ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾರ್ಟಿಯಲ್ಲಾಗಲೀ ಮನೆಯಲ್ಲಾಗಲೀ 'ಎಣ್ಣೆ' ಹೊಡಿಬೇಡಿ ಎಂದ ಐಎಂಡಿ

|
Google Oneindia Kannada News

ನವದೆಹಲಿ, ಡಿಸೆಂಬರ್ 27: ಉತ್ತರ ಭಾರತದಲ್ಲಿ ವಿಪರೀತ ಚಳಿ ಇರಲಿದ್ದು, ಮನೆ ಅಥವಾ ವರ್ಷಾಂತ್ಯದ ಪಾರ್ಟಿಗಳಲ್ಲಿ ಮದ್ಯಪಾನ ಮಾಡಬೇಡಿ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಸಲಹೆ ಮಾಡಿದೆ. ಪಿಟಿಐ ಸುದ್ದಿ ಸಂಸ್ಥೆ ಈ ಬಗ್ಗೆ ವರದಿ ಮಾಡಿದೆ. ಐಎಂಡಿ ಹೇಳಿರುವಂತೆ, ಪಂಜಾಬ್, ಹರಿಯಾಣ, ದೆಹಲಿ, ಉತ್ತರಪ್ರದೇಶ ಮತ್ತು ಉತ್ತರ ರಾಜಸ್ಥಾನದಲ್ಲಿ ಡಿಸೆಂಬರ್ 28ರಿಂದ "ತೀವ್ರ" ಸ್ವರೂಪದ ಶೀತ ಮಾರುತ ಬೀಸಬಹುದು ಎಂದು ಹೇಳಲಾಗಿದೆ.

ಈ ಶೀತ ಮಾರುತದಿಂದ ಜ್ವರ, ಮೂಗು ಕಟ್ಟುವುದು ಮೊದಲಾದ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎನ್ನಲಾಗಿದೆ. "ಆಲ್ಕೋಹಾಲ್ ಸೇವಿಸಬೇಡಿ. ಇದರಿಂದ ದೇಹದ ಉಷ್ಣಾಂಶ ಕಡಿಮೆಯಾಗುತ್ತದೆ," ಎಂದು ಐಎಂಡಿಯ ಎಚ್ಚರಿಕೆ ಮಾತುಗಳನ್ನು ಉದಾಹರಿಸಿ, ಪಿಟಿಐ ಸುದ್ದಿ ಮಾಡಿದೆ.

ಉತ್ತರ ಭಾರತದಲ್ಲಿ ಭಾರೀ ಶೀತ ಗಾಳಿ ಮುನ್ಸೂಚನೆಉತ್ತರ ಭಾರತದಲ್ಲಿ ಭಾರೀ ಶೀತ ಗಾಳಿ ಮುನ್ಸೂಚನೆ

''ಆದಷ್ಟು ಮನೆಯೊಳಗೇ ಇರಿ. ವಿಟಮಿನ್- ಸಿ ಹೆಚ್ಚಾಗಿರುವ ಹಣ್ಣನ್ನು ತಿನ್ನಿ. ಚರ್ಮವು ಒಣಗದಂತೆ ಎಚ್ಚರಿಕೆ ವಹಿಸಿ ಎಂದು ತಿಳಿಸಲಾಗಿದೆ. ಭಾನುವಾರ ಹಾದ್ದಾಗಿರುತ್ತದೆ'' ಎಂದು ಐಎಂಡಿ ಪ್ರಾದೇಶಿಕ ಕೇಂದ್ರದ ಮುಖ್ಯಸ್ಥ ಕುಲ್ ದೀಪ್ ಶ್ರೀಗೂ ಸೋಮವಾರ ಸ್ವಲ್ಪ ಮಟ್ಟಿಗೆ ಉಷ್ಣಾಂಶ ಏರಿಕೆ ಆಗಬಹುದು. ಆದರೆ ಈ ಪರಿಹಾರವು ಅಲ್ಪ ಕಾಲವಾಸ್ತವ ಹೇಳಿದ್ದಾರೆ.

North India braces for severe cold wave, Avoid drinking, says IMD

ಉತ್ತರ ಭಾರತದಲ್ಲಿ ತಾಪಮಾನವು ಕನಿಷ್ಠ ಮೂರರಿಂದ ಐದು ಡಿಗ್ರಿ ಸೆಲ್ಷಿಯಸ್ ಗೆ ತಲುಪಬಹುದು ಎಂದು ಐಎಂಡಿ ಹೇಳಿದೆ. ಐಎಂಡಿ ಪ್ರಕಾರ, ದೆಹಲಿಯಲ್ಲಿ ಕನಿಷ್ಠ 6 ಡಿಗ್ರಿ ಸೆಲ್ಷಿಯಸ್ ಹಾಗೂ ಗರಿಷ್ಠ 23 ಡಿಗ್ರಿ ಸೆಲ್ಷಿಯಸ್ ಇರಲಿದೆ. ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ರಾಜಸ್ಥಾನ, ಪೂರ್ವ ಉತ್ತರ ಪ್ರದೇಶದಲ್ಲಿ ಶೀತ ಗಾಳಿ ಆವರಿಸಲಿದೆ. ಈ ರಾಜ್ಯಗಳಲ್ಲಿ ಬೆಳಗ್ಗಿನ ಸಮಯದಲ್ಲಿ ದಟ್ಟ ಮಂಜು ಮುಸುಕಿದ ವಾತಾವರಣ ಇರಲಿದೆ ಎಂದು ತಿಳಿಸಿದೆ.

English summary
According to the India Meteorological Department (IMD), it is going to get very cold in North India, and drinking alcohol at home or year-end parties is not advised.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X