ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ: ಗ್ಯಾಸ್ ದರದಲ್ಲಿ ರೂ. 73.5 ಹೆಚ್ಚಳ, ಇಂದಿನಿಂದಲೇ ಜಾರಿ

By Sachhidananda Acharya
|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 1: ರಾಷ್ಟ್ರ ರಾಜಧಾನಿಯಲ್ಲಿ ಅಡುಗೆ ಅನಿಲ ದರ ಸಿಕ್ಕಾಪಟ್ಟಾ ಹೆಚ್ಚಾಗಿದೆ. ಇಂದಿನಿಂದ ನೂತನ ದರ ಜಾರಿಗೆ ಬಂದಿದ್ದು 14.2 ಕೆಜಿಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ರೂ. 73.5ರಷ್ಟು ಏರಿಕೆಯಾಗಿದೆ.

ಪ್ರತಿ ತಿಂಗಳು ಸಬ್ಸಿಡಿ ಎಲ್ ಪಿಜಿ ಸಿಲಿಂಡರ್ ಬೆಲೆ ಏರಿಕೆಪ್ರತಿ ತಿಂಗಳು ಸಬ್ಸಿಡಿ ಎಲ್ ಪಿಜಿ ಸಿಲಿಂಡರ್ ಬೆಲೆ ಏರಿಕೆ

ನೂತನ ದರ ಇಂದಿನಿಂದ ಅಂದರೆ ಸೆಪ್ಟೆಂಬರ್ 1ರಿಂದ ಜಾರಿಗೆ ಬರಲಿದೆ ಎಂದು ವರದಿಗಳು ಹೇಳಿವೆ. ಹೀಗಾಗಿ 14.2 ಕೆಜಿಯ ಗ್ಯಾಸ್ ಸಿಲಿಂಡರ್ ಬೆಲೆ ಶೇಕಡಾ 14ರಷ್ಟು ವೃದ್ಧಿಯೊಂದಿಗೆ ಇದೀಗ 597.5 ರೂಪಾಯಿಯಾಗಿದೆ. ಈ ಹಿಂದೆ ಇಲ್ಲಿ ಸಿಲಿಂಡರ್ ಬೆಲೆ 524 ರೂಪಾಯಿಯಾಗಿತ್ತು.

Now, LPG price hiked by Rs 73.50 in Delhi, applicable from September 1

ಈ ಹಿಂದೆ ಪ್ರತಿ ತಿಂಗಳು 4 ರೂಪಾಯಿ ದರ ಏರಿಕೆ ಮಾಡುವಂತೆ ತೈಲ ಸಚಿವ ಧರ್ಮೇಂದ್ರ ಪ್ರಧಾನ್ ತೈಲ ಕಂಪನಿಗಳಿಗೆ ಸೂಚನೆ ನೀಡಿದ್ದರು. ಈ ಮೂಲಕ ಸಬ್ಸಿಡಿಯಿಂದ ಗ್ಯಾಸ್ ತೆರವುಗೊಳಿಸುವಂತೆ ಸೂಚಿಸಿದ್ದರು. ಇದಾಗಿ ಒಂದು ತಿಂಗಳಲ್ಲೇ ಗ್ಯಾಸ್ ದರ ಹೆಚ್ಚಾಗಿದೆ.

ಈ ಹಿಂದೆ ಗ್ಯಾಸ್ ಕಂಪನಿಗಳು ಜುಲೈ 1ರಂದು ಗ್ಯಾಸ್ ದರವನ್ನು ರೂಪಾಯಿ 32ರಷ್ಟು ಏರಿಕೆ ಮಾಡಿದ್ದವು. ಇದೀಗ 73.5 ರೂಪಾಯಿ ಮತ್ತೆ ಏರಿಕೆ ಮಾಡಿದ್ದು ಸಾರ್ವಜನಿಕರಿಗೆ ಹೊರೆಯಾಗಿದೆ.

ಪ್ರತಿ ಕುಟುಂಬಕ್ಕೆ ವರ್ಷಕ್ಕೆ 12 ಸಬ್ಸಿಡಿ ಗ್ಯಾಸ್ ಸಿಲಿಂಡರ್ ಮಿತಿಯನ್ನು ಸರಕಾರ ನಿಗದಿ ಮಾಡಿದೆ. ಇದಕ್ಕಿಂತ ಹೆಚ್ಚಿ ನ ಸಿಲಿಂಡರ್ ಬೇಕಾಗಿದ್ದಲ್ಲಿ ಮುಕ್ತ ಮಾರುಕಟ್ಟೆಯಿಂದಲೇ ಗ್ರಾಹಕರು ಖರೀದಿಸಬೇಕಾಗಿದೆ.

ದೇಶದಲ್ಲಿ 18.11 ಕೊಟಿ ಗ್ರಾಹಕರು ಸಬ್ಸಿಡಿ ಗ್ಯಾಸ್ ಬಳಸುತ್ತಿದ್ದರೆ 2.66 ಕೋಟಿ ಗ್ರಾಹಕರು ಸಬ್ಸಿಡಿ ರಹಿತ ಗ್ಯಾಸ್ ಬಳಸುತ್ತಿದ್ದಾರೆ.

English summary
The price of the domestic cooking gas or Liquified Petroleum Gas (LPG) prices in Delhi have been hiked to Rs 73.50 from midnight August 31/September 1. The revised price of a cylinder will be Rs 597.50 for September this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X