ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಪುನಃ ಸಮ-ಬೆಸ ಸಂಖ್ಯೆ ವಾಹನ ಸಂಚಾರ

|
Google Oneindia Kannada News

ನವದೆಹಲಿ, ಅಕ್ಟೋಬರ್ 17 : ದೇಶದ ರಾಜಧಾನಿ ನವದೆಹಲಿಯಲ್ಲಿ ಪುನಃ ಸಮ-ಬೆಸ ಸಂಖ್ಯೆ ವಾಹನ ಸಂಚಾರ ಆರಂಭವಾಗಲಿದೆ. ಈ ನಿಯಮವನ್ನು ಉಲ್ಲಂಘನೆ ಮಾಡಿದರೆ 4 ಸಾವಿರ ರೂ. ದಂಡವನ್ನು ಪಾವತಿ ಮಾಡಬೇಕು.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈ ಕುರಿತು ಮಾಹಿತಿ ನೀಡಿದರು. "ನವೆಂಬರ್ 4 ರಿಂದ 15ರ ತನಕ ಸಮ-ಬೆಸ ಸಂಖ್ಯೆ ವಾಹನ ಸಂಚಾರವನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ" ಎಂದರು.

ದೆಹಲಿ : ಸಮ-ಬೆಸ ಸಂಚಾರ ವ್ಯವಸ್ಥೆಗೆ ಬ್ರೇಕ್ದೆಹಲಿ : ಸಮ-ಬೆಸ ಸಂಚಾರ ವ್ಯವಸ್ಥೆಗೆ ಬ್ರೇಕ್

Odd Even Scheme In Delhi From November 4

"ಭಾನುವಾರ ಹೊರತುಪಡಿಸಿ ಉಳಿದ ಎಲ್ಲಾ ದಿನಗಳು ಬೆಳಗ್ಗೆ 8 ರಿಂದ ರಾತ್ರಿ 8ರ ತನಕ ಸಮ-ಬೆಸ ವಾಹನಗಳ ಸಂಚಾರ ನಿಯಮ ಜಾರಿಯಲ್ಲಿರುತ್ತದೆ. ಹೊರ ರಾಜ್ಯಗಳಿಂದ ಬರುವ ವಾಹನಗಳಿಗೂ ಇದು ಅನ್ವಯ" ಎಂದು ಮುಖ್ಯಮಂತ್ರಿಗಳು ಹೇಳಿದರು.

ದೆಹಲಿಯಲ್ಲಿ ಮತ್ತೆ ಸಮ-ಬೆಸ ಕಾರುಗಳ ಯೋಜನೆ ಶೀಘ್ರವೇ ಜಾರಿದೆಹಲಿಯಲ್ಲಿ ಮತ್ತೆ ಸಮ-ಬೆಸ ಕಾರುಗಳ ಯೋಜನೆ ಶೀಘ್ರವೇ ಜಾರಿ

"ನಗರದಲ್ಲಿ ವಾಯು ಮಾಲಿನ್ಯ ಹೆಚ್ಚುತ್ತಿದ್ದು, ಈ ಸಮಸ್ಯೆ ನಿವಾರಣೆಗೆ ಮತ್ತೆ ಸಮ-ಬೆಸ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಚಳಿಗಾಲದಲ್ಲಿ ದೆಹಲಿ ಜನರನ್ನು ಕಾಡುವ ವಾಯು ಮಾಲಿನ್ಯ ಅಪಾಯಮಟ್ಟ ತಲುಪುತ್ತದೆ. ಈ ಹಿನ್ನಲೆಯಲ್ಲಿ ಇದರ ವಿರುದ್ಧ ಹೋರಾಡಲು ಅಲ್ಪಾವಧಿ ಮಾಪನದ ಫೇಸ್ ಮಾಸ್ಕ್ ಬಳಸುವಂತೆ ಪರಿಸರ ತಜ್ಞರು ಶಿಫಾರಸು ಮಾಡಿದ್ದಾರೆ" ಎಂದುರು.

ದೆಹಲಿ ಮಾದರಿಯಲ್ಲಿ ಟ್ರಾಫಿಕ್ ನಿಯಂತ್ರಣ: ಸಮ-ಬೆಸ ಜಾರಿಗೆ ಚಿಂತನೆದೆಹಲಿ ಮಾದರಿಯಲ್ಲಿ ಟ್ರಾಫಿಕ್ ನಿಯಂತ್ರಣ: ಸಮ-ಬೆಸ ಜಾರಿಗೆ ಚಿಂತನೆ

ದೆಹಲಿಯಲ್ಲಿ ವಾಯು ಮಾಲಿನ್ಯದ ಪ್ರಮಾಣ ಅಪಾಯದ ಮಟ್ಟ ತಲುಪಿದಾಗ ಸಮ-ಬೆಸ ವಾಹನ ಸಂಚಾರವನ್ನು ಜಾರಿಗೆ ತರಲಾಗುತ್ತದೆ. ಸದ್ಯ, 3ನೇ ಬಾರಿಗೆ ಈ ನಿಯಮ ಜಾರಿಗೆ ಬರುತ್ತಿದೆ.

English summary
Delhi Chief Minister Arvind Kejriwal said odd-even scheme will come to effect in New Delhi from November 4 to 15. Who violating the odd-even scheme to pay Rs 4000 fine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X