• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೆಹಲಿಯಲ್ಲಿ ಸಹಜ ಸ್ಥಿತಿಗೆ ಮರಳಿದ ಗ್ರೇ ಮೆಟ್ರೋ ಮಾರ್ಗ, ಸಂಚಾರ ಆರಂಭ

|

ನವದೆಹಲಿ, ಜನವರಿ 26: ದೆಹಲಿಯಲ್ಲಿ ರೈತರ ಪ್ರತಿಭಟನೆಯಿಂದಾಗಿ ಮೆಟ್ರೋ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇದೀಗ ಗ್ರೇ ಮಾರ್ಗದ ಮೆಟ್ರೋ ಸಂಚಾರ ಆರಂಭಗೊಂಡಿದೆ ಎಂದು ಮೆಟ್ರೋ ಕಾರ್ಪೊರೇಷನ್ ತಿಳಿಸಿದೆ.

ಡಿಎಂಆರ್‌ಸಿ ಹಲವು ಮಾರ್ಗಗಳನ್ನು ಬಂದ್ ಮಾಡುವಂತೆ ಆದೇಶ ಹೊರಡಿಸಿತ್ತು. ಟ್ರ್ಯಾಕ್ಟರ್ ಪ್ರತಿಭಟನೆ ಹಮ್ಮಿಕೊಂಡಿದ್ದ ಕಾರಣ ಹಲವು ಕಡೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಒಂದೇ ಗೇಟಿನಲ್ಲಿ ಎಂಟ್ರಿ ಹಾಗೂ ಎಕ್ಸಿಟ್ ಇರಿಸಲಾಗಿದೆ. ಸಮಯ್‌ಪುರ್ ಬದ್ಲಿ, ರೋಹಿಣಿ ಸೆಕ್ಟರ್ 18/19, ಹೈದರ್‌ಪುರ್, ಜಹಂಗೀರ್‌ಪುರಿ, ಆದರ್ಶ ನಗರ, ಆಜಾದ್‌ಪುರ, ಮಾಡೆಲ್ ಟೌನ್, ಜಿಟಿಬಿ ನಗರ, ವಿಶ್ವವಿದ್ಯಾಲಯ, ವಿಧಾನ್‌ಸಭಾ ಈ ಮಾರ್ಗದಲ್ಲಿ ಮೆಟ್ರೋ ಸಂಚರಿಸಲಿದೆ.

ರೈತ ಪ್ರತಿಭಟನೆ ಹತ್ತಿಕ್ಕುವ ಪ್ರಯತ್ನ ಮಾಡಿದರೆ ದೊಡ್ಡ ಬೆಲೆ ತೆರಬೇಕಾಗುತ್ತದೆ:ಸಿದ್ದರಾಮಯ್ಯ

ಹಾಗೆಯೇ ಟ್ರ್ಯಾಕ್ಟರ್ ಪಲ್ಟಿ ಹೊಡೆದ ಪರಿಣಾಮ ಓರ್ವ ರೈತ ಕೂಡ ಮೃತಪಟ್ಟಿದ್ದರು. ಆತ ಟ್ರ್ಯಾಕ್ಟರ್ ಓಡಿಸುತ್ತಿದ್ದ, ಟ್ರ್ಯಾಕ್ಟರ್ ಪಲ್ಟಿ ಹೊಡೆದ ಪರಿಣಾಮ ಮತ್ತೊಂದು ವಾಹನದ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ರೈತರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು ದೆಹಲಿಯ ಕೆಂಪುಕೋಟೆಗೆ ಮುತ್ತಿಗೆ ಹಾಕಿದ ರೈತರು ಧ್ವಜಸ್ತಂಭ ಮತ್ತು ಕೆಂಪುಕೋಟೆಯ ಗುಂಬಜ್ ಮೇಲೆ ಕಿಸಾನ್ ಮತ್ತು ಸಿಖ್ ಬಾವುಟವನ್ನು ಹಾರಿಸಲಾಗಿದೆ.

72ನೇ ಗಣರಾಜ್ಯೋತ್ಸವ ಸಂಭ್ರಮ ವಿಶೇಷ ಪುಟ

ಈ ವೇಳೆ ಪೊಲೀಸರು ಹರಸಾಹಸ ಪಟ್ಟು ರೈತರನ್ನು ಚದುರಿಸಬೇಕಾಯಿತು. ಲಾಠಿ ಚಾರ್ಜ್ ಮತ್ತು ಟಿಯರ್ ಗ್ಯಾಸ್ ಪ್ರಯೋಗಿಸುತ್ತಾ ಪೊಲೀಸರು ರೈತರನ್ನು ಕೆಂಪುಕೋಟೆ ಆವರಣದಿಂದ ಚದುರಿಸುತ್ತಿದ್ದಾರೆ.

Farmers Protest Live Updates: ದೆಹಲಿಯಲ್ಲಿ ರೈತರ ಪ್ರತಿಭಟನೆ; ಗೃಹ ಸಚಿವರ ಮಹತ್ವದ ಸಭೆ

ಕೆಂಪುಕೋಟೆಗೆ ನುಗ್ಗಿದ ರೈತರು ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಧ್ವಜ ಹಾರಿಸುವ ಧ್ವಜಸ್ಥಂಭದ ಮೇಲೆ ಕಿಸಾನ್ ಮತ್ತು ಸಿಖ್ ಧ್ವಜವನ್ನು ಹಾರಿಸಿದ್ದಾರೆ. ಇನ್ನು ಕೆಲ ರೈತರು ಗುಂಜಬ್ ಮೇಲೆ ಸಿಖ್ ಧ್ವಜವನ್ನು ಹಾರಿಸಿದ್ದಾರೆ.

English summary
The Delhi Metro Rail Corporation On Tuesday Said That Normal Service Has Resumed On Grey Line.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X