ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಯೋಗಿ ವಿರುದ್ಧ 'ಆಕ್ಷೇಪಾರ್ಹ' ಪೋಸ್ಟ್ ಷೇರ್ ಮಾಡಿದ್ದಕ್ಕೆ ಪತ್ರಕರ್ತ ಬಂಧನ

|
Google Oneindia Kannada News

ನವದೆಹಲಿ, ಜೂನ್ 9: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ವಿರುದ್ಧ 'ಆಕ್ಷೇಪಾರ್ಹ' ಪೋಸ್ಟ್ ಫೇಸ್ ಬುಕ್ ನಲ್ಲಿ ಷೇರ್ ಮಾಡಿದ ಆರೋಪದಲ್ಲಿ ಶನಿವಾರ ಪತ್ರಕರ್ತರೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ದೆಹಲಿ ಮೂಲದ ಪತ್ರಕರ್ತ ಪ್ರಶಾಂತ್ ಕನೋಜಿಯಾ ವಿರುದ್ಧ ಎಪ್ ಐಆರ್ ದಾಖಲಾಗಿದೆ.

ಹಜರತ್ ಗಂಜ್ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ರಾತ್ರಿ ಸಬ್ ಇನ್ ಸ್ಪೆಕ್ಟರ್ ಎಫ್ ಐಆರ್ ದಾಖಲಿಸಿದ್ದಾರೆ. ಉತ್ತರಪ್ರದೇಶದ ಮುಖ್ಯಮಂತ್ರಿ ವಿರುದ್ಧ ಆಕ್ಷೇಪಾರ್ಹ ಕಾಮೆಂಟ್ಸ್ ಮಾಡಿದ್ದು, ಅವರ ವರ್ಚಸ್ಸಿಗೆ ಧಕ್ಕೆ ಮಾಡಲು ಆರೋಪಿ ಯತ್ನಿಸಿರುವ ಆರೋಪ ಮಾಡಲಾಗಿದೆ.

ವಿಶ್ವೇಶ್ವರ ಭಟ್ ವಿರುದ್ಧ ಪ್ರಕರಣ: ಸಿಎಂಗೆ ಪತ್ರಕರ್ತರ ಸಂಘ ಪತ್ರವಿಶ್ವೇಶ್ವರ ಭಟ್ ವಿರುದ್ಧ ಪ್ರಕರಣ: ಸಿಎಂಗೆ ಪತ್ರಕರ್ತರ ಸಂಘ ಪತ್ರ

ಲಖನೌನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಕಲಾನಿಧಿ ನೈಥಾನಿ ಮಾತನಾಡಿ, ಐಪಿಸಿ ಸೆಕ್ಷನ್ 500 (ಮಾನಹಾನಿ ಆಗುವಂಥ ಕಾಮೆಂಟ್ಸ್ ಮಾಡಿದ್ದಕ್ಕೆ) ಹಾಗೂ ಸೆಕ್ಷನ್ 66 ಐಟಿ ಕಾಯ್ದೆ (ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಕಾಮೆಂಟ್ಸ್ ಹಾಕಿದ್ದಕ್ಕೆ) ಅಡಿ ಕನೋಜಿಯಾ ವಿರುದ್ಧ ಎಫ್ ಐಆರ್ ಅಗಿದೆ. ತನಿಖೆ ನಡೆಯುತ್ತಿದ್ದು, ಇದೇ ವಿಷಯವಾಗಿ ಇನ್ನೂ ಕೆಲವರನ್ನು ಪ್ರಶ್ನಿಸಲಾಗುತ್ತದೆ ಎಂದಿದ್ದಾರೆ.

Prashanth Kanojia

ಪಿಟಿಐ ಸುದ್ದಿ ಸಂಸ್ಥೆಯ ಪ್ರಕಾರ: ಉತ್ತರಪ್ರದೇಶದ ಮುಖ್ಯಮಂತ್ರಿ ಕಚೇರಿ ಎದುರು ನಿಂತ ಮಹಿಳೆಯೊಬ್ಬರು, ಯೋಗಿ ಆದಿತ್ಯನಾಥ್ ಅವರಿಗೆ ಮದುವೆ ಪ್ರಸ್ತಾವ ಕಳುಹಿಸಿದ್ದೇನೆ ಎಂದು ಮಾಧ್ಯಮಗಳ ಎಂದು ಹೇಳಿದ್ದರು. ಆ ವಿಡಿಯೋವನ್ನು ಕನೋಜಿಯಾ ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಲ್ಲಿ ಷೇರ್ ಮಾಡಿಕೊಂಡಿದ್ದರು.

ಜೆಡಿಎಸ್ ಮಾಧ್ಯಮದ ಮೇಲೆ ಸಿಟ್ಟು ತೀರಿಸಿಕೊಳ್ಳುವುದು ದುರದೃಷ್ಟಕರಜೆಡಿಎಸ್ ಮಾಧ್ಯಮದ ಮೇಲೆ ಸಿಟ್ಟು ತೀರಿಸಿಕೊಳ್ಳುವುದು ದುರದೃಷ್ಟಕರ

ಲಖನೌ ಪೊಲೀಸರು ಶನಿವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಅವರು (ಕನೋಜಿಯಾ) ಪತ್ರಿಕಾ ಸಂಸ್ಥೆಗೆ ಸಂಬಂಧಪಟ್ಟವರು ಎಂಬುದನ್ನು ವಿಚಾರಣೆ ವೇಳೆ ತಿಳಿಸಿಲ್ಲ ಎಂದಿದ್ದಾರೆ.

English summary
Objectionable post against CM Yogi Adityanath shared by Journalist Prashanth Kanojia, he was arrested in New Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X