬ್ಬರಿಗಿಂತ ಹೆಚ್ಚು ಮಂದಿಗೆ ಜ್ವರ, ಕೆಮ್ಮು, ನೆಗಡಿ!

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 21: ಕೊರೊನಾವೈರಸ್ ಮಹಾಮಾರಿ ಹಾಗೂ ಡೆಂಗ್ಯೂ ಜ್ವರದ ಭೀತಿ ನಡುವೆ ದೆಹಲಿ ಪ್ರತಿ ಮನೆಯಲ್ಲೂ ಒಬ್ಬರು ಅಥವಾ ಹೆಚ್ಚು ಮಂದಿಗೆ ಜ್ವರ ರೀತಿ ಲಕ್ಷಣ ಕಾಣಿಸಿಕೊಂಡಿರುವುದು ಲೋಕಲ್ ಸರ್ಕಲ್ ನಡೆಸಿರುವ ಸಮೀಕ್ಷೆಯಲ್ಲಿ ಗೊತ್ತಾಗಿದೆ.

ದೆಹಲಿಯಾದ್ಯಂತ 7,697 ಮನೆಗಳಿಗೆ ತೆರಳಿ ಸಂಗ್ರಹಿಸಿದ ಮಾಹಿತಿ ಆಧಾರದ ಮೇಲೆ ಈ ಸಮೀಕ್ಷಾ ವರದಿಯನ್ನು ಸಿದ್ಧಪಡಿಸಲಾಗಿದೆ. ಸ್ವತಃ ಮನೆಯ ಸದಸ್ಯರೇ ನೀಡಿರುವ ಮಾಹಿತಿ ಪ್ರಕಾರ, ಮನೆಯ ಕನಿಷ್ಠ ಒಬ್ಬರಲ್ಲಿ ಜ್ವರ, ಶೀತ, ಕೆಮ್ಮು, ತಲೆ ಹಾಗೂ ಮೈ-ಕೈ ನೋವಿನ ಲಕ್ಷಣಗಳು ಗೋಚರಿಸಿವೆ.

ಮಕ್ಕಳಿಗೆ ಅಪಾಯ: ಕೊರೊನಾವೈರಸ್ ಕಡಿಮೆಯಾದ ದೆಹಲಿಯಲ್ಲಿ ವೈರಲ್ ಜ್ವರ!ಮಕ್ಕಳಿಗೆ ಅಪಾಯ: ಕೊರೊನಾವೈರಸ್ ಕಡಿಮೆಯಾದ ದೆಹಲಿಯಲ್ಲಿ ವೈರಲ್ ಜ್ವರ!

ಲೋಕಲ್ ಸರ್ಕಲ್ ಎನ್ನುವುದು ಒಂದು ಸಾಮಾಜಿಕ ವೇದಿಕೆಯಾಗಿದೆ. ಅದು ನಾಗರಿಕರು ಮತ್ತು ಸಂಸ್ಥೆಗಳು ಪರಸ್ಪರ ಸಂಪರ್ಕ ಸಾಧಿಸಲು ಮತ್ತು ಸಾಮೂಹಿಕ ಸಮಸ್ಯೆಗಳು, ಸವಾಲುಗಳು, ಪರಿಹಾರಗಳು, ಅವಕಾಶಗಳು ಅಥವಾ ಸೂಕ್ಷ್ಮ ಮಟ್ಟದಲ್ಲಿ ನಾಡಿಮಿಡಿತ ಅರ್ಥಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ.

ಕೊರೊನಾವೈರಸ್ ಹರಡುವಿಕೆ ಬಗ್ಗೆ ಎಚ್ಚರಿಕೆ

ಕೊರೊನಾವೈರಸ್ ಹರಡುವಿಕೆ ಬಗ್ಗೆ ಎಚ್ಚರಿಕೆ

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆಯ ಹರಡುವಿಕೆ ಹಿನ್ನೆಲೆ ತಜ್ಞರ ಸಭೆ ನಡೆಸಲಾಗಿದ್ದು, ಕೊವಿಡ್-19 ಸೋಂಕು ಮತ್ತು ಜ್ವರವು ಬಹುಪಾಲು ಒಂದೇ ರೀತಿಯ ಲಕ್ಷಣಗಳನ್ನು ಹೊಂದಿರುತ್ತದೆ ಎಂದು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿತ್ತು. ಆದ್ದರಿಂದ ಸಾಮಾನ್ಯ ಜ್ವರದ ಹರಡುವಿಕೆ ಕಾಲದಲ್ಲೂ ಕೊವಿಡ್-19 ಸೋಂಕಿನ ಪರೀಕ್ಷೆ ಮುಂದುವರಿಸುವಂತೆ ಎಚ್ಚರಿಕೆ ನೀಡಿತ್ತು.

ಶೇ.72ರಷ್ಟು ಮನೆಗಳಲ್ಲಿ ಒಬ್ಬರಿಗೂ ಜ್ವರದ ಲಕ್ಷಣವಿಲ್ಲ

ಶೇ.72ರಷ್ಟು ಮನೆಗಳಲ್ಲಿ ಒಬ್ಬರಿಗೂ ಜ್ವರದ ಲಕ್ಷಣವಿಲ್ಲ

ಲೋಕಲ್ ಸರ್ಕಲ್ ನಡೆಸಿದ ಸಮೀಕ್ಷೆಯ ಪ್ರಕಾರ, "ದೆಹಲಿಯ ಶೇ.6ರಷ್ಟು ಕುಟುಂಬಗಳಲ್ಲಿ ನಾಲ್ಕು ಅಥವಾ ನಾಲ್ಕಕ್ಕಿಂತ ಹೆಚ್ಚು ಜನರಿಗೆ ಜ್ವರದ ರೀತಿಯ ಲಕ್ಷಣಗಳು ಕಾಣಿಸಿಕೊಂಡಿವೆ. ಶೇ.11ರಷ್ಟು ಕುಟುಂಬಗಳಲ್ಲಿ ಇಬ್ಬರಿಂದ ಮೂವರಿಗೆ ಅದೇ ರೀತಿಯ ಲಕ್ಷಣಗಳು ಗೋಚರಿಸಿವೆ. ಇನ್ನು ಶೇ.11ರಷ್ಟು ಕುಟುಂಬಗಳಲ್ಲಿ ಕನಿಷ್ಠ ಒಬ್ಬರಿಗೆ ಜ್ವರದ ಲಕ್ಷಣಗಳು ಕಂಡು ಬಂದಿದೆ. ಆದರೆ ಬಹುಪಾಲು ಕುಟುಂಬಗಳಲ್ಲಿ ಅಂದರೆ ಶೇ.72ರಷ್ಟು ಮನೆಗಳಲ್ಲಿ ಯಾವುದೇ ವ್ಯಕ್ತಿಗೆ ಜ್ವರ ಹಾಗೂ ಯಾವುದೇ ರೀತಿ ಅನಾರೋಗ್ಯದ ಲಕ್ಷಣಗಳು ಕಂಡು ಬಂದಿಲ್ಲ," ಎಂದು ಸಮೀಕ್ಷೆ ತಿಳಿಸಿದೆ.

ನವದೆಹಲಿಯಲ್ಲಿ ಜ್ವರದ ಭೀತಿ ಹೆಚ್ಚಾಗಿದ್ದು ಯಾವಾಗ?

ನವದೆಹಲಿಯಲ್ಲಿ ಜ್ವರದ ಭೀತಿ ಹೆಚ್ಚಾಗಿದ್ದು ಯಾವಾಗ?

ಲೋಕಲ್ ಸರ್ಕಲ್ ನೀಡಿರುವ ಮಾಹಿತಿ ಪ್ರಕಾರ, ಕಳೆದ ಆಗಸ್ಟ್ ತಿಂಗಳ ಮಧ್ಯಭಾಗದಿಂದಲೇ ದೆಹಲಿಯ ಪ್ರತಿ ಮನೆಗಳಲ್ಲೂ ಒಬ್ಬರು ಅಥವಾ ಇಬ್ಬರಿಗೆ ಜ್ವರ, ಶೀತ ಹಾಗೂ ಆಯಾಸ ಸೇರಿದಂತೆ ಕೊರೊನಾವೈರಸ್ ಲಕ್ಷಣಗಳು ಪತ್ತೆಯಾಗಿದ್ದವು. ಸಮೀಕ್ಷೆ ಆಧಾರದಲ್ಲಿ ಸಮಗ್ರ ಅಂಕಿ-ಅಂಶಗಳನ್ನು ಅವಲೋಕಿಸಿದಾಗ ದೆಹಲಿಯ ಶೇ.28 ಕುಟುಂಬಗಳಲ್ಲಿ ಕನಿಷ್ಠ ಒಬ್ಬರು ಅಥವಾ ಇಬ್ಬರಲ್ಲಿ ಜ್ವರದ ಲಕ್ಷಣಗಳು ಗೋಚರಿಸಿರುವುದು ಪತ್ತೆಯಾಗಿದೆ.

ವೈರಲ್ ಜ್ವರ ಹಾಗೂ ಕಾಲೋಚಿತ ಜ್ವರದ ಬಗ್ಗೆ ಉಲ್ಲೇಖ

ವೈರಲ್ ಜ್ವರ ಹಾಗೂ ಕಾಲೋಚಿತ ಜ್ವರದ ಬಗ್ಗೆ ಉಲ್ಲೇಖ

ಕೊರೊನಾವೈರಸ್ ರೋಗದ ಭೀತಿ ನಡುವೆಯೂ ಹಲವರು ವೈದ್ಯರ ಸಮಾಲೋಚನೆ ನಂತರವೇ ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ಮಾಡಿಸಿಕೊಳ್ಳುತ್ತಿದ್ದು, ನೆಗೆಟಿವ್ ವರದಿಯನ್ನು ಪಡೆದುಕೊಂಡಿದ್ದಾರೆ. ಈ ವ್ಯಕ್ತಿಗಳಲ್ಲಿ ವೈರಲ್ ಜ್ವರ ಅಥವಾ ಕಾಲೋಚಿತ ಜ್ವರ ಕಾಣಿಸಿಕೊಂಡಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಪತ್ತೆಯಾಗಿದೆ. ದೆಹಲಿಯಲ್ಲಿ ಪ್ರತಿನಿತ್ಯ 50 ರಿಂದ 60 ವೈರಲ್ ಜ್ವರದ ಪ್ರಕರಣಗಳು ಆಸ್ಪತ್ರೆಗೆ ದಾಖಲಾಗುತ್ತಿವೆ. ರಾಷ್ಟ್ರ ರಾಜಧಾನಿಯಲ್ಲಿ ಭಾರಿ ಮಳೆ ಹಾಗೂ ತೀವ್ರ ಬಿಸಿಲಿನ ತಾಪಮಾನದಲ್ಲಿನ ವ್ಯತ್ಯಾಸದಿಂದಲೂ ಕಾಲೋಚಿತ ಜ್ವರದ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳೆದ ಆಗಸ್ಟ್ 19ರಂದು ಇದೇ ಲೋಕಲ್ ಸರ್ಕಲ್ ನಡೆಸಿದ ಸಮೀಕ್ಷೆಯಲ್ಲಿ ಪ್ರತಿಯೊಂದು ಮನೆಯಲ್ಲಿ ಕನಿಷ್ಠ ಒಬ್ಬರಿಗೆ ವೈರಲ್ ಜ್ವರ ಹಾಗೂ ಜ್ವರದ ಲಕ್ಷಣಗಳು ಗೋಚರಿಸಿದ್ದವು.

English summary
One or More Members With Flu Like Symptoms Found in 28 Percent of Delhi Household.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X