ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೊಗೊಯ್ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ತನಿಖೆಗೆ ಸಮಿತಿ ರಚನೆ

|
Google Oneindia Kannada News

ನವದೆಹಲಿ, ಏಪ್ರಿಲ್ 24: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ವಿರುದ್ಧ ಕೇಳಿಬಂದಿರುವ ಲೈಂಗಿಕ ದೌರ್ಜನ್ಯದ ಆರೋಪದ ಬಗ್ಗೆ ಸತ್ಯಾಸತ್ಯತೆ ತಿಳಿಯಲು ಸುಪ್ರೀಂ ಕೋರ್ಟ್ ನ ಮೂವರು ನ್ಯಾಯಮೂರ್ತಿಗಳ ಸಮಿತಿ ರಚನೆ ಮಾಡಲಾಗಿದೆ. ಅದರಲ್ಲಿ ಮಹಿಳಾ ನ್ಯಾಯಮೂರ್ತಿ ಒಬ್ಬರು ಇರಲಿದ್ದಾರೆ.

ಕೋರ್ಟ್ ನ ಮಾಜಿ ನೌಕರರೊಬ್ಬರು ರಂಜನ್ ಗೊಗೊಯ್ ಅವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. ಮೂಲಗಳ ಪ್ರಕಾರ, ಸಮಿತಿಯನ್ನು ರಚಿಸುವ ತೀರ್ಮಾನವನ್ನು ಇಡೀ ಕೋರ್ಟ್ ತೆಗೆದುಕೊಂಡಿದೆ. ಇದರಲ್ಲಿ ರಂಜನ್ ಗೊಗೊಯ್ ಅವರನ್ನು ಹೊರತುಪಡಿಸಿ ಎಲ್ಲರೂ ಹಾಜರಿದ್ದರು.

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿರುದ್ಧವೇ ಲೈಂಗಿಕ ಕಿರುಕುಳ ಆರೋಪಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿರುದ್ಧವೇ ಲೈಂಗಿಕ ಕಿರುಕುಳ ಆರೋಪ

ಗೊಗೊಯ್ ನಂತರ ಹಿರಿಯರಾದ ಎಸ್.ಎ.ಬೊಬಡೆ ಅವರು ಸಮಿತಿಯ ನೇತೃತ್ವ ವಹಿಸಲಿದ್ದಾರೆ. ಅವರ ಜತೆಗೆ ನ್ಯಾಯಮೂರ್ತಿಹಳಾದ ಎನ್.ವಿ.ರಮಣ ಹಾಗೂ ಇಂದಿರಾ ಬ್ಯಾನರ್ಜಿ ಇರಲಿದ್ದಾರೆ. "ನನ್ನ ನಂತರದ ಸ್ಥಾನದಲ್ಲಿ ರಮಣ ಇದ್ದಾರೆ. ಆದ್ದರಿಂದ ಅವರನ್ನು ಆರಿಸಿಕೊಂಡಿದ್ದೇನೆ. ಇನ್ನು ಒಬ್ಬರು ಮಹಿಳಾ ನ್ಯಾಯಮೂರ್ತಿಯಾಗಿ ಬ್ಯಾನರ್ಜಿ ಇರಲಿದ್ದಾರೆ" ಎಂದು ಬೊಬಡೆ ಹೇಳಿರುವುದಾಗಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಲೈಂಗಿಕ ಆರೋಪ ನಿರಾಕರಿಸಿದ ರಂಜನ್ ಗೊಗೊಯ್

ಲೈಂಗಿಕ ಆರೋಪ ನಿರಾಕರಿಸಿದ ರಂಜನ್ ಗೊಗೊಯ್

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ತಮ್ಮ ಮೇಲೆ ಬಂದಿರುವ ಲೈಂಗಿಕ ದೌರ್ಜನ್ಯದ ಆರೋಪವನ್ನು ನಿರಾಕರಿಸಿದ್ದಾರೆ. ನ್ಯಾಯಾಂಗದ ಸ್ವಾತಂತ್ರ್ಯವು ಆತಂಕದಲ್ಲಿದೆ ಮತ್ತು ಇದನ್ನು ಬಲಿಪಶು ಮಾಡಲಾಗುತ್ತಿದೆ. ಇದು ನಂಬಲಸಾಧ್ಯ. ನನ್ನ್ ಮೇಲಿನ ಆರೋಪವನ್ನು ನಿರಾಕರಿಸಲು ಕೆಳಗಿಳಿದು ಬರಬೇಕು ಎಂದು ಊಹಿಸಲು ಸಾಧ್ಯವಿಲ್ಲ ಎಂದು ಕಳೆದ ಶನಿವಾರ ತುರ್ತು ವಿಚಾರಣೆ ವೇಳೆ ಅವರು ಹೇಳಿದ್ದಾರೆ.

ಸ್ಬತಂತ್ರ ತನಿಖೆಗೆ ಆಗ್ರಹ

ಸ್ಬತಂತ್ರ ತನಿಖೆಗೆ ಆಗ್ರಹ

ಆ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನ ಎರಡು ಒಕ್ಕೂಟಗಳು ಟೀಕಿಸಿವೆ. ಸುಪ್ರೀಂ ಕೋರ್ಟ್ ನ ಬಾರ್ ಅಸೋಸಿಯೇಷನ್ ಹಾಗೂ ಸುಪ್ರೀಂ ಕೋರ್ಟ್ ಆನ್ ರೆಕಾರ್ಡ್ ಅಸೋಸಿಯೇಷನ್ ನಿಂದ ಕೋರ್ಟ್ ಇನ್ನೂ ಮುಂದಿನ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯ ಕೇಳಿಬಂದಿದೆ. ಮೇಧಾ ಪಾಟ್ಕರ್, ಅರುಂಧತಿ ರಾಯ್, ಅರುಣಾ ರಾಯ್ ಸೇರಿದಂತೆ ಮೂವತ್ಮೂರು ಮಂದಿ ಪ್ರಮುಖರು ಹೇಳಿಕೆ ಬಿಡುಗಡೆ ಮಾಡಿ, ಸ್ವತಂತ್ರ ತನಿಖೆಗೆ ಆಗ್ರಹಿಸಿದ್ದಾರೆ.

ಸಮಿತಿ ರಚನೆ ಪ್ರಸ್ತಾವ ಮುಂದಿಟ್ಟ ಬೊಬಡೆ

ಸಮಿತಿ ರಚನೆ ಪ್ರಸ್ತಾವ ಮುಂದಿಟ್ಟ ಬೊಬಡೆ

ಮೂಲಗಳ ಪ್ರಕಾರ, ಸಮಿತಿ ರಚನೆಗೆ ಸುಪ್ರೀಂ ಕೋರ್ಟ್ ನಿರ್ಣಯ ಕೈಗೊಂಡಿದೆ. ನ್ಯಾ.ಬೊಬಡೆ ಪ್ರಸ್ತಾವ ಇಟ್ಟಿದ್ದಾರೆ. ಅದನ್ನು ಇತರರು ಅನುಮೋದಿಸಿದ್ದಾರೆ. ಅಧಿಸೂಚನೆ ಇತರ ನ್ಯಾಯಮೂರ್ತಿಗಳಿಗೆ ಹಂಚಲಾಗಿದೆ. ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಕೇಳಿಬಂದಿರುವ ಆರೋಪದ ವಿಚಾರಣೆ ಹೇಗೆ ನಡೆಸಬೇಕು ಎಂಬ ಬಗ್ಗೆ ಸುದೀರ್ಘ ಚರ್ಚೆ ನಡೆದಿತ್ತು.

ಆರೋಪ ಮಾಡಿದ ಮಹಿಳೆಗೆ ಕ್ರಿಮಿನಲ್ ಹಿನ್ನೆಲೆ

ಆರೋಪ ಮಾಡಿದ ಮಹಿಳೆಗೆ ಕ್ರಿಮಿನಲ್ ಹಿನ್ನೆಲೆ

ಮುಂದಿನ ದಿನಗಳಲ್ಲಿ ಪ್ರಮುಖ ಪ್ರಕರಣಗಳ ವಿಚಾರಣೆ ಕೈಗೆತ್ತಿಕೊಳ್ಳುವುದರಿಂದ ನನ್ನ ವಿರುದ್ಧ ಈ ರೀತಿ ಆರೋಪ ಮಾಡಲಾಗುತ್ತಿದೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಆರೋಪಿಸಿದ್ದಾರೆ. "ಈ ಕುರ್ಚಿಯಲ್ಲಿ ಕುಳಿತು ನನ್ನ ನ್ಯಾಯಾಂಗ್ದ ಜವಾಬ್ದಾರಿಯನ್ನು ಯಾವುದೇ ಭಯ ಇಲ್ಲದೆ ನಿರ್ವಹಿಸುತ್ತೇನೆ. ಸಂಗತಿಗಳು ಬಹಳ ದೂರ ಹೋಗಿವೆ". ಇನ್ನು ತನ್ನ ವಿರುದ್ಧ ಆರೋಪ ಮಾಡಿರುವ ಮಹಿಳೆಗೆ ಅಪರಾಧ ಹಿನ್ನೆಲೆ ಇದೆ. ಆಕೆ ವಿರುದ್ಧ ಎರಡು ಪೊಲೀಸ್ ಪ್ರಕರಣಗಳಿವೆ ಎಂದು ಹೇಳಿದ್ದಾರೆ.

English summary
A panel of three Supreme Court judges including a woman judge will look into the allegations of sexual harassment against Chief Justice of India Ranjan Gogoi, levelled by a former employee of the court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X