ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ಕಾಲದ ಚಹಾವಾಲ ಈಗ ಉತ್ತರ ದೆಹಲಿಯ ಮೇಯರ್

|
Google Oneindia Kannada News

ನವದೆಹಲಿ, ಏಪ್ರಿಲ್ 30: ಒಂದು ಕಾಲದಲ್ಲಿ ಜೀವನೋಪಾಯಕ್ಕಾಗಿ ಚಹಾ ಮಾರುತ್ತಿದ್ದವರು ಇಂದು ಉತ್ತರ ದೆಹಲಿಯ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಬಿಜೆಪಿ ಕೌನ್ಸಿಲರ್ ಅವತಾರ್ ಸಿಂಘ್ ಸಿಂಗ್ ಅವರ ಬಗ್ಗೆ ಪ್ರಧಾನಿ ಮೋದಿ ಕೂಡಾ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಮೇಯರ್ ಸ್ಥಾನಕ್ಕೆ ಆಯ್ಕೆಯಾಗುವ ಮೂಲಕ ಈ ಸ್ಥಾನಕ್ಕೇರಿದ ಮೊದಲ ದಲಿತ ಸಿಖ್ ಸಮುದಾಯಕ್ಕೆ ಸೇರಿದ ಕಾರ್ಪೊರೇಟರ್ ಎನಿಸಿಕೊಂಡಿದ್ದಾರೆ.

ಟ್ರೆಂಡ್ ಸೆಟ್ಟರ್ : ಪುಣೆಯ ಚಹಾವಾಲ ನವನಾಥ್ ಯವ್ಲೆಟ್ರೆಂಡ್ ಸೆಟ್ಟರ್ : ಪುಣೆಯ ಚಹಾವಾಲ ನವನಾಥ್ ಯವ್ಲೆ

ಅವತಾರ್ ಸಿಂಗ್ ಅವರ ಹೆಸರನ್ನು ಉತ್ತರ ದೆಹಲಿ ಮೇಯರ್ ಸ್ಥಾನಕ್ಕೆ ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ ಸೂಚಿಸಿದ್ದರು. ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅವತಾರ್ ಸಿಂಗ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ.

Once A Chaiwala now Elected Mayor Of North Delhi

ಅವತಾರ್ ಸಿಂಗ್ ಅವರು ಕಠಿಣ ಪರಿಶ್ರಮದಿಂದ ಈ ಹಂತಕ್ಕೇರಿದ್ದಾರೆ. ಒಂದು ಕಾಲದಲ್ಲಿ ಟೀ ಮಾರುತ್ತಿದ್ದವರು ಇಂದು ಮೇಯರ್ ಹುದ್ದೆಗೆ ಏರಿದ್ದಾರೆ ಎಂದು ದೆಹಲಿ ಬಿಜೆಪಿ ನಾಯಕರು ಹರ್ಷ ವ್ಯಕ್ತಪಡಿಸಿದ್ದಾರೆ.

ಮೋದಿ ಬಾಯಲ್ಲಿ ಉಲಿದ ಆ ಹೆಸರು, ಕೊಳಗೇರಿ ಮಕ್ಕಳ ಬದುಕಿನ ಬೆಳಕು!ಮೋದಿ ಬಾಯಲ್ಲಿ ಉಲಿದ ಆ ಹೆಸರು, ಕೊಳಗೇರಿ ಮಕ್ಕಳ ಬದುಕಿನ ಬೆಳಕು!

ದೆಹಲಿ ದಕ್ಷಿಣ, ಉತ್ತರ ಹಾಗೂ ಪೂರ್ವದಲ್ಲಿ ಮೇಯರ್ ಆಗಿ ಆಯ್ಕೆಯಾದವರು ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿದ್ದಾರೆ.ಮೇಯರ್ ಹುದ್ದೆ ಕಾಲಾವಧಿ ಒಂದು ವರ್ಷ ಆಗಿದೆ. ನವದೆಹಲಿ ಮುನ್ಸಿಪಾಲಿಟಿ ಕೌನ್ಸಿಲ್(ಎನ್ ಡಿ ಎಂಸಿ)ಯಲ್ಲಿ ಬಿಜೆಪಿ ಬಹುಮತ ಹೊಂದಿದೆ. ದೆಹಲಿ ದಕ್ಷಿಣಕ್ಕೆ ಬಿಜೆಪಿಯ ಅಂಜು ಕಂಗ್ರಾ ಮೇಯರ್ ಆಗಿದ್ದರೆ, ಪೂರ್ವ ದೆಹಲಿಗೆ ಅಂಜು ಕಮ್ಲಾಕರ್ ಅವಿರೋಧವಾಗಿ ಆಯ್ಕೆಯಾಗುವ ನಿರೀಕ್ಷೆಯಿದೆ.

English summary
BJP councilor Avtar Singh, who used to sell tea for a living, was elected unopposed as the new mayor of North Delhi on Monday. Mr Singh is the first Dalit Sikh to have been elected mayor of North Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X