• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚೀನಾ ಆಕ್ರಮಿತ ಭೂಮಿಯನ್ನು 'ದೇವರ ಆಟ' ಎಂದು ಬಿಟ್ಟುಬಿಡುವಿರಾ?: ರಾಹುಲ್ ಗಾಂಧಿ

|

ನವದೆಹಲಿ, ಸೆಪ್ಟೆಂಬರ್ 11: ಚೀನಾ ಅತಿಕ್ರಮಣ ಮಾಡಿರುವ ಭೂಮಿಯನ್ನು ಹಿಂಪಡೆಯುವಿರಾ ಅಥವಾ ದೇವರ ಆಟ ಎಂದು ಸುಮ್ಮನೆ ಇರುವಿರಾ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.

ಚೀನಾವು ನಮ್ಮ ಭೂಮಿಯನ್ನು ಕಬಳಿಸಿದ್ದಾರೆ, ಅದನ್ನು ಮರಳಿ ಪಡೆಯಲು ಭಾರತ ಸರ್ಕಾರ ಏನೇನು ತಯಾರಿ ನಡೆಸಿದೆ. ಅಥವಾ ಇದನ್ನೂ ದೇವರ ಆಟ ಎಂದುಕೊಂಡು ಕೈಬಿಡುತ್ತೀರಾ ಎಂದು ಟ್ವೀಟ್ ಮಾಡಿದ್ದಾರೆ.

ಸರ್ಕಾರಿ ಸಂಸ್ಥೆ ಮಾರಾಟ, ಉದ್ಯೋಗ ನಾಶ, ಮೋದಿ ಸಾಧನೆ: ರಾಹುಲ್

ಗಲ್ವಾನ್ ಕಣಿವೆ, ಬಿಸಿನೀರ ಬುಗ್ಗೆಯ ಪ್ರದೇಶ ಹಾಗೂ ಕೊಂಗ್ರಂಗ್ನಾಲಾ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಚೀನಾ ಸೈನ್ಯವು ನಡೆಸಿದ ಗಡಿ ಉಲ್ಲಂಘನೆಯ ಬಗ್ಗೆ ಭಾರತ ಮತ್ತು ಚೀನಾ ಏಪ್ರಿಲ್-ಮೇ ತಿಂಗಳಿನಿಂದ ಪರಸ್ಪರ ಭಿನ್ನಾಭಿಪ್ರಾಯವನ್ನು ಹೊಂದಿವೆ.

ಜೂನ್‌ನಲ್ಲಿ ಗಲ್ವಾನ್ ಕಣಿವೆಯಲ್ಲಿ ಚೀನಾದ ಸೈನ್ಯದೊಂದಿಗೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಸಾವನ್ನಪ್ಪಿದ ನಂತರ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ.

ಲಡಾಖ್‌ನ ಚುಶುಲ್ ಬಳಿಯ ದಕ್ಷಿಣದ ದಂಡೆಯ ಪ್ಯಾಂಗಾಂಗ್ ತ್ಸೊ ಬಳಿಯ ಭಾರತೀಯ ಪ್ರದೇಶಗಳಿಗೆ ಅತಿಕ್ರಮಣ ಮಾಡಲು ಚೀನಾದ ಸೈನಿಕರು ಮಾಡಿದ ಪ್ರಯತ್ನವನ್ನುಇದರ ಮೂಲಕ ತಡೆಹಿಡಿಯಲಾಗಿತ್ತು.

https://kannada.oneindia.com/news/new-delhi/on-india-china-standoff-rahul-gandhi-s-act-of-god-jibe-at-centre-201706.html

ಕಳೆದ ಶುಕ್ರವಾರ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಸ್ಕೋದಲ್ಲಿ ನಡೆದ ಎಸ್‌ಸಿಒ ಚರ್ಚೆಯ ಹೊರತಾಗಿ ಚೀನಾದ ವಿದೇಶಾಂಗ ಸಚಿವ ಜನರಲ್ ವೀ ಫೆಂಗ್‌ ಜತೆ ಚರ್ಚಿಸಿ ಎಲ್‌ಎಸಿಯ ಉದ್ದಕ್ಕೂ ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಿಸಲು ಚೀನಾದ ಸೈನ್ಯದ ಪ್ರಯತ್ನಗಳು ದ್ವಿಪಕ್ಷೀಯ ಒಪ್ಪಂದಗಳನ್ನು ಉಲ್ಲಂಘಿಸುತ್ತಿವೆ ಎನ್ನುವುದನ್ನು ಸಿಂಗ್ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಭಾರತವು ಇತ್ತೀಚೆಗೆ ಪ್ಯಾಂಗಾಂಗ್ ಸರೋವರದ ದಕ್ಷಿಣ ದಂಡೆಯ ಸಮೀಪ ಎತ್ತರದ ಶಿಖರದ ಮೇಲೆ ಹಿಡಿತ ಸಾಧಿಸುವ ಮೂಲಕ ಚೀನಾವನ್ನು ಕಟ್ಟಿಹಾಕಿದೆ.

English summary
Congress leader Rahul Gandhi today asked the Centre whether it has any plans to reclaim the "land taken by China" or "is that also going to be left to an "act of God".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X