ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಟಿಎಂ ಬಳಕೆದಾರರಿಗೆ ಸಿಹಿಸುದ್ದಿ ನೀಡಿದ ಆರ್ ಬಿಐ

|
Google Oneindia Kannada News

ನವದೆಹಲಿ, ಆಗಸ್ಟ್ 15: ಎಟಿಎಂ ಬಳಕೆದಾರರು ನಿರಾಳತೆ ಅನುಭವಿಸುವಂಥ ಸಿಹಿ ಸುದ್ದಿಯೊಂದನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್ಬಿಐ) ನೀಡಿದೆ.

ಇಷ್ಟು ದಿನ ಎಟಿಎಂ ಬಳಕೆದಾರರು ಹಣವನ್ನು ಡ್ರಾ ಮಾಡದಿದ್ದರೂ, ಎಟಿಎಂನಲ್ಲಿ ಯಾವುದೇ ರೀತಿಯ ಟ್ರಾನ್ಸಾಕ್ಷನ್ ಮಾಡಿದ್ದರೂ ಅದಕ್ಕೆ ಇಂತಿಷ್ಟು ಶುಲ್ಕ ಕಡಿತವಾಗುತ್ತಿತ್ತು. ಆದರೆ ಇನ್ನು ಮುಂದೆ ಹಣ ಡ್ರಾ ಮಾಡುವ ವ್ಯವಹಾರಕ್ಕೆ ಮಾತ್ರ ಶುಲ್ಕ ಕಡಿತವಾಗಲಿದ್ದು, ನಾನ್ ಕ್ಯಾಶ್ ಟ್ರಾನ್ಸಾಕ್ಷನ್ ಗಳಿಗೆ ಯಾವುದೇ ರೀತಿಯ ಶುಲ್ಕ ಕಡಿತವಾಗುವುದಿಲ್ಲ ಎಂದು ಆರ್ಬಿಐ ತಿಳಿಸಿದೆ.

ತಿಂಗಳಿಗೆ ಗರಿಷ್ಠ ಐದು(ಕೆಲವು ಬ್ಯಾಂಕುಗಳಲ್ಲಿ ಇನ್ನೂ ಕಡಿಮೆ) ಬಾರಿ ಮಾತ್ರವೇ ಉಚಿತ ಎಟಿಎಂ ಟ್ರಾನ್ಸಾಕ್ಷನ್ ಮಾಡಬಹುದಿತ್ತು. ಈ ಸಂದರ್ಭದಲ್ಲಿ ತಾಂತ್ರಿಕ ದೋಷದಿಂದ ಹಣ ಬಾರದೇ ಇದ್ದರೂ, ಅಥವಾ ಇನ್ಯಾವುದೇ ಟ್ರಾನ್ಸಾಕ್ಷನ್ ನಡೆಸಿದರೂ ಶುಲ್ಕ ಕಡಿತವಾಗುತ್ತಿತ್ತು. ಆದ್ದರಿಂದ ಒಂದೇ ಬಾರಿ ಹಣ ಡ್ರಾ ಮಾಡುವಾಗಲೇ ಹೆಚ್ಚಿನ ಮೊತ್ತಡ ಹಣ ಡ್ರಾ ಆಡಬೇಕಾದ ಅನಿವಾರ್ಯ ಸೃಷ್ಟಿಯಾಗಿತ್ತು.

ಗುಡ್ News : ಎಟಿಎಂನಲ್ಲಿ ಇನ್ಮುಂದೆ 'ನೋ ಕ್ಯಾಶ್' ಬೋರ್ಡ್ ಹಾಕುವ ಹಾಗಿಲ್ಲಗುಡ್ News : ಎಟಿಎಂನಲ್ಲಿ ಇನ್ಮುಂದೆ 'ನೋ ಕ್ಯಾಶ್' ಬೋರ್ಡ್ ಹಾಕುವ ಹಾಗಿಲ್ಲ

Non-cash Withdrawal Actions Wont Be Counted As Free ATM Transactions: RBI

ಇಂಥ ಸಮಸ್ಯೆಗಳನ್ನು ತಪ್ಪಿಸುವ ಸಲುವಾಗಿ ಕೇವಲ ಹಣ ಡ್ರಾ ಮಾಡುವ ಟ್ರಾನ್ಸಾಕ್ಷನ್ನಿಗೆ ಮಾತ್ರವೇ ಶುಲ್ಕ ಕಡಿತಗೊಳಿಸಲು ತೀರ್ಮಾನಿಸಲಾಗಿದೆ.

ಬ್ಯಾಂಕ್ ಎಟಿಎಂಗಳ ಬಳಿಯ ಭದ್ರತಾ ಸಿಬ್ಬಂದಿಯೇ ನಾಪತ್ತೆ; ಬ್ಯಾಂಕ್ ಗಳ ಕಾಸ್ಟ್ ಕಟ್ಟಿಂಗ್ಬ್ಯಾಂಕ್ ಎಟಿಎಂಗಳ ಬಳಿಯ ಭದ್ರತಾ ಸಿಬ್ಬಂದಿಯೇ ನಾಪತ್ತೆ; ಬ್ಯಾಂಕ್ ಗಳ ಕಾಸ್ಟ್ ಕಟ್ಟಿಂಗ್

ಎಟಿಎಂ ಮೂಲಕ ಚೆಕ್ ಬುಕ್ ರಿಕ್ವೆಸ್ಟ್ ಕಳಿಸುವುದು, ಟ್ಯಾಕ್ಸ್ ಕಟ್ಟುವುದು, ಅಥವಾ ನೀವು ಹಣವನ್ನು ಕಳಿಸುವುದು ಇತ್ಯಾದಿ ವ್ಯವಹಾರಗಳನ್ನೂ ಫ್ರಿ ಎಟಿಎಂ ಟ್ರಾನ್ಸಾಕ್ಷನ್ ಎಂದು ಪರಿಗಣಿಸುವುದರಿಂದ ಹಣ ಡ್ರಾ ಮಾಡದ ವ್ಯವಹಾರಕ್ಕೂ ಶುಲ್ಕ ನೀಡಿದಂತಾಗುತ್ತದೆ. ಆದ್ದರಿಂದ ಇವುಗಳನ್ನು ಈ ಪಟ್ಟಿಗೆ ಸೇರಿಸಲಾಗುವುದಿಲ್ಲ ಎಂದು ಆರ್ಬಿಐ ಹೇಳಿದೆ. ಈ ಮೂಲಕ ಎಟಿಎಂ ಬಳಕೆದಾರರಿಗೆ ಸಿಹಿಸುದ್ದಿ ನೀಡಿದೆ.

English summary
In a relief to ATM users, the Reserve Bank of India (RBI) on Wednesday told banks that non-cash withdrawal transactions such as balance enquiry, cheque book request, payment of taxes and funds transfer cannot be counted under 'free ATM transactions'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X