ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ರೋಗಿಗಳಿಗಾಗಿ ಒಡಿಶಾದಲ್ಲಿ ಅತಿ ದೊಡ್ಡ ಆಸ್ಪತ್ರೆ ಸಜ್ಜು

|
Google Oneindia Kannada News

ಒಡಿಶಾ, ಮಾರ್ಚ್ 26: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಸಾವಿನ ಸಂಖ್ಯೆಯೂ ನಿಧಾನವಾಗಿ ಹೆಚ್ಚಾಗುತ್ತಿದೆ. ಸೋಂಕು ಹರಡುವುದನ್ನು ನಿಯಂತ್ರಿಸಲು ಈಗಾಗಲೇ ಇಡೀ ದೇಶ ಲಾಕ್‌ಡೌನ್‌ ಘೋಷಿಸಿದೆ. ಕೊರೊನಾ ವಿರುದ್ಧ ಹೋರಾಡಲು ರಾಜ್ಯ ಸರ್ಕಾರಗಳು ಎಲ್ಲ ರೀತಿಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿದೆ.

ಇದೀಗ, ಒಡಿಶಾ ರಾಜ್ಯದಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಎರಡು ವಿಶೇಷವಾದ ಆಸ್ಪತ್ರೆ ಸಿದ್ಧ ಮಾಡಲು ಮುಂದಾಗಿದೆ. ಒಂದು ಸಾವಿರ ಬೆಡ್‌ ವ್ಯವಸ್ಥೆ ಒಳಗೊಂಡಿರುವಂತೆ ಕೊವಿಡ್ 19 ವಿರುದ್ಧ ಸತತವಾಗಿ ಹೋರಾಡಲು ಸಿದ್ಧತೆ ಮಾಡಲಾಗುತ್ತಿದೆ.

ರಾಜ್ಯದಲ್ಲಿ ಅರ್ಧಶತಕ ದಾಟಿದ ಕೊರೊನಾ ಕೇಸ್; ಆತಂಕ ಹೊರಹಾಕಿದ ಸಚಿವರಾಜ್ಯದಲ್ಲಿ ಅರ್ಧಶತಕ ದಾಟಿದ ಕೊರೊನಾ ಕೇಸ್; ಆತಂಕ ಹೊರಹಾಕಿದ ಸಚಿವ

ದೇಶದಲ್ಲಿ ಕೊರೊನಾ ರೋಗಿಗಳಿಗಾಗಿ ತಯಾರಾಗುತ್ತಿರುವ ಅತಿ ದೊಡ್ಡ ಆಸ್ಪತ್ರೆ ಎಂದು ಹೇಳಲಾಗುತ್ತಿದೆ. ಈ ಆಸ್ಪತ್ರೆಗಾಗಿ ಒಡಿಶಾ ಸರ್ಕಾರ ಕಿಮ್ಸ್ ಮತ್ತು ಸಮ್ ಆಸ್ಪತ್ರೆಗಳ ಜೊತೆ ಕೈಜೋಡಿಸಿದ್ದು, ಒಪ್ಪಂದ ಕೂಡ ಮಾಡಿಕೊಂಡಿದೆ. ಈ ಒಪ್ಪಂದಕ್ಕೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಕೂಡ ಸಹಿ ಮಾಡಿದ್ದಾರೆ.

Odisha Govt To Set Up Large COVID-19 Hospital

ಕೇಂದ್ರ ಆರೋಗ್ಯ ಸಚಿವ ಮಾಹಿತಿ ನೀಡಿರುವ ಪ್ರಕಾರ ಭಾರತದಲ್ಲಿ 649 ಕೊರೊನಾ ಸೋಂಕಿತರಿದ್ದಾರೆ. ಅದರಲ್ಲಿ 593 ಕೇಸ್ ಪ್ರಕ್ರಿಯೆಯಲ್ಲಿದೆ ಎಂದು ತಿಳಿಸಿದ್ದಾರೆ. ಪ್ರಸ್ತುತ ವರದಿಗಳ ಪ್ರಕಾರ ದೇಶದಲ್ಲಿ ಸೋಂಕಿತರ ಸಂಖ್ಯೆ 695ಕ್ಕೆ ಏರಿದ್ದು, ಸಾವಿನ ಸಂಖ್ಯೆ 18ಕ್ಕೆ ಏರಿದೆ.

English summary
Odisha Government to set up 2 large COVID-19 hospitals with 1,000 beds in state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X