ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ವಿಮಾನ ನಿಲ್ದಾಣದಿಂದ ಹಾರಾಟ ಇನ್ಮುಂದೆ ದುಬಾರಿ

|
Google Oneindia Kannada News

ನವದೆಹಲಿ, ನವೆಂಬರ್ 29: ದೆಹಲಿ ವಿಮಾನ ನಿಲ್ದಾಣದಿಂದ ಪ್ರಯಾಣಿಸುವವರು ಡಿಸೆಂಬರ್ 1,2018ರಿಂದ ಹೆಚ್ಚುವರಿ ಶುಲ್ಕವನ್ನು ಸೇವಾ ತೆರಿಗೆ ರೂಪದಲ್ಲಿ ಕಟ್ಟ ಬೇಕಾಗುತ್ತದೆ.

ವಿಮಾನ ನಿಲ್ದಾಣದ ಆಪರೇಟರ್ ಡೆಲ್ಲಿ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಪ್ರೈ ಲಿ (DIAL), ಸೇವಾ ಶುಲ್ಕ ಹೆಚ್ಚಳ ಮಾಡುವ ಘೋಷಣೆ ಮಾಡಿದೆ.

ವಿಮಾನ ನಿಲ್ದಾಣದಲ್ಲಿ ಕಡಿಮೆ ಬೆಲೆಗೆ ಸಿಗಲಿದೆ ಕಾಫಿ, ಟೀವಿಮಾನ ನಿಲ್ದಾಣದಲ್ಲಿ ಕಡಿಮೆ ಬೆಲೆಗೆ ಸಿಗಲಿದೆ ಕಾಫಿ, ಟೀ

ಈ ಹಿಂದೆ ಸ್ಥಳೀಯ ಟಿಕೆಟ್ ಗೆ 10 ರೂಪಾಯಿ ಹಾಗೂ ಅಂತಾರಾಷ್ಟ್ರೀಯ ಟಿಕೆಟ್ ಗೆ 45 ರೂಪಾಯಿ ಪಾವತಿ ಸೇವಾ ಶುಲ್ಕದ ರೂಪದಲ್ಲಿ ಪಾವತಿ ಮಾಡಬೇಕಾಗಿತ್ತು.

ದೇಶದಲ್ಲಿ ಹೊಸದಾಗಿ 100 ವಿಮಾನ ನಿಲ್ದಾಣ ಸ್ಥಾಪನೆ!ದೇಶದಲ್ಲಿ ಹೊಸದಾಗಿ 100 ವಿಮಾನ ನಿಲ್ದಾಣ ಸ್ಥಾಪನೆ!

ನೂತನ ದರ ಪಟ್ಟಿಗೆ ಏರ್ ಪೋರ್ಟ್ಸ್ ಎಕಾನಾಮಿಕ್ ರೆಗುಲೇಟರಿ ಅಥಾರಿಟಿ ಆಫ್ ಇಂಡಿಯಾ (ಎಇಆರ್ ಎ) ತನ್ನ ಸಮ್ಮತಿ ನೀಡಿದೆ. ಹೀಗಾಗಿ, ಇನ್ಮುಂದೆ 77 ರೂಪಾಯಿಗಳನ್ನು ಪ್ರಯಾಣಿಕರ ಸೇವಾ ಶುಲ್ಕ ರೂಪದಲ್ಲಿ ಹೆಚ್ಚುವರಿಯಾಗಿ ನೀಡಬೇಕು. ಆದರೆ, ಎಇಆರ್ ಎ ತಂದಿರುವ ಹೊಸ ಬದಲಾವಣೆಯನ್ನು ಇಂಡಿಗೋ, ಜೆಟ್ ಏರ್ ವೇಸ್, ಸ್ಪೈಸ್ ಜೆತ್ ಹಾಗೂ ಗೋಏರ್ ವಿಮಾನಯಾನ ಸಂಸ್ಥೆಗಳು ವಿರೋಧಿಸಿವೆ.

ಸೇವಾ ಶುಲ್ಕ ಹೆಚ್ಚಳ ಮಾಡುವ ಘೋಷಣೆ

ಸೇವಾ ಶುಲ್ಕ ಹೆಚ್ಚಳ ಮಾಡುವ ಘೋಷಣೆ

ದೆಹಲಿ ವಿಮಾನ ನಿಲ್ದಾಣದಿಂದ ಪ್ರಯಾಣಿಸುವವರು ಡಿಸೆಂಬರ್ 1,2018ರಿಂದ ಹೆಚ್ಚುವರಿ ಶುಲ್ಕವನ್ನು ಸೇವಾ ತೆರಿಗೆ ರೂಪದಲ್ಲಿ ಕಟ್ಟ ಬೇಕಾಗುತ್ತದೆ.

ವಿಮಾನ ನಿಲ್ದಾಣದ ಆಪರೇಟರ್ ಡೆಲ್ಲಿ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಪ್ರೈ ಲಿ (DIAL), ಸೇವಾ ಶುಲ್ಕ ಹೆಚ್ಚಳ ಮಾಡುವ ಘೋಷಣೆ ಮಾಡಿದೆ.

ವಿಮಾನಯಾನ ದರ ಏರಿಕೆ ಸಾಧ್ಯತೆ?

ವಿಮಾನಯಾನ ದರ ಏರಿಕೆ ಸಾಧ್ಯತೆ?

ಇಂಡಿಗೋ, ಜೆಟ್ ಏರ್ ವೇಸ್, ಸ್ಪೈಸ್ ಜೆತ್ ಹಾಗೂ ಗೋಏರ್ ವಿಮಾನಯಾನ ಸಂಸ್ಥೆಗಳು ಒಟ್ಟಿಗೆ ಎಇಆರ್ ಎ ತಂದಿರುವ ಶುಲ್ಕ ಬದಲಾವಣೆಯನ್ನು ವಿರೋಧಿಸಿವೆ. ಇದರಿಂದ ವಿಮಾನಯಾನ ಹಾಗೂ ಪ್ರಯಾಣಿಕರ ಮೇಲೆ ಪರಿಣಾಮ ಬೀರಲಿದೆ. ಸದ್ಯಕ್ಕೆ ಪ್ರಯಾಣ ದರ ಏರಿಕೆ ಬಗ್ಗೆ ಚಿಂತಿಸಿಲ್ಲ. ಆದರೆ, ಶೇ3 ರಿಂದ 7ರಷ್ಟು ಪ್ರಯಾಣ ದರ ಏರಿಕೆ ನಿರೀಕ್ಷಿಸಬಹುದು ಎಂದು ಮೂಲಗಳಿಂದ ತಿಳಿದು ಬಂದಿದೆ.

ವಿಮಾನಗಳ ಲ್ಯಾಂಡಿಂಗ್ ದರ

ವಿಮಾನಗಳ ಲ್ಯಾಂಡಿಂಗ್ ದರ

ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಐಜಿಐಎ)ದಲ್ಲಿ ವಿಮಾನಗಳ ಲ್ಯಾಂಡಿಂಗ್ ದರ ಮುಂದಿನ ತಿಂಗಳಿನಿಂದ ಹೆಚ್ಚಾಗಲಿದೆ. ಪೀಕ್ ಅವರ್ ಗಳಲ್ಲಿ ರಾತ್ರಿ 11.01 ರಿಂದ 12 ಗಂಟೆ ಅವಧಿಯಲ್ಲಿ ಲ್ಯಾಂಡಿಂಗ್ ಬಯಸುವ ವಿಮಾನಗಳಿಗೆ ಪ್ರತಿ ಗಂಟೆಗೆ ಶೇ 5ರಂತೆ ಹೆಚ್ಚಳವಾಗಲಿದೆ.

ಶೇ 5ರಷ್ಟು ರಿಬೇಟ್ ಕೂಡಾ ಸಿಗಲಿದೆ

ಶೇ 5ರಷ್ಟು ರಿಬೇಟ್ ಕೂಡಾ ಸಿಗಲಿದೆ

ಅದೇ ಮಧ್ಯರಾತ್ರಿ 12ರ ನಂತರ(1.01 pm ರಿಂದ 4 pm) ಇಳಿಯುವ ವಿಮಾನಗಳಿಗೆ ಶೇ 5ರಷ್ಟು ರಿಬೇಟ್ ಸಿಗಲಿದೆ. ಸೂಪರ್ ಸೋನಿಕ್ ಏರ್ ಕ್ರಾಫ್ಟ್ ಗಳು ಶೇ 25ರಷ್ಟು ಹೆಚ್ಚಿಗೆ ಮೊತ್ತವನ್ನು ನೀಡಬೇಕಾಗಿದೆ. ಇದಲ್ಲದೆ, ಇಂಧನ ಬಳಕೆ ಪ್ರಮಾಣ ದರವನ್ನು 500 ರು ಪ್ರತಿ ಕಿಲೋ ಲೀಟರ್ ಹೆಚ್ಚಲ ಮಾಡಲಾಗಿದೆ. ಇದು ಕೂಡಾ ಡಿಸೆಂಬರ್ 01ರಿಂದ ಜಾರಿಗೆ ಬರಲಿದೆ.

English summary
Now, Passengers flying out of Delhi airport will have to shell out more money from December 1, with regulator Airports Economic Regulatory Authority of India(AERA) approving revision in service charges.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X