• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಕಾಣೆಯಾದ ದೂರು ದಾಖಲಿಸಿದ ಎನ್‌ಎಸ್‌ಯುಐ

|

ನವದೆಹಲಿ, ಮೇ 13: 'ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಣೆಯಾಗಿದ್ದಾರೆ' ಎಂದು ಎನ್‌ಎಸ್‌ಯುಐ ಘಟಕದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾಗೇಶ್ ಕರಿಯಪ್ಪ ಅವರು ಸಲ್ಲಿಸಿದ್ದ ದೂರಿನ ಮೇರೆಗೆ ದೆಹಲಿ ಪೊಲೀಸರು ಬುಧವಾರ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಕಚೇರಿಗೆ ಭೇಟಿ ನೀಡಿದ್ದಾರೆ.

"ಸಾಂಕ್ರಾಮಿಕ ಮತ್ತು ನಾಗರಿಕರು ಬಿಕ್ಕಟ್ಟಿನ ಮಧ್ಯೆ ಗೃಹ ಸಚಿವರು ಕಣ್ಮರೆಯಾಗಿದ್ದಾರೆ' ಎಂದು ಆರೋಪಿಸಿ ವಿದ್ಯಾರ್ಥಿ ಮುಖಂಡರು ಬುಧವಾರ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ರಾಜಕಾರಣಿಗಳು ರಾಷ್ಟ್ರದ ಸೇವೆ ಮಾಡಬೇಕಿತ್ತು ಮತ್ತು ಬಿಕ್ಕಟ್ಟಿನ ಪರಿಸ್ಥಿತಿಯಿಂದ ಓಡಿಹೋಗಬಾರದು ಎಂದು ಹೇಳಿದ ಕರಿಯಪ್ಪ, "ದೇಶವು ಮಾರಣಾಂತಿಕ ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವಾಗ ಮತ್ತು ನಾಗರಿಕರು ಬಿಕ್ಕಟ್ಟಿನಲ್ಲಿರುವಾಗ, ಇಡೀ ದೇಶಕ್ಕೆ ಹೊಣೆಗಾರರಾಗಿರುವುದು ರಾಜಕಾರಣಿಗಳ ಕರ್ತವ್ಯ' ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ಮಾಧ್ಯಮ ಮತ್ತು ಸಂವಹನಗಳ ಉಸ್ತುವಾರಿ ಲೋಕೇಶ್ ಚುಗ್ ಮಾತನಾಡಿ, "2013ರವರೆಗೆ ರಾಜಕಾರಣಿಗಳು ನಾಗರಿಕರ ಬಗ್ಗೆ ಜವಾಬ್ದಾರರಾಗಿದ್ದರು, ಆದರೆ 2014ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿಷಯಗಳು ಸಂಪೂರ್ಣವಾಗಿ ಬದಲಾದವು'' ಎಂದು ಹೇಳಿದರು.

ಈಗ, ಕೊರೊನಾ ಸಾಂಕ್ರಾಮಿಕದ ಮಧ್ಯೆ 2ನೇ ಅತ್ಯಂತ ಶಕ್ತಿಶಾಲಿ ಮತ್ತು ಜವಾಬ್ದಾರಿಯುತ ವ್ಯಕ್ತಿ ಎಲ್ಲಿ ಕಾಣೆಯಾಗಿದ್ದಾರೆ ಎಂದು ನಾಗೇಶ್ ಕರಿಯಪ್ಪ ಅವರು ಪ್ರಶ್ನಿಸಿದರು. ಆದ್ದರಿಂದ, ಎನ್‌ಎಸ್‌ಯುಐ ಕಾಣೆಯಾದ ದೂರು ದಾಖಲಿಸಿದೆ. "ಸರ್ಕಾದಿಂದ ಉತ್ತರಗಳನ್ನು ತಿಳಿದುಕೊಳ್ಳಲು ನಾವು ಕಾಯುತ್ತಿದ್ದೇವೆ," ಎಂದು ಅವರು ಹೇಳಿದರು.

ಪೊಲೀಸ್ ತಂಡದ ಭೇಟಿಯ ಬಗ್ಗೆ ಕೇಳಿದಾಗ, ಎನ್‌ಎಸ್‌ಯುಐ ಅವರು ದೂರಿನ ಬಗ್ಗೆ ಚುಗ್ ಮತ್ತು ಕರಿಯಪ್ಪ ಅವರ ಬಗ್ಗೆ ವಿಚಾರಿಸಲು ಬಂದಿದ್ದಾರೆ ಎಂದು ಹೇಳಿದರು. ಆದರೆ, ಎನ್‌ಎಸ್‌ಯುಐ ಮುಖಂಡರು ಸ್ವತಃ ಪೊಲೀಸರನ್ನು ಕರೆದಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

"ಅವರು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಸಚಿವರು ಕಾಣೆಯಾಗಿದ್ದಾರೆ. ನಂತರ ಪೊಲೀಸರು ಎನ್‌ಎಸ್‌ಯುಐ ಕಚೇರಿಗೆ ತೆರಳಿ ಈ ವಿಷಯವನ್ನು ಪರಿಶೀಲಿಸಿದರು" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "ಇದು ಒಂದು ಚೇಷ್ಟೆಯ ಕೃತ್ಯ ಮತ್ತು ಪೊಲೀಸರು ಅಂತಹ ದೂರಿನ ಮೇಲೆ ಕಾರ್ಯನಿರ್ವಹಿಸುವುದಿಲ್ಲ' ಎಂದು ಮತ್ತೊಬ್ಬ ಅಧಿಕಾರಿ ಹೇಳಿದರು.

ಜನರಿಗೆ ಉತ್ತರಿಸಲು ಸರ್ಕಾರಕ್ಕಾಗಿ ನಾವು ಕಾಯುತ್ತಿದ್ದೇವೆ: ಎನ್‌ಎಸ್‌ಯುಐ

ಕೊರೊನಾ ರೋಗವನ್ನು ತಡೆಗಟ್ಟುವಲ್ಲಿ ಪ್ರಸ್ತುತ ಸರ್ಕಾರ ವಿಫಲವಾಗಿದೆ ಮತ್ತು ಇದರ ಪರಿಣಾಮವಾಗಿ ಗೃಹ ಸಚಿವರ ವಿರುದ್ಧ ಎನ್‌ಎಸ್‌ಯುಐ ಕಾಣೆಯಾದ ಬಗ್ಗೆ ದೂರು ದಾಖಲಿಸಿದೆ ಮತ್ತು ಸರ್ಕಾರವು ತನ್ನ ಜನರಿಗೆ ಉತ್ತರಿಸಬೇಕೆಂದು ನಾವು ಕಾಯುತ್ತಿದ್ದೇವೆ ಎಂದು ಕರಿಯಪ್ಪ ಮಾಧ್ಯಮಗಳಿಗೆ ತಿಳಿಸಿದರು.

English summary
The National chief Secretary of NSUI unit Nagesh Kariyappa has complained that Union Home Minister Amit Shah is missing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X